Breaking News

ಗೋ ಮಾತೆಗೆ ಪೂಜೆ ಸಲ್ಲಿಸಿದ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.

Spread the love

ಗೋ ಮಾತೆಗೆ ಪೂಜೆ ಸಲ್ಲಿಸಿದ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.

ಗೋಕಾಕ್- ದೀಪಾವಳಿ ಬಲಿ ಪಾಡ್ಯಮಿ ದಿನವಾದ ಇಂದು ಶುಕ್ರವಾರದಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿಯಲ್ಲಿ ಗೋ ಮಾತೆಗೆ ಪೂಜೆ ಸಲ್ಲಿಸಿದರು.
ಅರಭಾವಿಯ ಬಲಭೀಮ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ಗೋವುಗಳಿಗೆ ಹಾರ ಹಾಕಿ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಗೋವು ಹಿಂದೂ ಸನಾತನ ಧರ್ಮದಲ್ಲಿ ಕಾಮಧೇನು ದೈವಿ ಸ್ವರೂಪಿಯಾಗಿದೆ. ಅಲ್ಲದೇ ಗೋವು ತನ್ನದೇಯಾದ ವಿಶೇಷ ಇತಿಹಾಸವನ್ನು ಹೊಂದಿದೆ. ಮನೆಗೊಂದರಂತೆ ಪ್ರತಿ ಕುಟುಂಬಗಳು ಗೋವು ಸಾಕಬೇಕು ಎಂದು ಹೇಳಿದರು.
ಬೆಳಕಿನ ಹಬ್ಬ ದೀಪಾವಳಿಯ ಈ ಶುಭ ಸಂದರ್ಭದಲ್ಲಿ ಗೋವಿನ ಪೂಜೆಗೆ ವಿಶೇಷ ಮಹತ್ವವಿದೆ. ಕಾರ್ತಿಕ ಪಾಡ್ಯಮಿದಂದು ಕೃಷ್ಣ ಪರಮಾತ್ಮನು ಇಂದ್ರನನ್ನು ಸೋಲಿಸಿದ ದಿನವೂ ಹೌದು. ಇಂದ್ರನ ದಾಳಿಯಿಂದ ತನ್ನ ಗೋವುಗಳನ್ನು ರಕ್ಷಿಸಲು ಗೋವರ್ಧನ ಗಿರಿಯನ್ನೇತ್ತಿದ ದಿನವೂ ಹೌದು ಎಂದು ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.

ಪ್ರತಿ ಗ್ರಾಮ ಮಟ್ಟದಲ್ಲಿಯೂ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳಲ್ಲಿ ಗೋವುಗಳ ಪೂಜೆಯನ್ನು ಮಾಡುವಂತೆ ಈ ಬಾರಿ ಸರಕಾರ ಸೂಚಿಸಿದೆ ಎಂದು ತಿಳಿಸಿರುವ ಅವರು, ಗೋ ಮಾತೆಗೆ ಎಲ್ಲರೂ ನಮಿಸೋಣವೆಂದು ಹೇಳಿದರು.
ಈ ಸಂದರ್ಭದಲ್ಲಿ ಅರಭಾವಿ ಬಿಜೆಪಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಜಿಲ್ಲಾ ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷ ಬಸವರಾಜ ಮಾಳೇದವರ, ಮುಖಂಡರಾದ ಶಂಕರ ಬಿಲಕುಂದಿ, ಮುತ್ತೆಪ್ಪ ಜಲ್ಲಿ, ನಿಂಗಪ್ಪ ಇಳಗೇರಿ, ರಾಯಪ್ಪ ಬಂಡಿವಡ್ಡರ, ಭೀಮಶೆಪ್ಪ ಹಳ್ಳೂರ, ಅಡಿವೆಪ್ಪ ಬಿಲಕುಂದಿ, ಕುಮಾರ ಪೂಜೇರಿ, ಗಣಪತಿ ಇಳಿಗೇರ, ಸಿದ್ದು ಕಂಕಣವಾಡಿ, ಯಲ್ಲಾಲಿಂಗ ವಾಳದ, ಪ್ರಮೋದ ನುಗ್ಗಾನಟ್ಟಿ, ಕೃಷ್ಣಾ ಬಂಡಿವಡ್ಡರ, ಅರಭಾವಿ ಪ.ಪಂ. ಸದಸ್ಯರು, ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love

About Fast9 News

Check Also

ಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ

Spread the loveಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ ಗೋಕಾಕ- ಹಿಂದುಳಿದ ಹಣಬರ ಸಮಾಜವು ಸಾಮಾಜಿಕವಾಗಿ, …

Leave a Reply

Your email address will not be published. Required fields are marked *