Breaking News

ಗೋಕಾಕ ಪೋಲಿಸರಿಂದ ಭರ್ಜರಿ ಬೇಟೆ,ವಾಹನ ಸವಾರರ ಸುಲಿಗೆ ಮಾಡುತಿದ್ದ ಡಕಾಯಿತರ ಬಂಧನ.

Spread the love

ಗೋಕಾಕ ಪೋಲಿಸರಿಂದ ಭರ್ಜರಿ ಬೇಟೆ,ವಾಹನ ಸವಾರರ ಸುಲಿಗೆ ಮಾಡುತಿದ್ದ ಡಕಾಯಿತರ ಬಂಧನ.

ಗೋಕಾಕ : ನಾಲ್ಕು ದಿನಗಳ ಹಿಂದೆ ಗೋಕಾಕದಿಂದ ಕನಸಗೇರಿಗೆ ಹೊಗುವ ಮದ್ಯ ಮಾರ್ಗದಲ್ಲಿ ಮೋಟರ್ ಬೈಕದವರನ್ನು ಅಡ್ಡ ಗಟ್ಟಿ ತಡೆದು ಅವರಿಂದ ಬಂಗಾರದ ಚೈನ್ ಮತ್ತು ಉಂಗುರವನ್ನು ಸುಲಿಗೆ-ಡಕಾಯಿತಿ ಮಾಡಿಕೊಂಡು ಹೋಗುತ್ತಿದ್ದ ಡಕಾಯಿತರ ತಂಡವನನ್ನು
ಮತ್ತು ಗೋಕಾಕ ಶಹರ, ಅಂಕಲಗಿ ಠಾಣೆ ಮತ್ತು ಗೋಕಾಕ ಗ್ರಾಮೀಣ ಹಳ್ಳಿಗಳಲ್ಲಿ ದರೋಡೆ, ಸುಲಿಗೆ, ಮೋಟಾರ ಸೈಕಲ ಕಳ್ಳತನ, ಜಾನುವಾರು ಕಳ್ಳತನ ಮಾಡುತಿದ್ದ ಕಳ್ಳರನ್ನು ಬಂದಿಸುವಲ್ಲಿ ಗೋಕಾಕ ಮತ್ತು ಅಂಕಲಗಿ ಪೋಲಿಸರ ತಂಡವು ಯಶಸ್ವಿಯಾಗಿದೆ.

ದಿ: 14/9/23ರಂದು ಕನಸಗೇರಿ ಗ್ರಾಮದ ಗುರುನಾಥ ವೀರುಪಾಕ್ಷ ಬಡಿಗೇರ ಇವರು ಗೋಕಾಕದಿಂದ ಕನಸಗೇರಿಗೆ ಹೋಗುವಾಗ ಅವರ ಮೊಟರ ಸೈಕಲ್ ಅಡ್ಡಗಟ್ಟಿ ತಡೆದು ಅವರಿಂದ ಬಂಗಾರದ ಚೈನ ಮತ್ತು ಉಂಗುರವನ್ನು ಸುಲಿಗೆ ಮಾಡಿಕೊಂಡು ಹೊಗಿದ್ದು ,ಗೋಕಾಕ ಶಹರ ,ಗ್ರಾಮೀಣ, ಅಂಕಲಗಿ ಪೋಲಿಸ್ ಠಾಣೆಯ ಹಳ್ಳಿಗಳಲ್ಲಿ ದರೋಡೆ,ಸುಲಿಗೆ,ಮೊಟಾರ ಸೈಕಲ ಕಳ್ಳತನ,ಜಾನುವಾರುಗಳ ಕಳ್ಳತನ ಪ್ರಕರಣ ಗೋಕಾಕ ಗ್ರಾಮೀಣ ಪೊಲಿಸ್ ಠಾಣೆಯಲ್ಲಿ ದಾಖಲಾಗಿದ್ದವು.

