ಶ್ರೇಷ್ಠ ಸಂತ ಕವಿ ಸರ್ವಜ್ಞ ನವರ್ 502ನೆ ಜಯಂತಿ ಆಚರಣೆ
ಆಡುಭಾಷೆಯಲ್ಲೇ ಸರಳವಾದ ತ್ರಿಪದಿಗಳನ್ನು ರಚಿಸಿ ಸಮಾಜವನ್ನು ತಿದ್ದಲು ಶ್ರಮಿಸಿದ .ಕನ್ನಡ ನಾಡಿನ ಶ್ರೇಷ್ಠ ಸಂತ ಕವಿ ಸರ್ವಜ್ಞ ನವರ್ 502ನೆ ಜಯಂತಿಯನ್ನು ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಕುಂಬಾರ್ ಓಣಿಯ ಭಗತ್ ಸಿಂಗ್ ಸರ್ಕಲನಲ್ಲಿ ಸರ್ವ ಕುಂಬಾರ ಸಮಾಜದ ಗುರುಹಿರಿಯರ ಮುಖ್ಯಸ್ಥಿತಿಯ ಸಮ್ಮುಖದಲ್ಲಿ ಸರ್ವಜ್ಞ ಅವರ ಜಯಂತಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕುಂಬಾರ ಸಮಾಜದ ಮುಖಂಡ ಮಡಿವಾಳಪ್ಪ ಕುಂಬಾರ ಇವರು
ಈಗಿನ ಯುವಕರು ಸರ್ವಜ್ಞರ ತತ್ವ ಆದರ್ಶಗಳನ್ನು ತಮ್ಮ ಅಳವಡಿಸಿಕೊಳ್ಳಬೇಕು,ಅವರು ಕೇವಲ ಜಾತಿಗೆ ಸಿಮಿತವಾಗದೆ ಲೊಕ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು, ಅವರ ತ್ರಿಪದಿಗಳಲ್ಲಿ ಸಾರ್ವಕಾಲಿಕ ಮೌಲ್ಯಗಳಿವೆ.ಸರ್ವಜ್ಞರು ಸಾಮಾಜಿಕ ಅರಿವನ್ನು ಮೂಡಿಸಿದ ದಾರ್ಶನಿಕರು ಆಗಿದ್ದರು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಶಂಕರ್ ಕುಂಬಾರ , ಶ್ರೀಶೈಲ್ ಕುಂಬಾರ್ ಮುತ್ತಪ್ಪ ಕುಂಬಾರ, ಚನಬಸಪ್ಪ ಕುಂಬಾರ, ಕೆಂಪಣ್ಣ ಕುಂಬಾರ ಕುಂಬಾರ ಸಮಾಜದ ಯುವಕರು ಸರ್ವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು