Breaking News

ಸರಗಳ್ಳತನ,ಬೈಕ್ ಕಳ್ಳರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸ್,

Spread the love

ಸರಗಳ್ಳತನ,ಬೈಕ್ ಕಳ್ಳರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸ್,

ಗೋಕಾಕ ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಚೈನ್
ಸ್ಟ್ಯಾಚಿಂಗ ಹಾಗೂ ಮೋಟಾರ ಸೈಕಲಗಳು ಕಳ್ಳತನವಾಗುತ್ತಿದ್ದ ಬಗ್ಗೆ ಪ್ರಕರಣಗಳು ದಾಖಲಾಗಿದ್ದು ಇದರಿಂದ ಗೋಕಾಕದ ಜನತೆ ಭಯದ ವಾತಾವರಣದಲ್ಲಿ ಬದುಕುವಂತಾಗಿತ್ತು,

ಹೇಗಾದರೂ ಮಾಡಿ ಕಳ್ಳರನ್ನು ಹಿಡಿದು ಗೋಕಾಕ ಜನತೆಗೆ ನೆಮ್ಮದಿ ಜೀವನ ನೀಡಬೇಕೆಂಬ ಉದ್ದೇಶದಿಂದ ಕಳ್ಳರ ಪತ್ತೆಗಾಗಿ ಬೆಳಗಾವಿ ಆರಕ್ಷಕ ಅದೀಕ್ಷಕರಾದ ಸಂಜೀವ ಪಾಟೀಲ ಹಾಗೂ ಬೆಳಗಾವಿ ಹೆಚ್ಚುವರಿ ಎಸ್ ಪಿ ಮಹಾನಿಂಗ ನಂದಗಾವಿರವರು ಮತ್ತು ಗೋಕಾಕ ಡಿ,ಎಸ್,ಪಿ,
ಮನೋಜಕುಮಾರ ನಾಯಿಕರವರ ಮಾರ್ಗದರ್ಶನದಲ್ಲಿ, ಗೋಕಾಕ ವೃತ್ತದ ಸಿಪಿಐ ಗೋಪಾಲ ಆರ್ ರಾಠೋಡ ರವರ ನೇತೃತ್ವದಲ್ಲಿ ತಂಡ ರಚಿಸಿ, ತಂಡದಲ್ಲಿ ಗೋಕಾಕ ಶಹರ ಠಾಣೆಯ ಪಿ.ಎಸ್.ಐ ಎಮ್ ಡಿ ಘೋರಿ ಹಾಗೂ ಎ.ಎಸ್.ಐ ರವರಾದ ರಮೇಶ ಹಡಪದ ಮತ್ತು ಅಪರಾಧ ವಿಭಾಗದ ಸಿಬ್ಬಂದಿಗಳಾದ ಬಿ.ವಿ ನೇರಲೆ,ಸುರೇಶ ಈರಗಾರ,ಮಲ್ಲಪ್ಪ ಗಿಡಗಿರಿ, ಸಚೀನ ಹೊಳೆಪ್ಪಗೋಳ ,ವಿಠಲ ನಾಯಕ ,ರಮೇಶ ಮುರನಾಳೆ ಇವರೆಲ್ಲರನ್ನೊಳಗೊಂಡ ತಂಡ ರಚಿಸಿ ಕಳ್ಳತನ ಮತ್ತು ಸ್ನಾಚಿಂಗ್ ಪ್ರಕರಣದಲ್ಲಿ ಆರೋಪಿತರನ್ನು ತಪಾಸಣೆ ಮಾಡುತ್ತಿರುವಾಗ 25-07-2022 ರಂದು ಬೆಳಿಗ್ಗೆ 06-15 ಗಂಟೆಯ ಸುಮಾರಿಗೆ ಅಪರಾಧ ವಿಭಾಗದ ಸಿಬ್ಬಂದಿ ಜನರು ಗೋಕಾಕದ ಯೋಗಿಕೊಳ್ಳ ರಸ್ತೆಯಲ್ಲಿ ಮೋಟಾರ ಸೈಕಲಗಳ ಮೇಲೆ
ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಮೂವರನ್ನು ಹಿಡಿದುಕೊಂಡು ಠಾಣೆಗೆ ತಂದು ವಿಚಾರಣೆಗೆ ಒಳಪಡಿಸಿದಾಗ ಸದರಿಯವರು ತಿರುಗಾಡುತ್ತಿದ್ದ ಎರಡು ಮೋಟಾರ್ ಸೈಕಲಗಳು ಗೋಕಾಕ ಶಹರ ಠಾಣೆಯ ಹದ್ದಿಯಲ್ಲಿ ಕಳ್ಳತನವಾದವುಗಳು ಇದ್ದದ್ದು ಎಂದು ತಿಳಿಯಿತು,ಸದರಿ ಮೂರು ಜನರಿಗೆ ಕುಲಂಕುಷವಾಗಿ
