Breaking News

ಕಾನೂನು‌ ನಿಯಮ ಪಾಲಿಸಿ ಭಕ್ತಿಬಾವದಿಂದ ಸರಳವಾಗಿ ಗಣೇಶ ಹಬ್ಬ ಆಚರಿಸಿ : Psi ಕಿರಣ ಮೊಹಿತೆ.

Spread the love

ಕಾನೂನು‌ ನಿಯಮ ಪಾಲಿಸಿ ಭಕ್ತಿಬಾವದಿಂದ ಸರಳವಾಗಿ ಗಣೇಶ ಹಬ್ಬ ಆಚರಿಸಿ : Psi ಕಿರಣ ಮೊಹಿತೆ.

ಗೋಕಾಕ: ಗಣೇಶ ಹಬ್ಬದ ನಿಮಿತ್ತ ಗೋಕಾಕದ ಸಮುದಾಯ ಭವನದಲ್ಲಿ ಗ್ರಾಮೀಣ ಪೊಲೀಸ್‌ ಠಾಣೆಯ ಡಿಎಸಪಿ ನಿರ್ದೇಶನದಂತೆ ಸಿಪಿಆಯ್ ಮಾರ್ಗದರ್ಶನದಲ್ಲಿ ಪಿ,ಎಸ್,ಐ ಕಿರಣ ಮೊಹಿತೆ ಇವರ ನೇತೃತ್ವದಲ್ಲಿ ಗ್ರಾಮೀಣ ಬಾಗದ ಹಳ್ಳಿಗಳ ನಾನಾ ಸಮಾಜದ ಮುಖಂಡರ ಸಮ್ಮುಖದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಶಾಂತಿ ಸಭೆ ನಡೆಯಿತು.

ಸಭೆಯನ್ನು ಉದ್ದೇಶಿಸಿ ಪಿಎಸ್‌ಐ ಕಿರಣ ಮೊಹಿತೆ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಹಳ್ಳಿಗಳಲ್ಲಿ ನಾನಾ ಗ್ರಾಮಗಳ ಸಾರ್ವಜನಿಕರು ಗಣೇಶ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಜಾಗೃತಿವಹಿಸಬೇಕು. ಗಣಪತಿ ಕೂರಿಸುವುದಕ್ಕೆ ಪಂಚಾಯತ,ಪಟ್ಟಣ.ಪಂಚಾಯತಿ,ವಿದ್ಯುತ ನಿಗಮ ಮತ್ತು ಪೋಲಿಸ್ ಇಲಾಖೆಯಿಂದ ಪರವಾನಗಿ ಪಡೆದುಕೊಳ್ಳಬೇಕು ಯಾರು ಮುಂದಾಳತ್ವವಹಿಸಿಕೊಳ್ಳುತ್ತಾರೊ ಅವರು ಪೊಲೀಸ್‌ ಇಲಾಖೆಗೆ ಕಡ್ಡಾಯವಾಗಿ ಆಧಾರ್‌ ಕಾರ್ಡ್‌ ನೀಡಬೇಕು. ದಿನಾಲು ಇಬ್ಬರಂತೆ ವಾಲೆಂಟಿಯರನ್ನು ನೇಮಿಸಿ ಕೂರಿಸುವ ಸ್ಥಳ,ವಿಸರ್ಜನೆ ಮಾಡುವ ದಿನಾಂಕ ಮತ್ತು ಸಮಯವನ್ನು ತಿಳಿಸುವುದು ಸಮಿತಿಯವರ ಜವಾಬ್ದಾರಿಯಾಗಿದೆ.ಇನ್ನು ಯಾವುದೆ ಕಾರಣಕ್ಕಾಗಿ ಡಿಜೆ ಅಳವಡಿಸಲಿಕ್ಕೆ ಅನುಮತಿ ನೀಡಲಾಗಿವುದಿಲ್ಲ ಅವುಗಳ ಬದಲಾಗಿ ಸ್ಥಳಿಯ ವಾದ್ಯಗಳನ್ನು (ಡೊಳ್ಳು, ಬ್ಯಾಂಡ್, ಬ್ಯಾಂಜೋ ) ಬಳಸಿ ಆಚರಿಸಲು ತಿಳಿಸಿದರು. ವಿಸರ್ಜನೆ ಮಾಡುವಾಗ ಸಣ್ಣ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಲು ಸೂಚಿಸಿದರು.ಇನ್ನು ಗಣೇಶ ಮಂಟಪ ಸುತ್ತ ವೃದ್ದರು,ಚಿಕಿತ್ಸೆ ಪಡೆಯುತ್ತಿರುವವರು ಇರುವದರಿಂದ ಅಂತವರಿಗೆ ತೊಂದರೆಯಾಗದಂತೆ ರಾತ್ರಿ ಹತ್ತು ಗಂಟೆಯ ನಂತರ ಯಾವುದೆ ರೀತಿಯ ಕರ್ಕಶ ಶಬ್ದ ಉಪಯೋಗಿಸಬಾರದು.ಈ ಹಬ್ಬದಲ್ಲಿ ಯುವಕರು ಎಲ್ಲೆಂದರಲ್ಲಿ ಚಂದಾ ಎತ್ತುವಂತಿಲ್ಲ. ಗಣಪತಿಗಳು ಪರಿಸರ ಸ್ನೇಹಿಯಾಗಿರಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಗಣಪತಿ ವಿಸರ್ಜಿಸಬೇಕು. ಸಾರ್ವಜನಿಕರಿಗೆ ಖುಷಿ ನೀಡುವ ಕಾರ್ಯಕ್ರಮ ಆಯೋಜಿಸಬೇಕು ಎಂದು ಹೇಳಿ ಕಾನೂನು ನಿಯಮ ಪಾಲಿಸದೆ ಹೊದಲ್ಲಿ ಅಂತವರ ವಿರುದ್ದ ಪೋಲಿಸ್ ಇಲಾಖೆಯಿಂದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳುವುದರೊಂದಿಗೆ ಕಾನೂನಿನ ನಿಯಮ‌ ಪಾಲಿಸುವುದರ ಜೊತೆಯಲ್ಲಿ ಗಣೇಶ ಹಬ್ಬವನ್ನು ಅತಿ ವಿಜೃಂಭಣೆಯಿಂದ ಭಕ್ತಿ ಭಾವದಿಂದ ಸರಳ ರೀತಿಯಲ್ಲಿ,ಆಚರಿಸಲು ತಿಳಿಸಿದರು,

ಈ ಸಂದರ್ಭದಲ್ಲಿ ಪೋಲಿಸ್ ಸಿಬ್ಬಂದಿಗಳಾದ ದುಂಡೇಶ ಅಂತರಗಟ್ಟಿ, ಶಂಕರ ಜಂಬಗಿ ಹಾಗೂ ಗ್ರಾಮಿಣ ಬಾಗದ ಗಣೇಶ ಮಂಟಪದ ಸಮಿತಿಯ ಸದಸ್ಯರು,ಮುಖಂಡರು ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.


Spread the love

About Fast9 News

Check Also

ಇದೆ 24ರಂದು ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ-ಶಿವಪುತ್ರ ಜಕಬಾಳ.!

Spread the loveಇದೆ 24ರಂದು ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ-ಶಿವಪುತ್ರ ಜಕಬಾಳ.! ಗೋಕಾಕ: ಹಿಂದುಳಿದ ಸಮುದಾಯವಾಗಿರುವ ಉಪ್ಪಾರ ಸಮುದಾಯದ …

Leave a Reply

Your email address will not be published. Required fields are marked *