ಕಿತ್ತೂರು ಚೆನ್ನಮ್ಮ ಪ್ರತಿಮೆ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ
ಸ್ವಚ್ಛ ಮಾಡಿ ಬಣ್ಣ ಹಚ್ಚುವುದು ಹಾಗೂ ಕಬ್ಬಿಣದ ಏಣಿಯ ನಿರ್ಮಿಸುವ ಕುರಿತಾಗಿ ಮನವಿ
ಬೆಳಗಾವಿ : ಬೆಳಗಾವಿಯ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ 1960 ರಲ್ಲಿ ಸ್ಥಾಪಿಸಲ್ಪಟ್ಟ ವೀರರಾಣಿ ಕಿತ್ತೂರು ರಾಣಿಚೆನ್ನಮ್ಮಳ ಪ್ರತಿಮೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಹೊಸದಾಗಿ ಬಣ್ಣ ಹಚ್ಚುವುದು
ಹಾಗೂ ಈ ಪ್ರತಿಮೆಗೆ ಹೂವಿನ ಹಾರ ಹಾಕಲು ಸರಿಯಾದ ವ್ಯವಸ್ಥೆ ಇಲ್ಲ ಕಬ್ಬಿಣದಿಂದ
ತಯಾರಿಸಿದ ಏಣಿಯನ್ನು ಶಾಶ್ವತ ಪರಿಹಾರಕ್ಕಾಗಿ
ಹಾಗೂ ಕೊರ್ಟ ಕಂಪೌಂಡ್ ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು
ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಹೊಸದಾಗಿ ಬಣ್ಣ ಹಚ್ಚುವುದು ಹಾಗೂ ಗ್ಯಾಸ್ ಮೂಲಕ
ಪ್ರತಿಮೆ ಮೇಲಿನ ಬಣ್ಣವನ್ನು ಸುಟ್ಟು ತೆಗೆದು ಮನಃ ಬಣ್ಣವನ್ನು ಹಚ್ಚುವುದಕ್ಕೆ ಆದಷ್ಟು ಬೇಗನೆ
ನವೆಂಬರ್ 1 ರ ಕರ್ನಾಟಕ ರಾಜ್ಯೋತ್ಸವದ ಒಳಗಾಗಿ ಕೆಲಸ ಮಾಡಿಸಲು ಆಯುಕ್ತರು ಮಹಾನಗರ ಸಭೆ
ಬೆಳಗಾವಿ ಇವರಿಗೆ ನೃಪತುಂಗ ಯುವಕ ಸಂಘ ,ಬೆಳಗಾವಿ ಇವರು ಅದ್ಯಕ್ಷ ಸಾಗರ ಬೊರಗಲ್ಲೆ ಇವರ ನೇತೃತ್ವದಲ್ಲಿ ಮನವಿ ನೀಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ,
ಜಿನೇಶ ಅಪ್ಪಣ್ಣವರ ಸದಸ್ಯರಾದ,ಒಂಕಾರ ಮೊಳೆ,
ನಿತೀನ ಮುಕರೆ,ಎರೇಂದ್ರ ಗೊಬರಿ,ಅಮೀತ ಅನಗೋಳಕರ,ಆನಂದ ಹುಲಿಮಣಿ,ಆದರ್ಶ ಅನಗೋಳ,ರಜತ ಅಂಕಲೆ,
ಸಾಮ್ರಾಟ ಚೌಗಲೆ,
ವಿಶಾಲ ಅನಗೋಳಕರ ಮತ್ತು
ಆನಂದ ಹುಲಬತ್ತೆ ಉಪಸ್ಥಿತರಿದ್ದರು.