Breaking News

ಗದ್ದಲದ ನಡುವೆ ಗುಳೇದಗುಡ್ಡ ಪುರಸಭೆಯ ಪ್ರಥಮ ಸಾಮಾನ್ಯ ಸಭೆ

Spread the love

ಗದ್ದಲದ ನಡುವೆ ಗುಳೇದಗುಡ್ಡ ಪುರಸಭೆಯ ಪ್ರಥಮ ಸಾಮಾನ್ಯ ಸಭೆ

ಸ್ಥಳೀಯ ಪುರಸಭೆಯ ಪ್ರಸಕ್ತ ಅಡಳಿತ ಮಂಡಳಿಯ ಪ್ರಥಮ ಸಾಮಾನ್ಯ ಸಭೆಯಲ್ಲಿ ಗದ್ದಲದ ನಡುವೆ ಗುಳೇದಗುಡ್ಡ ಪುರಸಭೆ ಸಾಮಾನ್ಯ ಸಭೆ ಜರುಗಿತು.
ಮಂಗಳವಾರ ಪುರಸಭೆ ಅಧ್ಯಕ್ಷೆ ಶಿಲ್ಪಾ ಹಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ 1.68 ಕೋಟಿ ರೂ. ವೆಚ್ಚದಲ್ಲಿ ಎಸ್‍ಎಫ್‍ಸಿ ವಿಶೇಷ ಅನುದಾದಲ್ಲಿ ನಗರದ ಸಂಗನಬಸಪ್ಪನ ಗದ್ದುಗೆಯಿಂದ ಎಸ್‍ಟಿಪಿ ವರೆಗಿನ ಒಳಚರಂಡಿ ಯುಜಿಡಿ ಕಾಮಗಾರಿಯ ಬಗ್ಗೆ ಸಂಪೂರ್ಣ ಎಸ್ಟಿಮೇಟ್ ತಯಾರಿಸಿ, ಸಭೆಗೆ ತರುವಂತೆ ಸದಸ್ಯರು ಇಲಾಖೆಗೆ ಸೂಚಿಸಿದರು.
ಕಳೆದ ಮೂರು ವರ್ಷಗಳಿಂದ ಪುರಸಭೆ ಲೆಕ್ಕಪತ್ರ ಆಗಿಲ್ಲ. ಇದರಿಂದ ಪುರಸಭೆ ಹೆಚ್ಚಿನ ಅನುದಾನ ಪಡೆಯಲು ತೊಡಕಾಗಿದೆ. ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿ, ಮಾ.31ರ ಒಳಗಾಗಿ ಲೆಕ್ಕಪತ್ರ ಪೂರ್ಣಗೊಳ್ಳಬೇಕು ಎಂದು ಸದಸ್ಯ ವಿಠ್ಠಲ ಕಾವಡೆ ಸೂಚಿಸಿದರು. ಇದಕ್ಕೆ ವಿರೋಧ ಪಕ್ಷದ ಸದಸ್ಯರೂ ಕೂಡಾ ಬೆಂಬಲ ವ್ಯಕ್ತಪಡಿಸಿ, ಕೂಡಲೇ ಲೆಕ್ಕಪತ್ರ ಪೂರ್ಣಗೊಳಿಸುವಂತೆ ಅಧ್ಯಕ್ಷರಿಗೆ ಸೂಚಿಸಿದರು.
ಗುಳೇದಗುಡ್ಡ ವ್ಯಾಪ್ತಿಯಲ್ಲಿ ಬಡಾವಣೆ ಅಭಿವೃದ್ಧೀಗಾಗಿ ಸಲ್ಲಿಸಿರುವ ನಾಲ್ಕು ಅರ್ಜಿಗಳಲ್ಲಿ ಎರಡು ನಕ್ಷೆಗಳನ್ನು ಪರಿಶೀಲಿಸಿದ್ದೇವೆ. ಇನ್ನೆರಡು ನಕ್ಷೆಗಳನ್ನು ಪರೀಶಿಲಿಸಿಲ್ಲ. ಹೀಗಾಗಿ ಈ ಸಭೆಯಲ್ಲಿ ಎರಡು ನಕ್ಷೆಗಳಿಗೆ ಅನುಮೋದನೆ ನೀಡಿ, ಮುಂದಿನ ಸಭೆಯಲ್ಲಿ ಇನ್ನೆರಡು ನಕ್ಷೆಗಳನ್ನು ಪರಿಶೀಲಿಸಿ ಅನುಮೋದನೆ ನೀಡಲಾಗುವುದು ಎಂದು ಆಡಳಿತ ಪಕ್ಷದ ಸದಸ್ಯರು ಹೇಳಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ಸದಸ್ಯರಾದ ಉಮೇಶ ಹುನಗುಂದ, ಪ್ರಶಾಂತ ಜವಳಿ, ಸಂತೋಷ ನಾಯನೇಗಲಿ ಅವರು, ಈ ಸಭೆಯಲ್ಲಿಯೇ ಎರಡಕ್ಕೆ ಮಾತ್ರ ಅನುಮೋದನೆ ನೀಡುವುದೇಕೆ. ಅದಕ್ಕೆ ಯಾರ ಒತ್ತಡ ಇದೆ? ಅನುಮೋದನೆಗೆ ಆರು ತಿಂಗಳ ಕಾಲಾವಕಾಶವಿದೆ. ಈ ನಾಲ್ಕು ನಕಾಶಗಳನ್ನು ಮುಂದಿನ ಸಭೆಯಲ್ಲಿಯೇ ಅನುಮೋದನೆ ನೀಡೋಣ ಇಲ್ಲವೇ ಎಲ್ಲಾ ನಾಲ್ಕು ನಕಾಶಗಳಿಗೆ ಈ ಸಭೆಯಲ್ಲಿಯೇ ನೀಡಬೇಕು ಎಂದು ಪಟ್ಟು ಹಿಡಿದರು. ಈ ವಿಷಯ ಸಭೆಯಲ್ಲಿ ಮತಕ್ಕೆ ಹಾಕುವ ವಿಷಯ ಪ್ರಸ್ತಾಪವಾದಾಗ ಬಿಜೆಪಿ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಈ ವಿಷಯಕ್ಕೆ ಸಭೆಯಲ್ಲಿ ಕೆಲಕಾಲ ಸದಸ್ಯರ ನಡುವೆ ವಾಗ್ವಾದ ನಡೆಯಿತು.
ಪುರಸಭೆಗೆ ಖಾಯಂ ಮುಖ್ಯಾಧಿಕಾರಿಗಳು ಇಲ್ಲ, ಮ್ಯಾನೇಜರ್ ಇಲ್ಲ, ಅಭಿಯಂತರರು ಇಲ್ಲ. ಹೀಗಾಗಿ ನಗರದ ಅಭಿವೃದ್ಧಿಗೆ ತೊಡಕಾಗಿದೆ. ಈ ಕ್ಷೇತ್ರದ ಶಾಸಕರೂ, ವಿರೋಧ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಸದಸ್ಯ ಉಮೇಶ ಹುನಗುಂದ ಅಧ್ಯಕ್ಷರನ್ನು ಒತ್ತಾಯಿಸಿದರು.
ಉಪಾಧ್ಯಕ್ಷೆ ಷರಿಪಾ ಮಂಗಳೂರು, ಸದಸ್ಯರಾದ ರಫಿಕ್ ಕಲ್ಬುರ್ಗಿ, ಪ್ರಶಾಂತ ಜವಳಿ, ವಿನೋದ ಮದ್ದಾನಿ, ಅಮರೇಶ ಕವಡಿಮಟ್ಟಿ, ರಾಜು ಹೆಬ್ಬಳ್ಳಿ, ಹನಮಂತ ಗೌಡ್ರ, ರಾಜೇಶ್ವರಿ ಉಂಕಿ, ಕಾಶೀನಾಥ ಕಲಾಲ, ಯಲ್ಲವ್ವ ಗೌಡ್ರ, ವಿದ್ಯಾ ಮುರುಗೋಡ, ಜ್ಯೋತಿ ಗೋವಿನಕೊಪ್ಪ, ಸುಮಿತ್ರಾ ಕೋಡುಬಳಿ, ಜ್ಯೋತಿ ಆಲೂರ, ವಂದನಾ ಭಟ್ಟಡ, ಶಾಮು ಮೇಡಿ, ಯಲ್ಲಪ್ಪ ಮನ್ನಿಕಟ್ಟಿ, ಅಭಿಯಂತರ ಎ.ಕೆ. ಮಕಾಂದಾರ, ಶಿವಾನಂದ ಆಲೂರ, ಕುಮಾರ ತಟ್ಟಿಮಠ, ಮಹೇಶ ನಂದಿಕೇಶ್ವರಮಠ, ಸಿ.ಎಸ್.ಮಠಪತಿ, ಶರಣಯ್ಯ ಗಣಾಚಾರಿ ಮತ್ತಿತರರು ಇದ್ದರು.


Spread the love

About fast9admin

Check Also

ಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ

Spread the loveಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ ಗೋಕಾಕ- ಹಿಂದುಳಿದ ಹಣಬರ ಸಮಾಜವು ಸಾಮಾಜಿಕವಾಗಿ, …

Leave a Reply

Your email address will not be published. Required fields are marked *