Breaking News

ಗಟ್ಟಿಯಾಗಿ ಬಿಜೆಪಿಗೆ ವೋಟ್ ಮಾಡಿ, ಕಾಂಗ್ರೆಸ್ಸಿಗರ ಸುಳ್ಳು ವದಂತಿಗಳನ್ನು ನಂಬಬೇಡಿ- ಶಾಸಕ ಬಾಲಚಂದ್ರ ಜಾರಕಿಹೊಳಿ*

Spread the love

*ಗಟ್ಟಿಯಾಗಿ ಬಿಜೆಪಿಗೆ ವೋಟ್ ಮಾಡಿ, ಕಾಂಗ್ರೆಸ್ಸಿಗರ ಸುಳ್ಳು ವದಂತಿಗಳನ್ನು ನಂಬಬೇಡಿ- ಶಾಸಕ ಬಾಲಚಂದ್ರ ಜಾರಕಿಹೊಳಿ*

*ಬೆಳಗಾವಿಗೆ ಬೆಂಗಳೂರು ಸ್ಥಾನಮಾನಕ್ಕೆ ಪ್ರಯತ್ನ- ಜಗದೀಶ ಶೆಟ್ಟರ್*

*ಮೂಡಲಗಿಯಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಶೆಟ್ಟರ್ ಪರ ಮತ ಯಾಚಿಸಿದ ಮುಖಂಡರು*

