Breaking News

ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಮಾನವ ಹಕ್ಕುಗಳ ವಿಂಗ (ರಿ) ಗೋಕಾಕ ತಾಲೂಕಾ ಘಟಕದ ಪದಾಧಿಕಾರಿಗಳ ನೇಮಕ

Spread the love

ಗೋಕಾಕ ಫೆ 16 : ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಮಾನವ ಹಕ್ಕುಗಳ ವಿಂಗ (ರಿ) ಗೋಕಾಕ ತಾಲೂಕಾ ಘಟಕದ ಪದಾಧಿಕಾರಿಗಳ ನೇಮಕ ಮಾಡಲಾಗಿದೆ.

ಬುಧವಾದಂದು ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧ್ಯಕ್ಷ ರಶೀದ್ ಮಕಾಂದಾರ ಅವರು ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ತಾಲೂಕಾಧ್ಯಕ್ಷರಾಗಿ ಬಸವರಾಜ ದೇಶನೂರ, ಉಪಾಧ್ಯಕ್ಷರಾಗಿ ಕೃಷ್ಣಾ ಖಾನಪ್ಪನವರ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ ಖಂಡ್ರಿ, ಖಜಾಂಚಿಯಾಗಿ ಇಮ್ರಾನ್ ಗೊಟೇದ ಹಾಗೂ ಸಂಚಾಲಕರನ್ನಾಗಿ ಮುಗುಟ ಪೈಲವಾನ, ಬಸವರಾಜ ಬ್ಯಾಡರಟ್ಟಿ, ರವಿಕಾಂತ ರಾಜಾಪೂರ ನೇಮಕಮಾಡಲಾಗಿದೆ.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಶೀದ್ ಮಕಾಂದಾರ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಮಾನವ ಹಕ್ಕುಗಳ ವಿಂಗ ಸಂಘಟನೆ ಅಡಿಯಲ್ಲಿ ಭ್ರಷ್ಟಾಚಾರ ಹಾಗೂ ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪದಾಧಿಕಾರಿಗಳು ಮುಂದಾಗಿ ಸದೃಢ ಸಮಾಜ ನಿರ್ಮಾಣ ಮಾಡವಲ್ಲಿ ಶ್ರಮಿಸಬೇಕೆಂದು ಹೇಳಿದರು
ಈ ಸಂದರ್ಭದಲ್ಲಿ ಸಂಘಟನೆಯ ಉತ್ತರ ಕರ್ನಾಟಕ ಪ್ರಮುಖ ಕಣ್ಣನವರ, ಜಿಲ್ಲಾ ಪ್ರಮುಖ ದಿಲಾವರ ಬಾಳೆಕುಂದ್ರಿ ಉಪಸ್ಥಿತರಿದ್ದರು


Spread the love

About Fast9 News

Check Also

ಗೋಕಾಕ ಪೋಲಿಸರಿಂದ ಭರ್ಜರಿ ಬೇಟೆ,ವಾಹನ ಸವಾರರ ಸುಲಿಗೆ ಮಾಡುತಿದ್ದ ಡಕಾಯಿತರ ಬಂಧನ.

Spread the loveಗೋಕಾಕ ಪೋಲಿಸರಿಂದ ಭರ್ಜರಿ ಬೇಟೆ,ವಾಹನ ಸವಾರರ ಸುಲಿಗೆ ಮಾಡುತಿದ್ದ ಡಕಾಯಿತರ ಬಂಧನ. ಗೋಕಾಕ : ನಾಲ್ಕು ದಿನಗಳ …

Leave a Reply

Your email address will not be published. Required fields are marked *