Breaking News

ಚತ್ರಪತಿ ಶಿವಾಜಿ ಮಹಾರಾಜರು ರಾಷ್ಟ್ರೀಯ ಯುವಕರಿಗೆ ಸ್ಪೂರ್ತಿ : ಅಶೋಕ ಲಗಮಪ್ಪಗೋಳ

Spread the love

ಚತ್ರಪತಿ ಶಿವಾಜಿ ಮಹಾರಾಜರು ರಾಷ್ಟ್ರೀಯ ಯುವಕರಿಗೆ ಸ್ಪೂರ್ತಿ : ಅಶೋಕ ಲಗಮಪ್ಪಗೋಳ

ಗೋಕಾಕ ನಗರದ ಬಸವಜ್ಯೋತಿ ಐ ಟಿ ಐ ಕಾಲೇಜಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 392 ನೇ ಜಯಂತಿ ಆಚರಣೆ ಮಾಡಲಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಅಶೋಕ ಲಗಮಪ್ಪಗೋಳ ವಹಿಸಿದ್ದರು.
ಛತ್ರಪತಿ ಶಿವಾಜಿ ಮಹಾರಾಜರು ಕರ್ನಾಟಕ ಮತ್ತು ಮಹಾರಾಷ್ಟ್ರದ ಕೊಂಡಿಯಾಗಿ ರಾಷ್ಟ್ರೀಯ ಯುವಕರಿಗೆ
ಸ್ಪೂರ್ತಿಯಾಗಿದ್ದಾರೆ.ನಿಜವಾದ ರಾಷ್ಟ್ರ ಪ್ರೇಮ ರಾಷ್ಟ್ರ ಭಕ್ತಿ ಹೊಂದಿದವರಾಗಿದ್ದರು ಇವರ ಧೈರ್ಯ ಸಾಹಸ ಕೆಚ್ಚದೆ ಯುದ್ಧ ಕೌಶಲ್ಯ ಸ್ಫೂರ್ತಿ ಇವರ ಮಾತೋಶ್ರೀ ಜೀಜಾಬಾಯಿ ಯವರು ಪೂರ್ಣ ಪ್ರಮಾಣ ಇವರ ಬಾಲ್ಯದಿಂದಲೇ ತಾಯಿಯವರು ರಾಮಾಯಣ ಮಹಾಭಾರತ ಸಾಧಕರ ಸಾಹಸ ಕತೆಗಳನ್ನು ಹೇಳಿ ಧೈರ್ಯ ತುಂಬುತಿದ್ದರು ಇದರ ಪರಿಣಾಮ ರಾಷ್ಟ್ರಕಂಡ
ಅಪ್ರತಿಮ ಹೋರಾಟಗಾರ ಇವರ ಆಡಳಿತದಲ್ಲಿ ಎಲ್ಲ ಧರ್ಮಿಯರು ಎಲ್ಲ ಜನಾಂಗದವರಿಗೆ ಪ್ರಾಶಸ್ಯ ನೀಡುತಿದ್ದರು .ಇವರ ಗುರಿ ಪರಕೀಯರನ್ನು ಒಗ್ಗೂಡಿಸಿ ಭಾರತ ಮಾತೇ ಪರಕೀಯರಿಂದ ಮುಕ್ತಳಾಗುವುದೇ ಇವರ ಹೆಬ್ಬಯಕೆಯಾಗಿತ್ತು .ಇವರ ಗುರುಗಳು
ಸಂತ ರಾಮದಾಸರ ಪರಮ ಭಕ್ತರು ಆಗಿದ್ದರು ಇವರ 19 ನೇ ವಯಸ್ಸಿನಲ್ಲಿ ತೋರಣದುರ್ಗ ವಶ ಪಡಿಸಿಕೊಂಡ ಮಹಾನ್ ಸಾಹಸಿಯಾಗಿದ್ದರು .ಹಾಗೂ ಇಂದಿನ ಯುವಕರು ಶಿವಾಜಿ ಮಹಾರಾಜರ ಸಾಹಸಗಾಥೆಯನ್ನು ಓದಿ ತಿಳಿದು ದೇಶಕ್ಕಾಗಿ ಅವರ
ಆದರ್ಶಗಳನ್ನೂ ಮೈಗೂಡಿಸಿಕೊಂಡು ದೇಶದ ರಕ್ಷಣೆಗೆ ಬದ್ಧರಾಗಬೇಕೆಂದು ಅಧ್ಯಕ್ಷರು ತಿಳಿಸಿದರು ಹಾಗೂ ವಿದ್ಯಾರ್ಥಿಗಳು ಕೂಡ ಭಾಷಣ ಮಾಡಿದರು ,ಮುಖ್ಯ ಅಥಿತಿಗಳಾಗಿ ಪರಶುರಾಮ್ ಗೊಲ್ಲರ ಹಾಗೂ ಕೆ. ವಿ .ಮುತಾಲಿಕ ದೇಸಾಯಿ ಆಗಮಿಸಿದ್ದರು .ಕಾಲೇಜಿನ ಕಿರಿಯತರಬೇತಿ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಪ್ರಾಚಾರ್ಯರಾದ ಸಿ.ಎಸ. ಪಾಟೀಲ್ ಸ್ವಾಗತಿಸಿ ವಂದಿಸಿದರು


Spread the love

About Fast9 News

Check Also

ನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ

Spread the loveನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ …

Leave a Reply

Your email address will not be published. Required fields are marked *