ಎದುರಾಳಿಗಳಾದ ಬಾಲಚಂದ್ರ ಜಾರಕಿಹೊಳಿ – ಭೀಮಪ್ಪ ಗಡಾದ ಉಭಯ ಕುಶಲೋಪಚಾರಿ*
*ಮೂಡಲಗಿ*: ಬಿಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೊರಬರುತ್ತಿದ್ದಂತೆಯೇ ಪಕ್ಷೇತರ ಅಭ್ಯರ್ಥಿ ಭೀಮಪ್ಪ ಗಡಾದ ಅವರು ಪರಸ್ಪರ ಕುಶಲೋಪಚಾರಿ ವಿಚಾರಿಸಿದರು.
ಪರಸ್ಪರ ಎದುರಾಳಿಗಳಾದ ಬಾಲಚಂದ್ರ ಜಾರಕಿಹೊಳಿ ಹಾಗೂ ಭೀಮಪ್ಪ ಗಡಾದ ಅವರು ತಮ್ಮ ರಾಜಕೀಯ ಮರೆತು ಪರಸ್ಪರ ಕೈ ಮುಗಿಯುವ ಮೂಲಕ ಕುಶಲೋಪಚಾರಿ ವಿಚಾರಿಸಿದರು. ನಗುಮುಖದಿಂದಲೇ ಬಾಲಚಂದ್ರ ಜಾರಕಿಹೊಳಿ ಅವರಿಗೆ ಗಡಾದ ಎದುರಾದಾಗ ಆರಾಮರೀ. ನಾವು ಆರಾಮರೀ. ನಮಗೂ ಒಳ್ಳೆಯದಾಗಲಿ. ನಿಮಗೂ ಒಳ್ಳೆಯದಾಗಲಿ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ಶುಭ ಹಾರೈಸಿದರು. ಈ ಅಪರೂಪದ ಘಟನೆಗೆ ಶಾಸಕರ ಕಾರ್ಯಕರ್ತರು ಸಾಕ್ಷಿಯಾದರು.
Check Also
ನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ
Spread the loveನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ …