*ಟಿಎಪಿಸಿಎಂಎಸ್ ಗೆ ಅಶೋಕ ನಾಯಿಕ ಅಧ್ಯಕ್ಷ*
*ವಿಠ್ಠಲ ಪಾಟೀಲ ಉಪಾಧ್ಯಕ್ಷ ರಾಗಿ ಪುನರಾಯ್ಕೆ*

ಗೋಕಾಕ ಮಾ 3 : ಗೋಕಾಕ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಅಶೋಕ ನಾಯಿಕ ಹಾಗೂ ಉಪಾಧ್ಯಕ್ಷರಾಗಿ ವಿಠ್ಠಲ ಪಾಟೀಲ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರವಿವಾರದಂದು ಸಂಘದ ಸಭಾ ಗೃಹದಲ್ಲಿ ಜರುಗಿದ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಎರಡೂ ಸ್ಥಾನಗಳಿಗೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿಯಾಗಿದ್ದ ಗೋಖಲೆ ಪ್ರಕಟಿಸಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಮಹಾಂತೇಶ ಅವರಗೋಳ, ಮುತ್ತೆಪ್ಪ ಝಲ್ಲಿ, ಸಿದ್ದಪ್ಪ ಹಮ್ಮನವರ, ಸುಭಾಷ ಢವಳೇಶ್ವರ, ಗಂಗವ್ವ ಜೈನ್, ಲೂಬಾನಾ ದೇಸಾಯಿ, ವೆಂಕನಗೌಡ ಪಾಟೀಲ್, ಬಸಗೌಡ ಪಾಟೀಲ, ಪ್ರಭಾಕರ ಬಂಗೆನ್ನವರ , ಸುರೇಶ ಗುಡ್ಡಕಾರ ಹಾಗೂ ಮುಖಂಡರು ಉಪಸ್ಥಿತರಿದ್ದರು. ಡಾ.ರಾಜೇಂದ್ರ ಸಣ್ಣಕ್ಕಿ, ಲಕ್ಕಪ್ಪ ಲೋಕೂರಿ, ನಿಂಗಣ್ಣ ಕುರಬೇಟ ಸೇರಿದಂತೆ ಅನೇಕರು ನೂತನವಾಗಿ ಆಯ್ಕೆಯಾಗಿರುವ ಅಶೋಕ ನಾಯಿಕ ಮತ್ತು ವಿಠ್ಠಲ ಪಾಟೀಲ ಅವರನ್ನು ಅಭಿನಂದಿಸಿದರು.
ಜಾರಕಿಹೊಳಿ ಸಹೋದರರ ಸಮರ್ಥ ನೇತೃತ್ವದಲ್ಲಿ ಟಿಎಪಿಸಿಎಂಎಸ್ ಅಭಿವೃದ್ಧಿಗೆ ಶ್ರಮಿಸುವುದಾಗಿ ಅಧ್ಯಕ್ಷ ಅಶೋಕ ನಾಯಿಕ ಹೇಳಿದರು.
Fast9 Latest Kannada News