Breaking News

ಸಾರ್ವಜನಿಕರ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು : ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love

ಸಾರ್ವಜನಿಕರ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು : ಶಾಸಕ ಬಾಲಚಂದ್ರ ಜಾರಕಿಹೊಳಿ

*ಮಾರ್ಚ 28 ರಂದು ಯಾದವಾಡ ಜಿಪಂ ಕ್ಷೇತ್ರದ ಪ್ರಮುಖರ ಸಭೆ ನಡೆಸಿದ ಬಾಲಚಂದ್ರ ಜಾರಕಿಹೊಳಿ*
*ಮೂಡಲಗಿ*: ಕಳೆದ 19 ವರ್ಷಗಳಿಂದ ಅರಭಾವಿ ಕ್ಷೇತ್ರದಲ್ಲಿ ಜಾತ್ಯಾತೀತ ಮತ್ತು ಪಕ್ಷಾತೀತವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಕಳೆದ ಮಂಗಳವಾರ(ಮಾ.28)ದಂದು ಮುಂಜಾನೆ ತಾಲೂಕಿನ ಯಾದವಾಡ ಪಟ್ಟಣದಲ್ಲಿ ಯಾದವಾಡ ಜಿಪಂ ಕ್ಷೇತ್ರದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ಯಾವ ತಾರತಮ್ಯವೂ ಮಾಡಿಲ್ಲವೆಂದು ತಿಳಿಸಿದರು.
ಯಾದವಾಡ ಜಿಲ್ಲಾ ಪಂಚಾಯತಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತಿದ್ದೇನೆ. ಸಾರ್ವಜನಿಕರಿಗೆ ಅಗತ್ಯವಿರುವ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದೇನೆ. ಕುಡಿಯುವ ನೀರು, ರಸ್ತೆಗಳ ನಿರ್ಮಾಣ, ಶೌಚಾಲಯಗಳು, ಸಾರಿಗೆ ಸಂಪರ್ಕ, ಆರೋಗ್ಯ, ನೀರಾವರಿ, ಶಿಕ್ಷಣ ಮುಂತಾದ ಕ್ಷೇತ್ರಗಳಿಗೆ ಹೆಚ್ಚು ಒತ್ತು ನೀಡಿದ್ದೇನೆ. ಜೊತೆಗೆ ಎಲ್ಲ ಧರ್ಮ ಮತ್ತು ವಿವಿಧ ಸಮುದಾಯಗಳಿಗೆ ಅಗತ್ಯವಿರುವ ದೇವಸ್ಥಾನ, ಮಠ-ಮಂದಿರಗಳಿಗೆ ಕೈಲಾದಷ್ಟು ಸಹಾಯ ನೀಡುವ ಮೂಲಕ ಧಾರ್ಮಿಕ ಕ್ಷೇತ್ರಕ್ಕೆ ನನ್ನದೇಯಾದ ಕೊಡುಗೆಯನ್ನು ನೀಡಿದ್ದೇನೆ. ಯಾದವಾಡ ಪಟ್ಟಣವು ಔದ್ಯೋಗಿಕವಾಗಿ ಹೆಚ್ಚೆಚ್ಚು ಬೆಳೆಯುತ್ತಿರುವುದರಿಂದ ಈ ಭಾಗದಲ್ಲಿ ಕಾರ್ಖಾನೆಗಳಲ್ಲಿ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡಲಾಗಿದೆ ಎಂದು ಹೇಳಿದರು.
ಯಾದವಾಡ ಜಿಪಂ ಕ್ಷೇತ್ರ ಮೊದಲಿನಿಂದಲೂ ನಮ್ಮ ಕುಟುಂಬಕ್ಕೆ ನಿಷ್ಠೆಯನ್ನು ಹೊಂದಿರುವ ಕ್ಷೇತ್ರವಾಗಿದೆ. 