Breaking News

ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಶೃತಿ – ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿನಂದನೆ*

Spread the love

*ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಶೃತಿ – ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿನಂದನೆ

ಅರಭಾವಿ ಮಠ(ತಾ.ಮೂಡಲಗಿ)-
ಇಲ್ಲಿಯ ಜಕ್ಕಾನಟ್ಟಿ ಮನೆತನದ ಶೃತಿ ಶಿವಾನಂದ ಯರಗಟ್ಟಿ ಇವರು ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೆ ೩೬೨ ರ್ಯಾಂಕ್ ಪಡೆಯುವ ಮೂಲಕ ಅರಭಾವಿ ನಾಡಿಗೆ ಕೀರ್ತಿ ತಂದಿದ್ದಾರೆ.
ಮೊದಲ ಪ್ರಯತ್ನದಲ್ಲಿಯೇ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಅರಭಾವಿ ಹೆಸರನ್ನು ದೇಶದ ಭೂಪಟದಲ್ಲಿ ಬರುವಂತೆ ಮಾಡಿರುವ ಹೆಗ್ಗಳಿಕೆ ಇವರದ್ದಾಗಿದೆ.
ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಸ- ೩೬೨ ನೇ ರ್ಯಾಂಕ್ ಗಳಿಸುವ ಮೂಲಕ ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಅರಭಾವಿ ನೆಲದ ಶೃತಿ ಶಿ. ಯರಗಟ್ಟಿ ಸಾಧನೆಗೆ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಶೃತಿ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದಿರುವ ವಿಷಯ ತಿಳಿದು ಮನಸ್ಸಿಗೆ ಸಂತಸವಾಯಿತು. ಸತತ ಅಭ್ಯಾಸ, ಕಠಿಣ ಪರಿಶ್ರಮದಿಂದ ಈ ಪರೀಕ್ಷೆಯನ್ನು ಎದುರಿಸಿ ಅದರಲ್ಲಿ ಮೊದಲ ಪ್ರಯತ್ನದಲ್ಲಿಯೇ ಐಎಎಸ್ ಪಾಸಾಗಿರುವುದು ಶೃತಿ ಅವರ ಸಾಧನೆಗೆ ಎಷ್ಟು ಅಭಿನಂದನೆ ಹೇಳಿದರೂ ಸಾಲದು. ಅತೀ ದೊಡ್ಡ ಸಾಧನೆಯನ್ನು ಮಾಡಿದ್ದಾರೆ ಎಂದು ಮುಕ್ತ ಕಂಠದಿಂದ ಶೃತಿ ಅವರ ಸಾಧನೆಗೆ ಶ್ಲಾಘಿಸಿದ್ದಾರೆ.
ಶೃತಿ ಅವರ ತಂದೆ ಶಿವಾನಂದ ಯರಗಟ್ಟಿ ಅವರು ನಿವೃತ್ತ ಶಿಕ್ಷಕರಾಗಿದ್ದಾರೆ.
ಶೃತಿ ಅವರು ಹುಕ್ಕೇರಿ ತಾಲೂಕಿನ ಶಿರಢಾಣದ ಗಂಗಾಧರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಕಲಿತು ಮೊದಲ ರ್ಯಾಂಕ್ ಗಿಟ್ಟಿಸಿಕೊಂಡ ನಂತರ ಧಾರವಾಡ ಕೆಸಿಡಿ ಕಾಲೇಜಿನಲ್ಲಿ ಪಿಯುಸಿ ಕಲಿತು ಅದರಲ್ಲಿಯೂ ಪ್ರಥಮ ಸ್ಥಾನ ಪಡೆದುಕೊಂಡರು.
ನಂತರ ಪದವಿಯನ್ನು ಪೂರೈಸಿ ಅಲ್ಲಯೂ ೭ ಬಂಗಾರದ ಪದಕಗಳನ್ನು ಗಳಿಸಿರುವ ಹೆಗ್ಗಳಿಕೆ ಶೃತಿ ಯರಗಟ್ಟಿ ಅವರದ್ದು.
ಇವರ ಸಾಧನೆಗೆ ಶ್ರೀ ಗಳು ಸೇರಿದಂತೆ ತಾಲೂಕಿನ ಅನೇಕ ಗಣ್ಯರು ಅಭಿನಂದನೆ ಗಳ ಸುರಿಮಳೆ ವ್ಯಕ್ತವಾಗುತ್ತಿದೆ.


Spread the love

About Fast9 News

Check Also

ಪರಸ್ಪರ ಸಹಕಾರ ಹಾಗೂ ಒಗ್ಗಟ್ಟಿನಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯವಿದೆ: ಶಾಸಕ ಬಾಲಚಂದ್ರ ಜಾರಕಿಹೋಳಿ

Spread the loveಪರಸ್ಪರ ಸಹಕಾರ ಹಾಗೂ ಒಗ್ಗಟ್ಟಿನಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯವಿದೆ: ಶಾಸಕ ಬಾಲಚಂದ್ರ ಜಾರಕಿಹೋಳಿ ಗೋಕಾಕ- ಜಿಲ್ಲೆಯ …

Leave a Reply

Your email address will not be published. Required fields are marked *