ಗೋಕಾಕ: ನೂತನವಾಗಿ ಪ್ರಾರಂಭವಾಗಿರುವ ಫಾಸ್ಟ್ ೯ ನ್ಯೂಸ್ ಅಂತರ್ಜಾಲ ಸುದ್ದಿ ವಾಹಿನಿ ರಾಜ್ಯದ ಜನರ ನಾಡಿಮಿಡಿತವಾಗಿ ಕಾರ್ಯನಿರ್ವಹಿಸಲಿ ಎಂದು ಬಿಜೆಪಿ ನಗರ ಘಟಕ ಅಧ್ಯಕ್ಷ ಭೀಮಶಿ ಭರಮಣ್ಣವರ ಹೇಳಿದರು.
ಅವರು, ಮಂಗಳವಾರದ0ದು ನಗರದಲ್ಲಿ ನೂತನವಾಗಿ ಪ್ರಾರಂಭಗೊ0ಡ ಫಾಸ್ಟ್ ೯ ನ್ಯೂಸ್ ಅಂತರ್ಜಾಲ ಸುದ್ದಿ ವಾಹಿನಿಗೆ ಅಧಿಕೃತವಾಗಿ ಚಾಲನೆ ನೀಡಿ ಮಾತನಾಡಿ, ಸಮಾಜ ಏಳ್ಗೆಯಲ್ಲಿ ಪರ್ತಕರ್ತರ ಪಾತ್ರ ಬಹುಮುಖ್ಯವಾಗಿದ್ದು, ಕಳೆದ ಹಲವು ವರ್ಷಗಳಿಂದ ವಿವಿಧ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತ ಬಂದಿರುವ ಹಿರಿಯ ಪತ್ರಕರ್ತ ಮನೋಹರ ಮೇಗೆರಿ ಅವರು ನೂತನ ಸುದ್ದಿ ವಾಹಿನಿ ಹೊರ ತಂದಿದ್ದು, ಫಾಸ್ಟ್ ೯ ನ್ಯೂಸ್ ಅಂತರ್ಜಾಲ ಸುದ್ದಿ ವಾಹಿನಿ ಸಮಾಜಿಕ ಜಾಲ ತಾಣಗಳಲ್ಲಿ ಒಳ್ಳೆಯ ಸುದ್ದಿ ವಾಹಿನಿಯಾಗಿ ಹೊರಹೊಮ್ಮಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಬಸವರಾಜ ಕುರೇರ, ಪತ್ರಕರ್ತರಾದ ಉಮೇಶ ನಂದಗಾವಿ, ಭೀಮಶಿ ತಳವಾರ, ವಿಠ್ಠಲ ಕುಂಬಾರ, ಚೇತನ ಕಡಕಭಾವಿ, ಶೆಟ್ಟೆಪ್ಪ ಹರಿಜನ, ಸಂತೋಷ ನೋಗನಾಳ, ಪ್ರದೀಪ ನಾಗನೂರ, ಸಚೀನ ರಾವುತ, ರಾಮು ಹೊಂಗಲ ಪ್ರೇಸ್ ಅಸೋಶಿಯೇಷನ್ ಸದಸ್ಯರುಗಳು ಇದ್ದರು.