Breaking News

ಆಸರೆ ಇಲ್ಲದವನಿಗೆ ಆಸರೆಯಾದ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ.

Spread the love

ಆಸರೆ ಇಲ್ಲದವನಿಗೆ ಆಸರೆಯಾದ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ.

ಗೋಕಾಕ :ವೃದ್ದಾಪ್ಪದಲ್ಲಿ ಅಶಕ್ತನಾಗಿ,ದುಡಿಯಲು ಆಗದ ಕಾರಣ ಅವರನ್ನು ನೋಡಿಕೊಳ್ಳಲು ಯಾರು ಇಲ್ಲದಿರುವದನ್ನ ಅರಿತು ಅಕ್ಕಪಕ್ಕದವರಿಂದ ಮಾಹಿತಿ ಪಡೆದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ. ಮರಡಿಮಠ ವಲಯದ ಕೊಣ್ಣೂರ.ಬಿ ಕಾರ್ಯಕ್ಷೇತ್ರದವರು ಗೋಕಾಕ ತಾಲೂಕಿನ ಕೊಣ್ಣೂರಲ್ಲಿನ ರಾಮಪ್ಪ ಕೇಳಗೇರಿ ಇವರಿಗೆ ಸಹಾಯಹಸ್ತ ಚಾಚುವ ಮೂಲಕ ಅವರ ಬಾಳಿಗೆ ಆಸರೆಯಾಗಿದ್ದಾರೆ.

ಸದರಿ ರಾಮಪ್ಪ ಕೇಳಗೇರಿ ಅಶ್ವಸ್ಥರಾಗಿದ್ದನ್ನ ಗಮನಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರು ಸಂಘದ ಯೋಜನೆಯಿಂದ ರಾಮಪ್ಪ ಕೇಳಗೇರಿ ಇವರಿಗೆ ಮಾಶಾಸನ ಒದಗಿಸುವ ಮೂಲಕ ಮಾನವಿಯತೆ ಮೆರೆದಿದ್ದಾರೆ.

ಅದರ ಜೊತೆಯಲ್ಲಿ ಸದರಿಯವರು ಯಾವುದೆ ಕೆಲಸ ಮಾಡಲಿಕ್ಕೆ ಆಗದೆ ಸುಮಾರು ದಿನಗಳಿಂದ ಹೆಗ್ಗಣಗಳು ಒಡಾಡುತಿದ್ದ ಗಬ್ಬು ವಾಸನೆಯಿಂದ ಕೂಡಿ ವಾಸ ಮಾಡಲಿಕ್ಕೆ ಯೊಗ್ಯವಲ್ಲದ ಸಣ್ಣ ಗುಡಿಸಿಲಿನಲ್ಲಿ ವಾಸಮಾಡುತಿದ್ದರು.
ಇದನ್ನೆಲ್ಲ ಗಮನಿಸಿ ಮಾಹಿತಿ ಪಡೆದು ಧರ್ಮಸ್ಥಳದ ಶೌರ್ಯ ವಿಪತ್ತು ನಿರ್ವಹಣೆ ಘಟಕದವರು ರಾಮಪ್ಪ ಸ್ಥಿತಿ ಗತಿ ಅರಿತು ಹೆಗ್ಗಣಗಳು ಕೆದರಿ ಹಾಕಿದ ಮಣ್ಣನ್ನು ತೆಗೆದುಹಾಕಿ ಸ್ವಚ್ಚ ಮಾಡಿ ಸಿಮೆಂಟನಿಂದ ನೆಲವನ್ನು ಗಿಲಾವ ಮಾಡಿ ವಾಸ ಮಾಡಲಿಕ್ಕೆ ಅನುಕೂಲ ಮಾಡಿಕೊಟ್ಟರು.

ಧರ್ಮಸ್ಥಳದ ಸಂಘದ ಕಾರ್ಯವನ್ನು ನೋಡಿ ರಾಮಪ್ಪ ಮುಖದಲ್ಲಿ ಸಂತೋಷ ಕಾಣಿಸಿಕೊಂಡಿತು.
ಇವರ ಕಾರ್ಯಕ್ಕೆ ಅಕ್ಕಪಕ್ಕದ ಜನ ಶ್ಲ್ಯಾಘನಿಯ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ನವಜಿವನ ಸಮಿತಿ ಅದ್ಯಕ್ಷರು ಶಿವಾನಂದ ನಾಯಕ. ಚಂದು ಪೂಜೇರಿ.ಮೇಲ್ವಿಚಾರಕರಾದ ರೇಣುಕಾ ಹೀರೆಮಠ, ಸೇವಾ ಪ್ರತಿನಿದಿ ರಾಜಶ್ರೀ ಗುಡಚನ್ನವರ ಸೇರಿದಂತೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಉಪಸ್ಥಿತರಿದ್ದರು.


Spread the love

About Fast9 News

Check Also

ಕೊಣ್ಣೂರ ಚೆಕ್‌ ಪೊಸ್ಟಿಗೆ ತಹಸಿಲ್ದಾರ ದಿಢೀರ ಬೇಟಿ,ಪರಿಶೀಲನೆ.

Spread the loveಕೊಣ್ಣೂರ ಚೆಕ್‌ ಪೊಸ್ಟಿಗೆ ತಹಸಿಲ್ದಾರ ದಿಢೀರ ಬೇಟಿ,ಪರಿಶೀಲನೆ. ಗೋಕಾಕ : ಬೆಳಗಾವಿ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಕೊಣ್ಣೂರ …

Leave a Reply

Your email address will not be published. Required fields are marked *