Breaking News

ಶಿಂದಿಕುರಬೇಟ: ಹರಳಯ್ಯನವರ ಹಾಗೂ ಬುದ್ಧ,ಬಸವ,ಅಂಬೇಡ್ಕರರ ಸಪ್ತಾಹ ಸಮಾರಂಭ

Spread the love

ಶಿಂದಿಕುರಬೇಟ: ಹರಳಯ್ಯನವರ ಹಾಗೂ ಬುದ್ಧ,ಬಸವ,ಅಂಬೇಡ್ಕರರ ಸಪ್ತಾಹ ಸಮಾರಂಭ

ಘಟಪ್ರಭಾ: ಸಮೀಪದ ಶಿಂದಿಕುರಬೇಟ ಗ್ರಾಮದ ಶ್ರೀ ಶಿವಶರಣ ಹರಳಯ್ಯನವರ ಹಾಗೂ ಬುದ್ಧ,ಬಸವ,ಅಂಬೇಡಕರರ 82 ನೇ ವಾರ್ಷಿಕೋತ್ಸವದ ಸಪ್ತಾಹ ಸಮಾರಂಭವು ದಿ.3 ಮತ್ತು 4 ರಂದು ಎರಡು ದಿನಗಳವರೆಗೆ ನಡೆಯಲಿದೆ.
ದಿ.3 ರಂದು ಬೆಳಿಗ್ಗೆ ಸೂರ್ಯೋದಯದೊಂದಿಗೆ ಶ್ರೀ ಶಿವಶರಣ ಹರಳಯ್ಯನವರ ಹಾಗೂ ಬುದ್ಧ,ಬಸವ,ಅಂಬೇಡಕರರ, ಸದ್ಗುರು ಸಿದ್ಧಾರೂಢರ ಮೂರ್ತಿಗಳಿಗೆ ಅಭಿಷೇಕ ಕಾರ್ಯಕ್ರಮವು ಸಮಾಜದ ವತಿಯಿಂದ ಗುರುಗಳಾದ ಚೇತನ ಹಿರೇಮಠ ಇವರಿಂದ ಜರುಗಲಿದೆ. ಸಂಜೆ 5 ಗಂಟೆಗೆ ಹರಳಯ್ಯನವರ ಸಮಾಜದ ವಿದ್ಯಾರ್ಥಿಗಳಿಂದ ಹಾಗೂ ಗಾನಕೋಗಿಲೆ ಅರಭಾವಿಮಠದ ಬಸವರಾಜ ಘೀವಾರಿ ಹಾಗೂ ಸಂಗಡಿಗರಿಂದ ಭಕ್ತಿ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದ್ದು ರಾತ್ರಿ ವಿವಿಧ ಗ್ರಾಮಗಳ ಭಜನಾ ತಂಡದವರಿಂದ ಭಜನೆ ಕಾರ್ಯಕ್ರಮ ಜರುಗಲಿದೆ.
ದಿ. 4 ರಂದು ಮುಂಜಾನೆ ಶ್ರೀ ಶಿವಶರಣ ಹರಳಯ್ಯನವರ ಹಾಗೂ ಬುದ್ಧ,ಬಸವ,ಅಂಬೇಡಕರರ ಭಾವಚಿತ್ರದ ಮೂಲಕ ಫಲ್ಲಕ್ಕಿ ಉತ್ಸವ ಹಾಗೂ ಪ್ರವಚನ ಕಾರ್ಯಕ್ರಮ ಜರುಗಲಿದ್ದು ಸಾನಿಧ್ಯವನ್ನು ಹುಕ್ಕೇರಿಯ ಗುರುಶಾಂತೇಶ್ವರ ಮಠದ ಪೂಜ್ಯ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಜಿ, ಝಾಂಗಟಿಹಾಳ ಯಲ್ಲಾಲಿಂಗ ಮಠದ ಚಂದ್ರಶೇಖರ ಸ್ವಾಮಿಜಿ, ಕೃಪಾನಂದ ಸ್ವಾಮಿಜಿ, ಕೊಟಬಾಗಿಯ ಪ್ರಭುದೇವರು, ಹುಣಶ್ಯಾಳ ಪಿಜಿ ಶ್ರೀ ನಿಜಗುಣ ದೇವರು, ರಾಯಪ್ಪ ಮಾಡಲಗಿ, ದಯಾನಂದ ಬೆಳಗಾವಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಗ್ರಾ.ಪಂ ಸದಸ್ಯ ಭೀಮಶಿ ಬಿರನಾಳಿ, ಹರಳಯ್ಯ ಸಮಾಜದ ರಾಜ್ಯ ನಿರ್ದೇಶಕ ಶಂಕರ ಬೆಳಗಲಿ ಆಗಮಿಸುವರು. ನಂತರ ಮಹಾಪ್ರಸಾದ ಜರುಗಲಿದೆ ಎಂದು ಕಮೀಟಿ ಕಾರ್ಯದರ್ಶಿ ವಿಠ್ಠಲ ಕರೋಶಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Spread the love

About Fast9 News

Check Also

ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಪರಿಹಾರ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ*

Spread the love*ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಪರಿಹಾರ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ* *ಗೋಕಾಕ*: ರೈತ ಬಾಂಧವರು ಸಾಲಕ್ಕೆ …

Leave a Reply

Your email address will not be published. Required fields are marked *