ಗಣೇಶ ಹಬ್ಬ ಮತ್ತು ಈದ್ ಮಿಲಾದ್ ನಿಮಿತ್ಯ ಗೋಕಾಕ ಪೋಲಿಸರಿಂದ ಪಥಸಂಚಲನ.
ಗೋಕಾಕ : ಗಣೇಶ ಚತುರ್ಥಿ ಹಬ್ಬ ಮತ್ತು ಈದ ಮಿಲಾದ್ ಹಬ್ಬದ ಹಿನ್ನೆಲೆ ಯಾವುದೇ ಅಹಿತರ ಘಟನೆ ನಡೆಯದಂತೆ ಮತ್ತು ಸಾರ್ವಜನಿಕರು ಯಾವುದೇ ಆತಂಕವಿಲ್ಲದೇ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸುವ ನಿಟ್ಟಿನಲ್ಲಿ ಗೋಕಾಕ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಗೋಕಾಕ ಉಪವಿಬಾಗದ ಡಿ,ಎಸ್,ಪಿ, ದೂದಪಿರ್ ಮುಲ್ಲಾ ಮಾರ್ಗದರ್ಶನದಂತೆ ಹಾಗೂ ಗೋಕಾಕ ಸಿ,ಪಿ,ಆಯ್, ಗೋಪಾಲ ರಾಥೋಡ ಇವರ ನೇತೃತ್ವದಲ್ಲಿ ಶಹರ ಪೋಲಿಸ್ ಠಾಣೆಯ ಪಿ,ಎಸ್,ಐ, ಎಮ್,ಡಿ,ಘೋರಿ ಮತ್ತು ಗ್ರಾಮೀಣ ಪೋಲಿಸ ಠಾಣೆಯ ಪಿ,ಎಸ್,ಐ, ಕಿರಣ ಮೋಹಿತೆ ಇವರ ಸಮ್ಮುಖದಲ್ಲಿ ಹಾಗೂ ಸಶಸ್ತ್ರ ಮಿಸಲು ಪಡೆ ಮತ್ತು ಸ್ಥಳಿಯ ಪೊಲೀಸರೊಂದಿಗೆ ಪಥಸಂಚಲನ ನಡೆಸಿದರು.
ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್, ಮರಾಠಾ ಗಲ್ಲಿ, ಸೋಮವಾರ ಪೇಠ, ಅಪ್ಸರಾ ಕೂಟ, ಸಿಂದಿ ಕೂಟ, ಉಪ್ಪಾರ ಗಲ್ಲಿ, ಒಡ್ಡರ ಗಲ್ಲಿ, ಕೊಳವಿ ಹನುಮಾನ ದೇವಸ್ಥಾನ, ಕುರುಬರ ಪೂಲ, ಆದಿಜಾಂಬವ ನಗರ, ವಿವೇಕಾನಂದ ನಗರ, ಲಕ್ಷ್ಮೀ ಟಾಕೀಜ ರಸ್ತೆ ಮುಖಾಂತರ ಸಾಗಿ ಕುರುಬರ ದಡ್ಡಿಯಲ್ಲಿ ಪಥ ಸಂಚಲನ ಅಂತ್ಯಗೊಂಡಿತ್ತು, ದಾರಿಯುದ್ದಕ್ಕೂ ಗಲ್ಲಿಯಲ್ಲಿ ಪಥಸಂಚಲನ ಸಾಗುತ್ತಿರುವಾಗ ಸಾರ್ವಜನಿಕರು ನೋಡುತ್ತಾ ನಿಂತಿದ್ದರು.