Breaking News

ಬಿಜೆಪಿ ಅಧ್ಯಕ್ಷರಾಗಿ ಜೆಪಿ ನಡ್ಡಾ ಅವಧಿ ವಿಸ್ತರಣೆ

Spread the love

ಬಿಜೆಪಿ ಅಧ್ಯಕ್ಷರಾಗಿ ಜೆಪಿ ನಡ್ಡಾ ಅವಧಿ ವಿಸ್ತರಣೆ

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಜೆಪಿ ನಡ್ಡಾ ಅವರ ಅಧಿಕಾರಾವಧಿಯನ್ನು ಮಂಗಳವಾರ ವಿಸ್ತರಿಸಲಾಗಿದೆ. ಈ ಮೂಲಕ 2024ರ ಲೋಕಸಭೆ ಚುನಾವಣೆಗೆ ಜೆಪಿ ನಡ್ಡಾ ಬಿಜೆಪಿ ಮುಖ್ಯಸ್ಥರಾಗಿ ಉಳಿಯಲಿದ್ದಾರೆ.

ನವದೆಹಲಿಯಲ್ಲಿ ಎರಡು ದಿನಗಳಿಂದ ನಡೆಯುತಿದ್ದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ನಡ್ಡಾ ಅವಧಿ ವಿಸ್ತರಣೆಯ ತೀರ್ಮಾನ ತೆಗೆದುಕೊಳ್ಳಲಾಗಿದೆ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಜೆಪಿ ನಡ್ಡಾ ಅವರ ಅಧಿಕಾರಾವಧಿಯನ್ನು ಜೂನ್ 2024 ರವರೆಗೆ ವಿಸ್ತರಿಸಲಾಗಿದೆ ಎಂದು ಬಿಜೆಪಿ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.

ಜೆಪಿ ನಡ್ಡಾ ಅವರ ನಾಯಕತ್ವದಲ್ಲಿ ನಾವು ಬಿಹಾರದಲ್ಲಿ ಅತಿ ಹೆಚ್ಚು ಬೆಳವಣಿಗೆ ಹೊಂದಿದ್ದೇವೆ. ಎನ್ಡಿಎ ಮಹಾರಾಷ್ಟ್ರದಲ್ಲಿ ಬಹುಮತ ಗಳಿಸಿತು. ಉತ್ತರ ಪ್ರದೇಶದಲ್ಲಿ ಗೆದ್ದಿತು ಮತ್ತು ಪಶ್ಚಿಮ ಬಂಗಾಳದಲ್ಲಿ ನಮ್ಮ ಸಂಖ್ಯೆ ಹೆಚ್ಚಾಯಿತು. ನಾವು ಗುಜರಾತ್ ನಲ್ಲೂ ಭರ್ಜರಿ ಗೆಲುವು ದಾಖಲಿಸಿದ್ದೇವೆ ಎಂದು ಅಮಿತ್ ಶಾ ಹೇಳಿದರು.


Spread the love

About Fast9 News

Check Also

ಇಂದು ಬೆಳಗಾವಿಯಲ್ಲಿ ನಡೆಯುವ ಬಿಜೆಪಿ ಸಭೆಯಲ್ಲಿ ಉಪ ಚುನಾವಣೆ ಘೊಷಣೆ ಸಾದ್ಯತೆ !!!!.

Spread the loveಇಂದು ಬೆಳಗಾವಿಯಲ್ಲಿ ನಡೆಯುವ ಬಿಜೆಪಿ ಸಭೆಯಲ್ಲಿ ಉಪ ಚುನಾವಣೆ ಘೊಷಣೆ ಸಾದ್ಯತೆ !!!!. ಬೆಳಗಾವಿ- ಬಿಜೆಪಿ ರಾಜ್ಯಾಧ್ಯಕ್ಷ …

Leave a Reply

Your email address will not be published. Required fields are marked *