ಬೆಳಗಾವಿ ಎಸ್,ಪಿ, ಭೀಮಾಶಂಕರ ಗುಳೇದ ಇವರು ಪ್ರಕರಣಗಳ ಪತ್ತೆಗಾಗಿ ಹೆಚ್ಚುವರಿ ಎಸ್,ಪಿ,ಎಂ,ವೇಣುಗೋಪಾಲ ಮತ್ತು ಗೋಕಾಕ ಉಪವಿಬಾಗ ವಲಯದ ಡಿ,ಎಸ್,ಪಿ, ದೂದಪೀರ್ ಮುಲ್ಲಾ ಇವರ ಮಾರ್ಗದರ್ಶನದಲ್ಲಿ ಸಿಪಿಆಯ್ ಗೋಪಾಲ ಆರ್.ರಾಠೋಡ ನೇತೃತ್ವದಲ್ಲಿ ತಂಡವನ್ನು ರಚಿಸಿ ದಿ :18-09-2023 ರಂದು *ಬೆನಚಿನಮರಡಿ ಖಿಲಾರಿ ಗ್ಯಾಂಗ್ ಹಾಗೂ ಗೋಕಾಕದ ಎಸ್.ಪಿ ಸರ್ಕಾರ ಗ್ಯಾಂಗ್*ಗಳ 9ಜನ ಡಕಾಯಿತರನ್ನು ಬಂಧಿಸಿ ಸುಲಿಗೆ,ದರೋಡೆ, ಮೋಟಾರ ಸೈಕಲ ಕಳ್ಳತನ, ಜಾನುವಾರು ಕಳ್ಳತನ ಮಾಡಿದ್ದ ಸುಮಾರು *7,89,700/- ಮೌಲ್ಯದ ಚಿನ್ನಾಭರಣ, ನಗದು ಹಣ, 09 *ಮೊಬೈಲಗಳು, ಮತ್ತು 06 *ಮೋಟಾರ ಸೈಕಲಗಳು, ಹಾಗೂ *ಒಂದು ಅಶೋಕ ಲೈಲ್ಯಾಂಡ್ ವಾಹನ ಹಾಗೂ 04* *ಜಂಬೆ-ತಲವಾರಗಳನ್ನು* ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಸುಮಾರು 03 ಸುಲಿಗೆ-ಡಕಾಯಿತಿ, 02 ಜಾನುವಾರು ಕಳ್ಳತನ, ಹಾಗೂ ಮೋಟಾರ ಸೈಕಲ ಕಳ್ಳತನ
ಪ್ರಕರಣಗಳನ್ನು ಪತ್ತೆ ಹಚ್ಚಿ ಡಕಾಯಿತಿ ಗ್ಯಾಂಗಿನವರನ್ನು ಬಂಧಿಸುವಲ್ಲಿ ಯಶಸ್ವಿಯಾದ ಗೋಕಾಕ ಸಿ,ಪಿ,ಆಯ್ ಗೋಪಾಲ ಆರ್‌.ರಾಠೋಡ.ಗೋಕಾಕ ಗ್ರಾಮೀಣ ಪಿ,ಎಸ್,ಐ, ಕಿರಣ ಮೋಹಿತೆ ಗೋಕಾಕ ಶಹರ ಪೋಲಿಸ್ ಠಾಣೆಯ ಪಿ.ಎಸ್.ಐ ಎಮ್.ಡಿ.ಘೋರಿ, ಅಂಕಲಗಿ ಪಿ,ಎಸ್,ಐ, ಎಚ್.ಡಿ,ಯರಝರ್ವಿ ಮತ್ತು ಸಿಬ್ಬಂದಿಗಳಾದ,ಬಿ,ವಿ,ನೇರ್ಲಿ,ವೈ,ಆರ್,ನಾಯಕ,ಡಿ,ಜಿ,ಕೊಣ್ಣೂರ,ಎಮ್,ಎಮ್,ಹಾಲೊಳ್ಳಿ,ಜಿ,ಎಚ್,ಗುಡ್ಲಿ,ಎಮ್,ಬಿ,ತಳವಾರ,ಕೆ,ಆಯ್,ತಿಳಿಗಂಜಿ,ಸಂತೋಷ ರುದ್ರಮಟ್ಟಿ ಇವರ ಕಾರ್ಯವನ್ನು ಎಸ್.ಪಿ. ಸಾಹೇಬರು ಮುಕ್ತ ಕಂಠದಿಂದ ಶ್ಲಾಘಿಸಿರುತ್ತಾರೆ. ಹಾಗೂ ಇದೇ ರೀತಿ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಸೂಚಿಸಿರುತ್ತಾರೆ.

ಇದರ ಜೊತೆಯಲ್ಲಿ ಬೆಳಗಾವಿ ಎಸ್.ಪಿ ರವರು ಬೆಲೆ ಬಾಳುವ ಚಿನ್ನಾಭರಣಗಳನ್ನು ಬ್ಯಾಂಕ ಲಾಕರಗಳಲ್ಲಿ
ಇಡುವಂತೆ ಹಾಗೂ ಮೈಮೇಲೆ ಆಭರಣಗಳನ್ನು ಹಾಕಿಕೊಂಡು ಮನೆಯಿಂದ ಹೊರಗಡೆ ಹೋಗುವಾಗ
ಡಕಾಯಿತಿ-ಸುಲಿಗೆಗಾರರಿಂದ ಎಚ್ಚರಿಕೆಯಿಂದ ಇರಲು, ಹಾಗೂ ಲಾಕಡ ಹೌಸಗಳ ಬಗ್ಗೆ ಸರಹದ್ದಿನ ಪೊಲೀಸ
ಠಾಣೆಗಳಿಗೆ ಮಾಹಿತಿ ನೀಡಲು ಸಾರ್ವಜನಿಕರಲ್ಲಿ ಕೋರಿದರು.


Spread the love

About Fast9 News

Check Also

ಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ

Spread the loveಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ ಗೋಕಾಕ- ಹಿಂದುಳಿದ ಹಣಬರ ಸಮಾಜವು ಸಾಮಾಜಿಕವಾಗಿ, …

Leave a Reply

Your email address will not be published. Required fields are marked *