ಮೂಡಲಗಿ: ಕಾಂಗ್ರೆಸ್ಸಿಗರು ನನ್ನ ವಿರುದ್ಧವೇ ಸುಳ್ಳು ಪ್ರಚಾರ ಮಾಡುತ್ತಿದ್ದು, ಅವುಗಳನ್ನು ಬದಿಗೊತ್ತಿ ರಾಷ್ಟ್ರದ ಭವಿಷ್ಯದ ಹಿತದೃಷ್ಟಿಯಿಂದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರಿಗೆ ಮತ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಶಾಸಕ ಹಾಗೂ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಮತದಾರರರಲ್ಲಿ ಕೋರಿಕೊಂಡರು.
ಬುಧವಾರ ಸಂಜೆ ಪಟ್ಟಣದ ಬಸವ ಮಂಟಪದಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತ ಯಾಚಿಸಿ ಮಾತನಾಡಿದ ಅವರು, ಕಾಂಗ್ರೇಸ್‍ನ ಅಪಪ್ರಚಾರಗಳಿಗೆ ಕಿವಿಗೊಡಬೇಡಿ ಎಂದು ಹೇಳಿದರು,
ಕಳೆದ ಎ.28 ರಂದು ಬೆಳಗಾವಿಯಲ್ಲಿ ಜರುಗಿದ ಪ್ರಧಾನಿಗಳ ಚುನಾವಣಾ ರ್ಯಾಲಿಯಲ್ಲಿ ಅರಭಾವಿ ಮತಕ್ಷೇತ್ರದ ಕಾರ್ಯಕರ್ತರು ಗೈರಾಗಿರುವದನ್ನೇ ಬಂಡವಾಳ ಮಾಡಿಕೊಂಡು ಅಪಪ್ರಚಾರವನ್ನು ನಮ್ಮ ವಿರೋಧಿಗಳು ಮಾಡುತ್ತಿದ್ದಾರೆ. ಸದರಿ ಮೋದಿಯವರ ಕಾರ್ಯಕ್ರಮ ಸಂಜೆ ಸಮಯದಲ್ಲಿ ನಿಗದಿಯಾಗಿತ್ತು. ಹೀಗಾಗಿ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ನಮ್ಮ ಕಾರ್ಯಕರ್ತರಿಗೆ ಮೊದಲೇ ಹೇಳಲಾಗಿತ್ತು. ಆದರೆ ಕಾರ್ಯಕ್ರಮದ ವೇಳಾಪಟ್ಟಿಯು ಸಂಜೆಯ ಬದಲಿಗೆ ಮುಂಜಾನೆ 10 ಗಂಟೆಗೆ ನಿಗದಿಯಾಗಿತ್ತು. ನಮ್ಮ ಕಾರ್ಯಕರ್ತರಿಗೆ ಹೋಗಲು ಅನಾನುಕೂಲವಾಗಿದ್ದರಿಂದ ಈ ನಿರ್ಧಾರವನ್ನು ಕೈಗೊಳ್ಳಲಾಯಿತು. ಇದನ್ನು ಕಾಂಗ್ರೆಸ್ ಪಕ್ಷದವರು ಸುಳ್ಳು ವದಂತಿಗಳನ್ನು ಹಬ್ಬಿಸಿಕೊಂಡು ತಿರುಗಾಡುತ್ತಿದ್ದಾರೆ. ನಮ್ಮ ಕಾರ್ಯಕರ್ತರಲ್ಲಿ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ವಿರೋಧಿಗಳಿಗೆ ಹೇಳಲು ಯಾವುದೇ ಸ್ಪಷ್ಟ ವಿಚಾರಗಳಿಲ್ಲ. ಇವುಗಳ ಕಡೆಗೆ ಗಮನ ನೀಡದೇ ಮೇ-7 ರಂದು ನಡೆಯುವ ಚುನಾವಣೆಯಲ್ಲಿ ಹಿಂದೆ-ಮುಂದೆ ನೋಡದೇ ಗಟ್ಟಿಯಾಗಿ ಬಿಜೆಪಿ ಮತ ನೀಡುವಂತೆ ಕರೆ ನೀಡಿದರು.
ಜಗದೀಶ ಶೆಟ್ಟರ್ ಅವರದ್ದು ಉತ್ತಮ ನಡುವಳಿಕೆಯಾಗಿದೆ. ಸಿಟ್ಟಂತೂ ಅವರ ಜೀವನದಲ್ಲಿಯೇ ಬರುವುದಿಲ್ಲ. ಸೌಜನ್ಯ ಸ್ವಭಾವದವರಾಗಿದ್ದಾರೆ. ಇವರಿಗೆ ಮತ ಕೊಟ್ಟರೆ ಮೋದಿಯವರಿಗೆ ನೀಡಿದಂತಾಗುತ್ತದೆ. ಸಂಸತ್ತಿಗೆ ಆಯ್ಕೆಯಾಗಿ ಹೋದರೆ ನಮ್ಮದೇ ಸರಕಾರವಿರುತ್ತದೆ. ಶೆಟ್ಟರ್ ಅವರ ಅನುಭವವನ್ನು ಪಡೆದು ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಬಹುದು. ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಶೆಟ್ಟರ್ ಅವರು ನಮ್ಮ ಬೆಳಗಾವಿಯಿಂದ ಸ್ಪರ್ಧೆ ಮಾಡಿರುವುದು ನಮ್ಮ ಅದೃಷ್ಟವಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಮತ ಯಾಚಿಸಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು, ಮೂಡಲಗಿ ಇತಿಹಾಸದಲ್ಲಿ ದಾಖಲೆ ಬರೆಯುವ ಸಮಾವೇಶ ಇದಾಗಿದೆ. ಈ ದೇಶದ ಭವಿಷ್ಯ ನರೇಂದ್ರ ಮೋದಿ ಮೇಲೆ ನಿಂತಿದೆ. ಮೋದಿ ಅವರಂತಹ ನಾಯಕ ನಮಗೆ ಸಿಕ್ಕಿದ್ದು ನಮ್ಮ ಸೌಭಾಗ್ಯ. ನರೇಂದ್ರ ಮೋದಿ ನಮ್ಮ ನಾಯಕ ಮುಂದಿನ ಪ್ರಧಾನಿ ಆದರೆ, ಇಂಡಿಯಾ ಮೈತ್ರಿಕೂಟದ ನಾಯಕ ಯಾರು..? ಎಂದು ಪ್ರಶ್ನಿಸಿದರು. ನಮಗೆ ನಿಜವಾದ ಗ್ಯಾರಂಟಿ ದೇಶದ ರಕ್ಷಣೆ, ದೇಶದ ಸುಭದ್ರತೆ, ದೇಶದ ಗೌರವ ಇದುವೇ ಮೋದಿಯವರ ಗ್ಯಾರಂಟಿ ಎಂದು ತಿಳಿಸಿದರು.
ಕೇಂದ್ರದ ಅನೇಕ ಯೋಜನೆಗಳು ಎಲ್ಲಾ ವರ್ಗದವರಿಗೆ ಸಿಗುತ್ತಿದೆ. ಬಿಜೆಪಿ ಸರ್ಕಾರ ಎಲ್ಲಾ ವರ್ಗದವರಿಗೆ ಎಲ್ಲಾ ಯೋಜನೆಗಳು ನೀಡಿದೆ. ಕಾಂಗ್ರೆಸ್ ಅಲ್ಪಸಂಖ್ಯಾತರ ತುಷ್ಠಿಕರಣ ಮಾಡುತ್ತಿದೆ. ವಿಧಾನ ಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ ಅಂದರೂ ಅದನ್ನು ಖಂಡಿಸುವ ಕೆಲಸ ಕಾಂಗ್ರೆಸ್ ಮಾಡಲಿಲ್ಲ. ನಾನು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆಯಾದ ನಂತರ ಬೆಳಗಾವಿಯನ್ನು ಸಾಕಷ್ಟು ಅಭಿವೃದ್ಧಿ ಮಾಡುತ್ತೇನೆ. ಬೆಳಗಾವಿಯನ್ನು ಬೆಂಗಳೂರಿನ ಹಾಗೆ ರಾಜ್ಯದ ಎರಡನೇ ರಾಜಧಾನಿಯನ್ನಾಗಿ ಮಾಡುತ್ತೇನೆ ಎಂದು ಪ್ರಮಾಣ ಮಾಡಿದರು.
ಈ ಸಂದರ್ಭದಲ್ಲಿ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ, ಮಂಡಳ ಅಧ್ಯಕ್ಷ ಮಹಾದೇವ ಶೆಕ್ಕಿ, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಪ್ರಕಾಶ ಕಾಳಶೆಟ್ಟಿ, ಸೇರಿದಂತೆ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಪರಸಪ್ಪ ಬಬಲಿ ಕಾರ್ಯಕ್ರಮ ನಿರೂಪಿಸಿದರು.


Spread the love

About Fast9 News

Check Also

ಕೊಣ್ಣೂರ ಚೆಕ್‌ ಪೊಸ್ಟಿಗೆ ತಹಸಿಲ್ದಾರ ದಿಢೀರ ಬೇಟಿ,ಪರಿಶೀಲನೆ.

Spread the loveಕೊಣ್ಣೂರ ಚೆಕ್‌ ಪೊಸ್ಟಿಗೆ ತಹಸಿಲ್ದಾರ ದಿಢೀರ ಬೇಟಿ,ಪರಿಶೀಲನೆ. ಗೋಕಾಕ : ಬೆಳಗಾವಿ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಕೊಣ್ಣೂರ …

Leave a Reply

Your email address will not be published. Required fields are marked *