Breaking News

ಬೈಕ್‌ ಕಳ್ಳರ ಹೆಡೆಮುರಿ ಕಟ್ಟಿ ಗೋಕಾಕ ಜನತೆಯ ಪ್ರಶಂಸೆಗೆ ಪಾತ್ರರದ ಗೋಕಾಕ ಪೋಲಿಸ್*

Spread the love

*ಬೈಕ್‌ ಕಳ್ಳರ ಹೆಡೆಮುರಿ ಕಟ್ಟಿ ಗೋಕಾಕ ಜನತೆಯ ಪ್ರಶಂಸೆಗೆ ಪಾತ್ರರದ ಗೋಕಾಕ ಪೋಲಿಸ್*

ಗೋಕಾಕ ಶಹರ ನಗರದಲ್ಲಿ ಜರುಗುತ್ತಿದ್ದ ಬೈಕ್‌ ಕಳ್ಳತನಗಳ ಪ್ರಕರಣದ ತನಿಖೆಯನ್ನು ಬೆಳಗಾವಿ ಎಸ್,ಪಿ, ಲಕ್ಷ್ಮಣ ನಿಂಬರಗಿ ಮತ್ತು ಹೆಚ್ಚುವರಿ ಎಸ್,ಪಿ, ಅಮರನಾಥ ರೆಡ್ಡಿ, ಗೋಕಾಕ ಡಿ,ಎಸ್,ಪಿ, ಜಾವೇದ ಇನಾಮದಾರ,ಸಿ,ಪಿ,ಆಯ್,ಗೋಪಾಲ ರಾಠೋಡ,ಇವರ ಮಾರ್ಗದರ್ಶನದಲ್ಲಿ ಪಿ,ಎಸ್,ಆಯ್,ಶ್ರೀ ಕೆ,ಬಿ,ವಾಲಿಕಾರ (ಕಾಸು) ,ಪಿ,ಎಸ್,ಆಯ್,ಶ್ರೀ ಅಮಿನಬಾಂವಿ,(ಸಿಬಿ)ಗೋಕಾಕ. ಶಹರ ಠಾಣೆಯ ಸಿಬ್ಬಂದಿಗಳಾದ ಬಿ,ಎಸ್,ಸಿದ್ನಾಳ, ಎಲ್,ಎಸ್ನಾಡಗೌಡರ,ಕೆ,ಬಿ,ಹಕ್ಯಾಗೋಳ,ಸಿ,ಎಸ್,ಬೀರಾದರ,ಆರ್,ಆರ್,ಮುರನಾಳ,ಎಸ್,ವಾಯ್,ಕುರಿ,ಎಂ,ಆರ್,ಅಂಬಿ,ಇವರು ಕಾರ್ಯಾಚರಣೆ ನಡೆಸಿ

ಒರ್ವನನ್ನು ವಿಚಾರಣಗೆ ಒಳಪಡಿಸಿದಾಗ ಅವನಿಂದ ಕಳ್ಳತನ ಮಾಡಿದ
4 ಮೋಟಾರ್‌ ಬೈಕ್‌, 2 ಸೈಕಲ್ ಹಾಗೂ 4 ಮೊಬೈಲ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.
ಕಳ್ಳತನ ಮಾಡುತಿದ್ದ ಮಹಾಲಿಂಗೇಶ್ವರ ನಗರದ ನಿವಾಸಿಯಿಂದ ಸುಮಾರು 1 ಲಕ್ಷ,25 ಸಾವಿರ ಬೆಲೆ ಬಾಳುವ ವಿವಿಧ ಕಂಪನಿಗಳ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗೋಕಾಕ ಡಿ,ವಾಯ್,ಎಸ್,ಪಿ, ಜಾವೇದ ಇನಾಮದಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಇದೆ ಸಮಯದಲ್ಲಿ ಕಳ್ಳತನವನ್ನು ಬೇದಿಸುವಲ್ಲಿ ಯಶಶ್ವಿಯಾದ ತಂಡಕ್ಕೆ ಡಿ,ವಾಯ್,ಎಸ್,ಪಿ,ಯವರು ಅಭಿನಂದನೆ ಸಲ್ಲಿಸಿ ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದರು.


Spread the love

About fast9admin

Check Also

ಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ

Spread the loveಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ ಗೋಕಾಕ- ಹಿಂದುಳಿದ ಹಣಬರ ಸಮಾಜವು ಸಾಮಾಜಿಕವಾಗಿ, …

Leave a Reply

Your email address will not be published. Required fields are marked *