Breaking News

Spread the love

ತುರ್ತು ಪರಿಸ್ಥಿತಿಯಿಂದ ಪಾರಾಗಲು 112 ಗೆ ಕರೆ ಮಾಡಿ : DYSP ಜಾವೀದ್ ಇನಾಂದಾರ

ಗೋಕಾಕ : ಪೋಲಿಸ್ ಇಲಾಖೆಯಿಂದ ಪ್ರತಿಯೊಬ್ಬ ನಾಗರಿಕರಿಗೂ ತುರ್ತು ಪರಿಸ್ಥಿತಿಯಲ್ಲಿ ಸರಿಯಾದ ಸೇವೆ ಒದಗಿಸಲು ಇನ್ನು ಮುಂದೆ 112 ಸಂಖ್ಯೆಗೆ ಕರೆ ಮಾಡಿ ತುರ್ತು ಪೋಲಿಸ ಇಲಾಖೆಯಿಂದ ಸಹಾಯ ಪಡೆದುಕೊಳ್ಳಲು ಗೋಕಾಕದಲ್ಲಿ ಡಿ,ವೈ,ಎಸ್ಪಿ, ಜಾವೀದ ಇನಾಂದಾರ ಹೇಳಿದ್ದಾರೆ.

ನಗರದಲ್ಲಿರುವ ತಮ್ಮ ಕಚೇರಿಯಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು ಸಾರ್ವಜನಿಕರು ಯಾವುದೆ ವಿಪತ್ತಿನಲ್ಲಿ ಇದ್ದಾಗ ತಕ್ಷಣ 112 ಸಂಖ್ಯೆಗೆ ಕರೆ ಮಾಡಿ ತುರ್ತು ಸಹಾಯ ಪಡೆಯಬಹುದು.ಇದರ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ ಬಸವೇಶ್ವರ ವೃತ್ತದಲ್ಲಿ ದಿನಾಂಕ 24/1/2021 ರಂದು ಜಿಲ್ಲಾ ಮತ್ತು ತಾಲೂಕಾ ಅಧಿಕಾರಿಗಳ ನೇತೃತ್ವದಲ್ಲಿ 06 ತುರ್ತು ಸೇವಾ ವಾಹನಗಳಿಗೆ ಅಪರಾಹ್ನ 11:30 ಕ್ಕೆ ಚಾಲನೆ ನಿಡಲಿದ್ದಾರೆ.

ಇವತ್ತಿನ ಪರಿಸ್ಥಿತಿಯಲ್ಲಿ ಹೆಚ್ಚುತ್ತಿರುವ ಅಪರಾದವನ್ನು ತಡೆಗಟ್ಟಲು 112 ಸಂಖ್ಯೆಗೆ ಕರೆ ಮಾಡಿದ್ದಲ್ಲಿ ತಾವು ಇದ್ದ (ಜಾಗೆ) ಲೊಕೆಶನ್ ಪತ್ತೆ ಮಾಡಿ ಕೆಲವೆ ಸಮಯದಲ್ಲಿ ನೀವಿರುವ ಸ್ಥಳಕ್ಕೆ ಬಂದು ತಮ್ಮನ್ನು ಆಗುವ ಅವಘಡದಿಂದ ರಕ್ಷಿಸಲಾಗುತ್ತದೆ, ಈ ತುರ್ತು ವ್ಯವಸ್ಥೆಯನ್ನು ರಾಜ್ಯ ಪೋಲಿಸ್ ಇಲಾಖೆ ಪ್ರಾರಂಬಿಸಿದ್ದು ಅಗ್ನಿ,ವಿಪತ್ತು ಸೇರಿದಂತೆ ಇತರೆ ಸಂದರ್ಭದಲ್ಲಿ 24 ಗಂಟೆ ಕಾರ್ಯನಿರ್ವಹಿಸುವ 112 ಸಂಖ್ಯೆಗೆ ಕರೆ ಮಾಡಿದ್ದಲ್ಲಿ ತಮಗೆ ಸ್ಪಂದನೆ ಸಿಗುತ್ತದೆ ಎಂದರು,

ಇನ್ನು ದಿನಾಂಕ 24/1/2021 ರಂದು ಈ ಕಾರ್ಯಕ್ರಮಕ್ಕೆ ಬೆಳಗಾವಿ ಜಿಲ್ಲಾ ಪೋಲಿಸ್ ಅಧೀಕ್ಷಕರಾದ ಶ್ರೀ ಲಕ್ಷ್ಮಣ ನಿಂಬರಗಿ ಮತ್ತು ಹೆಚ್ಚುವರಿ ಪೋಲಿಸ್ ಅಧಿಕ್ಷಕರಾದ ಶ್ರೀ ಅಮರನಾಥ ರೆಡ್ಡಿಯವರು ನೀಡಲಿದ್ದಾರೆಂದು ಗೋಕಾಕ ಉಪವಿಭಾಗ ಪೋಲಿಸ್ ಉಪಾಧೀಕ್ಷಕರಾದ ಶ್ರೀ ಜಾವೀದ ಇನಾಂದರ ತಿಳಿಸಿ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದ್ದಾರೆ.

*ಆಪತ್ತು ಎನೆ ಇರಲಿ 112 ಸಂಖ್ಯೆ ನೆನಪಿರಲಿ*

*ಸದಾ ನಿಮ್ಮ ಸೇವೆಯಲ್ಲಿ ಬೆಳಗಾವಿ ಜಿಲ್ಲಾ ಪೋಲಿಸ್*


Spread the love

About fast9admin

Check Also

ವಿದ್ಯಾರ್ಥಿಗಳು ಸುಸಂಸ್ಕೃತ ನಾಗರಿಕರಾಗಬೇಕೆಂಬುದು ಶಾಸಕ ರಮೇಶ ಜಾರಕಿಹೋಳಿಯವರ ಕನಸು : ಜಿ,ಬಿ, ಬಳಿಗಾರ

Spread the loveವಿದ್ಯಾರ್ಥಿಗಳು ಸುಸಂಸ್ಕೃತ ನಾಗರಿಕರಾಗಬೇಕೆಂಬುದು ಶಾಸಕ ರಮೇಶ ಜಾರಕಿಹೋಳಿಯವರ ಕನಸು : ಜಿ,ಬಿ, ಬಳಿಗಾರ ಸ್ಕೌಟ್ಸ್‌ ಮತ್ತು ಗೈಡ್ಸ್‌ಗಳು …

Leave a Reply

Your email address will not be published. Required fields are marked *