ಮುಖ್ಯಾಧಿಕಾರಿ ಮೇಲೆ ಹಲ್ಲೆ ಖಂಡಿಸಿ ಪೌರ ಸೇವಾ ನೌಕರರಿಂದ ತಹಸಿಲ್ದಾರಗೆ ಮನವಿ
ಕಲಬುರ್ಗಿ ಪುರಸಭೆಯ ಮುಖ್ಯಾಧಿಕಾರಿ ಮೇಲೆ ಪುರಸಭೆ ಸದಸ್ಯ ಹಾಗೂ ಆತನ ಸಹಚರರು ಹಲ್ಲೆ ಮಾಡಿರುವದನ್ನು ಖಂಡಿಸಿ ಗೋಕಾಕ ತಾಲೂಕಿನ ಪಟ್ಟಣ ಪಂಚಾಯತ, ಪುರಸಭೆ ಹಾಗೂ ನಗರ ಸಭೆಯ ಅಧಿಕಾರಿಗಳು ಗೋಕಾಕ ತಹಸೀಲ್ದಾರರಿಗೆ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘ (ರಿ) ಕೊಣ್ಣೂರ ಪುರಸಭೆಯ ಅದ್ಯಕ್ಷರಾದ ಬಾಳನಾಯಕ ಕುಮರೇಶಿ ಹಾಗೂ ಉಪಾದಕ್ಷರಾದ ರಮೇಶ ಬವಾನೆ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.
ಪುರಸಭೆ ಸದಸ್ಯ ಆನಂದಕುಮಾರ ಟೈಗರ್ ಹಾಗೂ ಆತನ ಸಹಚರರು ಮಂಗಳವಾರ ಮದ್ಯಾನ್ಹ 3.30ಕ್ಕೆ ಕಚೇರಿಯಲ್ಲಿಯೆ ಮುಖ್ಯಾದಿಕಾರಿ ಅಭಯಕುಮಾರ ಮೇಲೆ ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ನಕಲಿ ಬಿಲಗಳಿಗೆ ಸಹಿ ಮಾಡಲು ನಿರಾಕರಿಸದ್ದಕ್ಕೆ ಹಲ್ಲೆ ಮಾಡಿದ್ದಾರೆಂದು ಮುಖ್ಯಾಧಿಕಾರಿ ಚಿಂಚೊಳಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ,
ಇನ್ನು ಈ ರೀತಿ ಪದೆ ಪದೆ ಪುರಸಭೆಯ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಮೇಲೆ ದೈಹಿಕ ಹಲ್ಲೆ ನಡೆಯುತ್ತಿದ್ದು ಇದರಿಂದ ಅದಿಕಾರಿಗಳಿಗೆ ಹಾಗೂ ಸಿಬ್ಬಂದಿಗಳು ಭಯದಲ್ಲಿ ಕಾರ್ಯನಿರ್ವಹಿಸಲು ಆಗುತ್ತಿದೆ, ಆದ್ದರಿಂದ ಸ್ಥಳಿಯ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರ ಮೇಲೆ ಹಲ್ಲೆಯಾಗದಂತೆ ಸರಕಾರ ಭದ್ರತೆ ನೀಡಬೇಕೆಂದು ಗೋಕಾಕ ತಹಸಿಲ್ದಾರ ಮೂಲಕ ಮನವಿ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ಜಿಲ್ಲಾ ಪೌರ ಸೇವಾ ನೌಕರರ ಸಂಘದ ಉಪಾದಕ್ಷರಾದ ಎಮ್,ಎಚ್,ಗಜಾಕೋಶ, ಜಿಲ್ಲಾಕಾರ್ಯದರ್ಶಿ ಆನಂದ ಬಡಾಯಿ, ಮಲ್ಲಾಪುರ ಪುರಸಭೆಯ ನೌಕರರ ಸಂಘದ ಅದ್ಯಕ್ಷ ಅನೀಲ ಕಾಂಬಳೆ, ಕಂದಾಯ ನೀರಿಕ್ಷಕರಾದ ಯಲ್ಲಪ್ಪ ಚಲುವಾದಿ,ಕಂದಾಯ ಅಧಿಕಾರಿ ರಮೇಶ ಸೊನ್ನದ ಹಾಗೂ ಇನ್ನುಳಿದ ಸಿಬ್ಬಂದಿಗಳು ಉಪಸ್ಥಿತರಿದ್ದರು.