1992 ರಿಂದ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷನಾಗುವ ಮೂಲಕ ಸಹಕಾರ ರಂಗಕ್ಕೆ ಕಾಲಿಟ್ಟ ನಂತರ ಕ್ಷೇತ್ರದ ಜನರ ಒತ್ತಾಯದ ಮೇರೆಗೆ 2004 ರಲ್ಲಿ ಕ್ಷೇತ್ರದ ಶಾಸಕನಾಗಿ ಜನರ ಆಶೀರ್ವಾದದಿಂದ ಆಯ್ಕೆಯಾಗುತ್ತ ಬರುತ್ತಿದ್ದೇನೆ. ಆದ್ದರಿಂದ ಎಪ್ರೀಲ್-ಮೇ ತಿಂಗಳಲ್ಲಿ ಜರುಗಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿದ್ದೇನೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ನಾನು ಮಾಡಿರುವ ಪ್ರಗತಿಪರ ಸಾಧನೆಗಳನ್ನು ನೋಡಿ ಕಮಲ ಗುರ್ತಿಗೆ ತಮ್ಮ ಮತವನ್ನು ನೀಡುವಂತೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮುಖಂಡರಾದ ಪರ್ವತಗೌಡ ಪಾಟೀಲ, ಎಂ.ಎಂ. ಪಾಟೀಲ, ಯಲ್ಲಪ್ಪಗೌಡ ನ್ಯಾಮಗೌಡ, ಗೋವಿಂದ ಕೊಪ್ಪದ, ಅಶೋಕ ನಾಯಿಕ, ಬಿ.ಎಚ್. ಪಾಟೀಲ, ಸುರೇಶ ಸಾವಳಗಿ, ಅಮೀನಸಾಬ ಎಳ್ಳೂರ, ರಂಗಪ್ಪ ಇಟ್ಟನ್ನವರ, ಬೀರಪ್ಪ ಮುಗಳಖೋಡ, ಈರಣ್ಣಾ ಜಾಲಿಬೇರಿ, ಗಿರೀಶ ನಾಡಗೌಡ, ಎಂ.ಎಸ್. ದಂತಾಳಿ, ಹನಮಂತ ಹುಚರಡ್ಡಿ, ಗೌಡಪ್ಪ ಗುರಡ್ಡಿ, ಸದಾಶಿವ ದುರಗನ್ನವರ, ಮಲ್ಲಪ್ಪ ಚಕ್ಕೆನ್ನವರ, ಕಲ್ಲಪ್ಪ ರಂಜನಗಿ, ಬಸಲಿಂಗಪ್ಪ ಢವಳೇಶ್ವರ, ಬಸು ಹಿಡಕಲ್, ಬಸು ಭೂತಾಳಿ, ಬಸು ಕೇರಿ, ಲಕ್ಷ್ಮಣ ಪಾಟೀಲ, ಶಂಕರ ಬೆಳಗಲಿ, ಡಾ.ಶಿವನಗೌಡ ಪಾಟೀಲ, ಗಿರಿಮಲ್ಲಪ್ಪ ಹಳ್ಳೂರ, ಸಂಗಪ್ಪ ಕಂಠಿಕಾರ, ಸತೀಶ ತೊಂಡಿಕಟ್ಟಿ, ಬಸಪ್ಪ ಜಾಧವ, ಮುರಳಿ ಇತಾಪಿ, ಮುನ್ನಾ ತಹಶೀಲ್ದಾರ, ಸುನೀಲ ಕೆಂಜೋಳ, ಪರಸಪ್ಪ ರಾಮೋಜಿ, ತಿಪ್ಪಣ್ಣಾ ಹೆಗ್ಗಾರ, ರಮೇಶ ಜುಲಪಿ, ಶಿವು ಮಂಟೂರ, ಸಿದ್ದಾರೂಢ ಮಬನೂರ, ಮಾರುತಿ ಹರಿಜನ, ಶಿವನಗೌಡ ಪಾಟೀಲ, ಸಂಜು ಪಾಟೀಲ, ಬಸವರಾಜ ರಂಜನಗಿ, ಸಿ.ಎಲ್. ನಾಯ್ಕ, ಹನಮಂತ ಪೂಜೇರಿ, ಮಹಾದೇವ ನಾಡಗೌಡ, ರಂಗಪ್ಪ ಕಳ್ಳಿಗುದ್ದಿ, ಬಸಪ್ಪ ಬಾರ್ಕಿ, ಅಲ್ಲಪ್ಪ ಖಾನಪ್ಪನವರ, ನಂದೆಪ್ಪ ನಾಡಗೌಡ, ಮುರಿಗೆಪ್ಪ ಹುಬ್ಬಳ್ಳಿ, ಹನಮಂತ ನಾಯ್ಕ, ದುಂಡಪ್ಪ ಪಾಟೀಲ, ಹನಮಂತಗೌಡ ಚನ್ನಾಳ, ಹನಮಂತ ಹೊಸಮನಿ, ವೆಂಕಪ್ಪ ತೇರದಾಳ ಸೇರಿದಂತೆ ಯಾದವಾಡ ಜಿಪಂ ಕ್ಷೇತ್ರದ ಮುಖಂಡರು ಉಪಸ್ಥಿತರಿದ್ದರು.


Spread the love

About Fast9 News

Check Also

ಕನಕದಾಸರ ೫೩೭ ನೇ ಜಯಂತಿಗೆ ಶುಭ ಕೋರಿದ ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.*

Spread the love*ಕನಕದಾಸರ ೫೩೭ ನೇ ಜಯಂತಿಗೆ ಶುಭ ಕೋರಿದ ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.* ಗೋಕಾಕ- ನಾಡಿನಾದ್ಯಂತ …

Leave a Reply

Your email address will not be published. Required fields are marked *