ಮಹಾರಾಷ್ಟ್ರ ಸಚಿವರಿಗೆ ಬೆಳಗಾವಿ ಪ್ರವೇಶ ನಿಷೇಧಿಸುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ
ಮಹಾರಾಷ್ಟ್ರ ಸಚಿವರಿಗೆ ಬೆಳಗಾವಿ ಪ್ರವೇಶ ನಿಷೇಧಿಸುವಂತೆ ಆಗ್ರಹಿಸಿ ಕರವೇ ತಾಲೂಕು ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಯಿಸಿ ತಹಸೀಲ್ದಾರ ಮುಖಾಂತರ ಬೆಳಗಾವಿ ಪೊಲೀಸ ಆಯುಕ್ತರಿಗೆ ಮನವಿ ಅರ್ಪಿಸಿದರು.
ಶುಕ್ರವಾರದಂದು ನಗರದ ಮಿನಿ ವಿಧಾನಸೌಧದ ಆವರಣದಲ್ಲಿ ಸೇರಿದಂತೆ ಕರವೇ ಕಾರ್ಯಕರ್ತರು ನಾಡದ್ರೋಹಿ ಎಂಇಎಸ್ ಸಂಘಟನೆ ಮತ್ತು ಮಹಾ ಸಚಿವರುಗಳಾದ ಚಂದ್ರಕಾಂತ ಪಾಟೀಲ ಹಾಗೂ ಶಂಭು ರಾಜೆ (ದೇಸಾಯಿ) ಅವರ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಹಲವಾರು ವರ್ಷಗಳಿಂದ ಕಾನೂನಾತ್ಮಕ ಹೋರಾಟ ನಡೆಯುತ್ತಾ ಬಂದಿರುವುದು ಎಲ್ಲರಿಗೂ ತಿಳಿದ ವಿಚಾರ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಯ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿರುವ ಸಂದರ್ಭದಲ್ಲಿ ಎಂಇಎಸ್ ಹಾಗೂ ಮಹಾರಾಷ್ಟ್ರದ ರಾಜಕಾರಣಿಗಳು ವಿನಾ ಕಾರಣ ಮರಾಠಿ ಮತ್ತು ಕನ್ನಡ ಭಾಷಿಕರ ಮಧ್ಯೆ ವಿಷಬೀಜ ಬಿತ್ತುವ ಕಾರ್ಯ ಮಾಡುತ್ತಿದ್ದಾರೆ. ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಾಜನ ಅಂತಿಮ ಎಂದು ಹೇಳಿದರು ಸಹ ಎಂಇಎಸ್ ಪುಂಡರು ಮಹಾರಾಷ್ಟ್ರದ ರಾಜಕಾರಣಿಗಳ ಸಹಾಯ ಪಡೆದು ಕನ್ನಡ ಮತ್ತು ಕರ್ನಾಟಕ ವನ್ನು ಅವಮಾನಿಸುತ್ತಾ ಬರುತ್ತಿದ್ದಾರೆ ಈ ವಿಷಯದ ಕುರಿತು ಚರ್ಚಿಸಿ ಶಾಂತಿ ಸುವ್ಯವಸ್ಥೆಗೆ ಭಂಗ ತರಲು ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವರುಗಳಾದ ಚಂದ್ರಕಾಂತ ಪಾಟೀಲ ಮತ್ತು ಶಂಭು ರಾಜೆ (ದೇಸಾಯಿ) ಅವರು ಬರುವ ಡಿಸೆಂಬರ್ 6 ರಂದು ಬೆಳಗಾವಿಗೆ ಬಂದು ನಾಡದ್ರೋಹಿ ಎಂಇಎಸ್ ಸಂಘಟನೆ ಜೊತೆಗೆ ಚರ್ಚೆಮಾಡಿ ಬೆಳಗಾವಿಯಲ್ಲಿ ಶಾಂತಿ ಸುವ್ಯವಸ್ಥೆ ಭಂಗ ಮಾಡುವ ಉದ್ದೇಶ ಹೊಂದಿದ್ದಾರೆ . ಆದ್ದರಿಂದ ದಯಾಳುಗಳಾದ ತಾವುಗಳು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಅವರಿಗೆ ಬೆಳಗಾವಿ ಪ್ರವೇಶವನ್ನು ನಿಷೇಧಿಸಬೇಕು ಎಂದು ಸಮಸ್ತ ಕನ್ನಡಿಗರ ಪರವಾಗಿ ಕರವೇ ತಮ್ಮಲ್ಲಿ ವಿನಂತಿಸುತ್ತದೆ. ಇದಕ್ಕೆ ತಪ್ಪಿದ್ದಲ್ಲಿ ಅವರು ಎಂಇಎಸ್ ಜೊತೆಗೆ ಕೈಗೊಳ್ಳುವ ಸಭೆ ನುಗ್ಗಬೇಕಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಾದಿಕ ಹಲ್ಯಾಳ್, ದೀಪಕ್ ಹಂಜಿ,ನಿಜಾಮ್ ನದಾಫ್, ಕೆಂಪಣ್ಣ ಕಡಕೋಳ, ಮುಗುಟ ಪೈಲವಾನರ ಮಂಜು ಪ್ರಭುನಟ್ಟಿ, ಬಸು ಗಾಡಿವಡ್ಡರ, ಕರೆಪ್ಪ ಹೊರಟ್ಟಿ, ಲಕ್ಷ್ಮಣ ಗೊರಗುದ್ದಿ, ಶಿವಾನಂದ ಲಿಂಬೆನ್ನವರ, ರಾಮ ಕುಡ್ಡೆಮ್ಮಿ, ಅಪ್ಪಯ್ಯ ತಿಗಡಿ, ರಾಮ ಕೊಂಗನೋಳಿ, ಆನಂದ ಖಾನಪ್ಪನವರ ಉಪಸ್ಥಿತರಿದ್ದರು