Breaking News

ಡಾ: ಬಿ,ಆರ್, ಅಂಬೇಡ್ಕರ ಮತ್ತು ಭಗವಾನ್ ಮಹಾವೀರರ ಧ್ಯೇಯ ಒಂದೆ ಆಗಿತ್ತು: ಸಚಿನ ಸಮಯ

Spread the love

ಡಾ: ಬಿ,ಆರ್, ಅಂಬೇಡ್ಕರ ಮತ್ತು ಭಗವಾನ್ ಮಹಾವೀರರ ಧ್ಯೇಯ ಒಂದೆ ಆಗಿತ್ತು: ಸಚಿನ ಸಮಯ

ಅಸ್ಪೃಶ್ಯತೆ ಮತ್ತು ಅಸಮಾನತೆಯ ಆಂದೋಲನ ಪ್ರಾರಂಭಿಸಿ ಶೋಷಿತ ವರ್ಗಕ್ಕೆ ನ್ಯಾಯ ಒದಗಿಸಲು ಮಹಾನ್ ಹೋರಾಟ ನಡೆಸಿದ ದೇಶದ ಮಹಾನಾಯಕ ಭಾರತ ರತ್ನ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಎಂದು ಬಟ್ಟೆ ಉದ್ಯಮಿ ಶಾಂತಿನಾಥ ಹೊಲಸೇಲ್ ಬಜಾರ ಮಾಲಿಕರಾದ ಸಚಿನ ಸಮಯ ಇವರು ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿಯ ಮೆರವಣಿಗೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಯಾವುದೇ ಒಂದು ಸಮುದಾಯಕ್ಕೆ ಸೀಮಿತರಲ್ಲ, ಅವರು ದೇಶಕ್ಕೆ ಸಂವಿಧಾನವನ್ನು ನೀಡಿದ ಸಮಿತಿಯ ಅಧ್ಯಕ್ಷರಾಗಿ, ಸಮಾಜಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರಜ್ಞರಾಗಿ, ಇತಿಹಾಸಕಾರರಾಗಿ ಹೀಗೆ ಅವರಿಗೆ ತಿಳಿಯದ ಕ್ಷೇತ್ರವಿರಲಿಲ್ಲ ಎಂದು ನುಡಿದರು. ಹಿಂದುಳಿದವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರುವ ಎಲ್ಲರ ಜೊತೆಗೆ ಕರೆದೊಯ್ಯುವ ಉದ್ದೇಶ ಅವರದಾಗಿತ್ತು ಎಂದರು.

ಭಗವಾನ್ ಮಹಾವೀರರು ಹಿಂಸಾ ಮಾರ್ಗವನ್ನು ತೊರೆದು ಅಹಿಂಸಾ ಮಾರ್ಗದಲ್ಲಿ ನಡೆಯುವಂತೆ ಜನರಿಗೆ ತಿಳಿಹೇಳುತ್ತಿದ್ದರು.
ಡಾ. ಅಂಬೇಡ್ಕರ್ ಕೂಡ ಇದೇ ಹಾದಿಯಲ್ಲಿ ನಡೆದಿದ್ದರು. ಬದುಕಬೇಕು ಮತ್ತು ಎಲ್ಲರನ್ನೂ ಬದುಕಲು ಬಿಡಬೇಕು ಎಂಬುದೇ ಈ ಇಬ್ಬರೂ ಮಹಾತ್ಮರ ಧ್ಯೇಯವಾಗಿತ್ತು. ಇದನ್ನು ನಾವೆಲ್ಲರೂ ತಮ್ಮ ಜೀವನದಲ್ಲಿ ಅಳವಡಸಿಕೊಳ್ಳಬಕೆಂದರು.ಅಂಬೇಡ್ಕರ ನಗರದಿಂದ ಪ್ರಾರಂಬವಾದ ಮೆರವಣಿಗೆಯು ಜೈನಗಲ್ಲಿ, ಬಜಾರ ರಸ್ತೆ,ವಾಲ್ಮಿಕಿ ಚೌಕ, ಕಾಮನ ಚೌಕ ಮುಖಾಂತರ ತೆರಳಿ ಮತ್ತೆ ಅಂಬೇಡ್ಕರ ನಗರದಲ್ಲಿ ಅಂತ್ಯಗೊಂಡಿತು, ಈ ಮೆರವಣಿಗೆಯಲ್ಲಿ ನೂರಾರು ಯುವಕರು ಕುಣಿಯುತ್ತಾ ಬಾಬಾ ಸಾಹೇಬರಿಗೆ ಜೈಕಾರ ಹಾಕುತ್ತಾ ಸಂತೋಷದಿಂದ ಕುಣಿಯುತಿದ್ದರು, ಈ ಮೆರವಣಿಗೆಯಲ್ಲಿ ಗೋಕಾಕ ಗ್ರಾಮೀಣ ಸಿ,ಪಿ,ಆಯ್,ಪ್ರಕಾಶ ಯಾತನೂರ ಹಾಗೂ ಪಿಎಸ್,ಐ ಕೆ,ವಾಲಿಕಾರ ಹಾಗೂ ಪೋಲಿಸ್ ಸಿಬ್ಬಂದಿಗಳು ಯಾವುದೆ ಅಹಿತಕರ ಘಟನೆ ನಡೆಯದಂತೆ ಬಂದೊಬಸ್ತ ಒದಗಿಸಿದ್ದರು, ಈ ಮೆರವಣಿಗೆಯಲ್ಲಿ
ಮಾಜಿ ಪುರಸಭೆ ಅದ್ಯಕ್ಷ ದನ್ಯಕುಮಾರ ಮೇಗೇರಿ, ನಿವೃತ್ತ ಪೋಲಿಸ್ ಅಧಿಕಾರಿ ಬಾಲಚಂದ್ರ ಶಿಂಗ್ಯಾಗೋಳ,ವೆಂಕಟೇಶ ಕೇಳಗೇರಿ,ವಿಠ್ಠಲ ಗುಡಜ,ಶೇಖರ ಕೊಣ್ಣೂರ,ಮಯೂರ ಗುಡಜ,ಮನೋಹರ ಲಗಮಪ್ಪಗೋಳ ಸೇರಿದಂತೆ ಇನ್ನೂಳಿದ ಮುಖಂಡರು ,ನೂರಾರು ಯುವಕರು ಭಾಗಿಯಾಗಿದ್ದರು.


Spread the love

About Fast9 News

Check Also

ತಾಕತ್ತಿದ್ದರೆ RSS & ಬಜರಂಗದಳ ನಿಷೇಧಿಸಲಿ: ಮಾಜಿ cm ಬೊಮ್ಮಾಯಿ

Spread the loveತಾಕತ್ತಿದ್ದರೆ RSS & ಬಜರಂಗದಳ ನಿಷೇಧಿಸಲಿ: ಮಾಜಿ cm ಬೊಮ್ಮಾಯಿ ಸಂಘ ಪರಿವಾರದ ಸಂಘಟನೆಗಳನ್ನು ನಿಷೇಧ ಮಾಡುವ …

Leave a Reply

Your email address will not be published. Required fields are marked *