Breaking News

ಹಿರಿಯ ನಟಿ ಡಾ. ಲೀಲಾವತಿ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ*

Spread the love

*ಹಿರಿಯ ನಟಿ ಡಾ. ಲೀಲಾವತಿ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ*

*ಗೋಕಾಕ್*-ಸ್ಯಾಂಡಲ್ ವುಡ್ ನ ಹಿರಿಯ ನಟಿ ಡಾ. ಲೀಲಾವತಿ ಅವರ ನಿಧನಕ್ಕೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಂತಾಪ ಸೂಚಿಸಿದ್ದಾರೆ.ಲೀಲಾವತಿ ಅವರ ನಿಧನದಿಂದ ಚಿತ್ರೋದ್ಯಮವೂ ಸೇರಿದಂತೆ ಇಡೀ ನಾಡೇ ಬಡವಾಗಿದೆ. ಹಲವು ವರ್ಷಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ ಅವರು, ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು.ಬಹುಭಾಷೆ ನಟಿಯಾಗಿ ಗುರುತಿಸಿಕೊಂಡಿದ್ದ ಅವರು, ಇತ್ತೀಚೆಗೆ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ‌ಸಮಾಜಸೇವೆಯಲ್ಲಿಯೂ ಹೆಸರುವಾಸಿಯಾಗಿದ್ದರು.ಡಾ.ಲೀಲಾವತಿಯವರ ಆತ್ಮಕ್ಕೆ ದೇವರು ಚಿರಶಾಂತಿಯನ್ನೀಡಲೆಂದು ಪ್ರಾರ್ಥಿಸಿರುವ ಅವರು, ದಿವಂಗತರ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದ್ದಾರೆ.


Spread the love

About Fast9 News

Check Also

ಮೂಲಭೂತ ಸೌಕರ್ಯಗಳ ಬೇಡಿಕೆ ಈಡೆರಸಲು ಸರಕಾರದ ಬಳಿ ಹಣವಿಲ್ಲ: ಶಾಸಕ ಬಾಲಚಂದ್ರ ಜಾರಕಿಹೋಳಿ ಅಸಮಾಧಾನ

Spread the loveಮೂಲಭೂತ ಸೌಕರ್ಯಗಳ ಬೇಡಿಕೆ ಈಡೆರಸಲು ಸರಕಾರದ ಬಳಿ ಹಣವಿಲ್ಲ: ಶಾಸಕ ಬಾಲಚಂದ್ರ ಜಾರಕಿಹೋಳಿ ಅಸಮಾಧಾನ ಅರಭಾವಿ – …

Leave a Reply

Your email address will not be published. Required fields are marked *