ಯೋಧನ ತಾಯಿಯ ಮೇಲೆ ಹಲ್ಲೇ ಖಂಡಿಸಿ ಮಾಜಿ ಸೈನಿಕರಿಂದ ಪಾದಯಾತ್ರೆ ಮೂಲಕ ಪ್ರತಿಭಟನೆ
ಅಂಕಲಿ : ಅತ್ಯಂತ ಪ್ರತಿಕೂಲ ಸನ್ನಿವೇಶದಲ್ಲೂ ತಮ್ಮ ಪ್ರಾಣದ ಹಂಗು ತೊರೆದು ದೇಶದ ಗಡಿ ಕಾಯುವ ಯೋಧರು ನಮ್ಮ ದೇಶದ ಅಮೂಲ್ಯ ಆಸ್ತಿ ಅತಂಹ ಗಡಿ ಕಾಯುವ ಕರ್ತವ್ಯ ನಿರತ ಯೋಧನ ತಾಯಿಯ ಮೇಲೆ ಐದಾರು ಜನ ಹಲ್ಲೆ ಮಾಡಿದ್ದಾರೆ. ಅವರುಗಳ ವಿರುದ್ಧ ಸಾಮಾನ್ಯವಾದ ಪ್ರಕರಣವನ್ನು ಫೋಲಿಸ್ ಅಧಿಕಾರಿಗಳು ದಾಖಲು ಮಾಡಿದ್ದಾರೆಂದು ಮಾಜಿ ಸೈನಿಕ ಕ್ಷೇಮಾಭಿವೃದ್ಧಿ ಸಂಘದ ರಾಜಾಧ್ಯಕ್ಷರಾದ ಕೆ. ಶಿವಾನಂದ ಆರೋಪಿಸಿದ್ದಾರೆ.
ಅಂಕಲಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕಾಡಾಪೂರ ಗ್ರಾಮದ ಯೋಧನ ತಾಯಿಯಾದ ಶೋಭಾ ಮಾರುತಿ ನರೋಟ್ಟಿ ಅವರುಗಳ ಮೇಲೆ ರಸ್ತೆ ವಿವಾದ ಹಿನ್ನಲೆಯಲ್ಲಿ ಮಾರಣಾಂತಿಕ ಹಲ್ಲೆಗೊಳಗಾಗಿ ಅಂಕಲಿ ಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಆಸ್ಪತ್ರೆಗೆ ಮಾಜಿ ಸೈನಿಕ ಕ್ಷೇಮಾಭಿವೃದ್ಧಿ ಸಂಘದ ರಾಜಾಧ್ಯಕ್ಷರಾದ ಕೆ. ಶಿವಾನಂದ ಹಾಗೂ ಜಿಲ್ಲಾಧ್ಯಕ್ಷರು ಭೇಟಿ ನೀಡಿ ಹಲ್ಲೆಗೊಳಗಾದ ಯೋಧನ ತಾಯಿಗೆ ಧೈರ್ಯ ತುಂಬಿ ಆರೋಗ್ಯ ಹಾಗೂ ಗಾಯಗಳ ಬಗ್ಗೆ ವಿಚಾರಣೆ ನಡೆಸಿ ಹಲ್ಲೆಗೆ ಒಳಗಾದ ಯೋಧನ ತಾಯಿಯೊಂದಿಗೆ ರಾಜ್ಯದ ಮಾಜಿ ಸೈನಿಕ ಸಂಘ ಇರುತ್ತದೆ ಎಂದು ಹೇಳಿ ಮಾತನಾಡುತ್ತಾ. ಒರ್ವ ಯೋಧನ ತಾಯಿಗೆ ಈ ಸ್ಥಿತಿಯಾದರೆ ಸಾಮಾನ್ಯ ಜನರ ಸ್ಥಿತಿ ಯಾವ ಮಟ್ಟದಲ್ಲಿರಬಹುದು. ಯೋಧನ ತಾಯಿಯ ಮೇಲೆ ಹಲ್ಲೆ ನಡೆದರು ಸಹ ಜನಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಯವರು ಯಾರು ಅವರುಗಳ ಬೆಂಬಲಕ್ಕೆ ನಿಂತಿಲ್ಲ. ಕೇವಲ ಸ್ವಾತಂತ್ರ್ಯ ಹಾಗೂ ಗಣರಾಜ್ಯೋತ್ಸವ ದಿನಾಚಾರಣೆಗೆ ಮಾತ್ರ ಈ ಯೋಧರಿಗೆ ಗೌರವಿಸುತ್ತಾರೆ. ಈ ಯೋಧನ ತಾಯಿಯ ಮೇಲೆ ಹಲ್ಲೆಯನ್ನು ಮರು ಪರಿಶೀಲಿಸಿ ಕಠಿಣೊ ಕಾನೂನು ಕ್ರಮವನ್ನು ತಗೆದುಕೊಳ್ಳಬೇಕು ಇಲ್ಲವಾದರೆ ಮುಂಬರುವ ದಿನಗಳಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸುವುದಾಗಿ ಆಕ್ರೋಶ ವ್ಯಕ್ತ ಪಡೆಸಿದರು
ಗ್ರಾಮದ ಪ್ರಮುಖ ಬೀದಿಗಳಲ್ಲಿ ಮುಖಾಂತರ ಪಾದಯಾತ್ರೆ ಮಾಡುವ ಮೂಲಕ ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನು ಕಾನೂನು ಅಡಿಯಲ್ಲಿ ಕ್ರಮ ಕೈಗೊಳಬೇಕೆಂದು ಘೋಷಣೆ ಹಾಕುವ ಮೂಲಕ ಪೋಲಿಸ್ ಠಾಣೆಯ ಮುಂದೆ ಪ್ರತಿಭಟನಾಕಾರರು ಆಗಮಿಸಿ ಯೋಧನ ತಾಯಿಯ ಮೇಲೆ ಹಲ್ಲೆ ನಡೆಸಿದ ಆರೋಪಿಗಳಿಗೆ ಕಟ್ಟಿನ ಶಿಕ್ಷೆ ನೀಡಬೇಕೆಂದು ಪಟ್ಟು ಹಿಡಿದು ಪ್ರತಿಭಟನಾಕಾರರು ಮೇಲಾಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಬೇಕೆಂದು ಧರಣಿ ನಡೆಸಿದರು.
ಪ್ರತಿಭಟನಾಕಾರರ ನೇತೃತ್ವ ವಹಿಸಿದ ಮಾಜಿ ಸೈನಿಕ ಸಂಘಟನೆಯ ರಾಜಾಧ್ಯಕ್ಷ ಕೆ. ಶಿವಾನಂದ ಅವರು ಮೊಬೈಲ ಮೂಲಕ ಠಾಣಾ ಅಧಿಕಾರಿಗಳೊಂದಿಗೆ ಮಾತನಾಡಿ ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಎ ಎಸ್ ಐ ವಿನಾಯಕ ಖೋತ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಹಾಗೂ ಪೋಲಿಸ ವರೀಷ್ಠಾಧಿಕಾರಿಗಳಿಗೆ ಮನವಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ತಾಲೂಕಿನ ಮಾಜಿ ಸೈನಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.