ವಿಚಾರಣೆಗೆ ಒಳಪಡಿಸಿದಾಗ ಇದಲ್ಲದೇ ಇದೇ ವರ್ಷ ಫೆಬ್ರುವರಿ ತಿಂಗಳಲ್ಲಿ ಮಾರ್ಕೆಟದಲ್ಲಿ
ಗುಲ್ಲರವರ ಅಂಗಡಿಯ ಮುಂದೆ ಒಬ್ಬ ಮಹಿಳೆಯ ಬಂಗಾರದ ಮಂಗಳಸೂತ್ರವನ್ನು ಹಾಗೂ
ವಿದ್ಯಾ ನಗರದ ಬಸವ ಮಂಟಪದ ಹತ್ತಿರ ಜೂನ್ ತಿಂಗಳಲ್ಲಿ ಇನ್ನೊಬ್ಬ ಮಹಿಳೆಯ ಕೊರಳಲ್ಲಿಯ ಬಂಗಾರದ ಮಂಗಳಸೂತ್ರವನ್ನು ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿರು,ಸದರಿಯವುಗಳು ಗೋಕಾಕ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 08/2022 ಹಾಗೂ 63/2022
ನೇದ್ದವುಗಳಲ್ಲಿ ಆರೋಪಿತರು ಸ್ಪ್ಯಾಚಿಂಗ ಮಾಡಿದ್ದ ಬಂಗಾರದ ಮಂಗಳಸೂತ್ರಗಳು ಇದ್ದು, ಸದರಿ ಆರೋಪಿತರಿಂದ 50 ಗ್ರಾಂ ಬಂಗಾರದ ಮಂಗಳಸೂತ್ರಗಳು ಅ.ಕಿ. 2,75,000 /- ರೂ ಹಾಗೂ
2 ಮೋಟಾರ್ ಸೈಕಲಗಳು 80,000 /- ರೂ ಕಿಮ್ಮತ್ತಿನವುಗಳನ್ನು ವಶಪಡಿಸಿಕೊಂಡಿದ್ದು ಸದರಿ
ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ, ಗೋಕಾಕ ಪೊಲಿಸರ ತಂಡದ ಈ ಕಾರ್ಯವನ್ನು ಬೆಳಗಾವಿ ಆಧಿಕ್ಷಕರು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆಂದು ತಿಳಿದು ಬಂದಿದೆ,

ಒಟ್ಟಾರೆಯಾಗಿ ಗೋಕಾಕದಲ್ಲಿನ ಜನತೆ ಪೋಲಿಸರ ಈ ಕಾರ್ಯದಿಂದ ನಿಟ್ಟುಸಿರು ಬಿಟ್ಟಂತಾಗಿದೆ.


Spread the love

About Fast9 News

Check Also

ನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ

Spread the loveನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ …

Leave a Reply

Your email address will not be published. Required fields are marked *