ಪ್ರತಿಭಾ ಕಾರಂಜಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದನೆ
ಗೋಕಾಕ : ತಾಲೂಕಿನ ಖನಗಾಂವ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಕೊಣ್ಣೂರ ಕ್ಲಸ್ಟರ್‌ನ ಮಹಾವೀರ ನಗರದಲ್ಲಿರುವ ಆಚಾರ್ಯ ಶ್ರೀ ಶಾಂತಿಸಾಗರ ತಪೋವನ ಶಿಕ್ಷಣ ಸಂಸ್ಥೆ,ಕೊಣ್ಣೂರ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಆಂಗ್ಲ ಕಂಠಪಾಠ ಸ್ಪರ್ಧೆಯಲ್ಲಿ ಶ್ರಾವಣಿ ಅನೀಲ ಶೇಠೆ ಪ್ರಥಮ ಸ್ಥಾನಗಳಿಸಿದ್ದಾರೆ. ಮತ್ತು ಕ್ಲೆ ಮಾಡಲಿಂಗದಲ್ಲಿ ಗುರುರಾಜ ಕೆಂಪಣ್ಣಾ ನಾಯಕ ತೃತಿಯ ಸ್ಥಾನಗಳಿಸಿದ್ದಾರೆ. ಶಾಲಾ ಅದ್ಯಕ್ಷರಾದ ಜಿನ್ನಪ್ಪ ಚೌಗಲಾ,ಶಾಲೆಯ ಮುಖ್ಯಶಿಕ್ಷಕರಾದ ಕು,ಸುಧಾ ಪೂಜೇರಿ,ಸೇರಿದಂತೆ ಇನ್ನೂಳಿದ ಆಡಳಿತ ಮಂಡಳಿಯ ಸರ್ವಸದಸ್ಯರು,ಶಿಕ್ಷಕಿಯರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.