Breaking News

ಭಾಷಾ ವೈಷಮ್ಯದ ವಿಷ ಬೀಜ ಬಿತ್ತಲು ಬರುವ ಮಹಾ ಮಂತ್ರಿಗಳಿಗೆ ತಕ್ಕಪಾಠ ಕಲಿಸಿವುದಾಗಿ ಕರವೇ ಗಜಸೇನೆ ಎಚ್ಚರಿಕೆ – ಅದ್ಯಕ್ಷ ಪವನ

Spread the love

ಭಾಷಾ ವೈಷಮ್ಯದ ವಿಷ ಬೀಜ ಬಿತ್ತಲು ಬರುವ ಮಹಾ ಮಂತ್ರಿಗಳಿಗೆ ತಕ್ಕಪಾಠ ಕಲಿಸಿವುದಾಗಿ ಕರವೇ ಗಜಸೇನೆ ಎಚ್ಚರಿಕೆ – ಅದ್ಯಕ್ಷ ಪವನ

ಗೋಕಾಕ: ಬೆಳಗಾವಿಯಲ್ಲಿ ಮರಾಠಿ ಭಾಷಿಕರು ಮತ್ತು ಕನ್ನಡಿಗರು ಸೌಹಾರ್ದತೆಯಿಂದ ಬದುಕುತ್ತಿದ್ದು,ಬೆಳಗಾವಿಯ ಮುಗ್ದ ಮರಾಠಿ ಭಾಷಿಕರನ್ನು ಕನ್ನಡಿಗರ ವಿರುದ್ದ ಎತ್ತಿಕಟ್ಟಿ,ಭಾಷಾ ವೈಷಮ್ಯದ ವಿಷ ಬೀಜ ಬಿತ್ತಲು ,ಬೆಳಗಾವಿಯ ಶಾಂತಿಯನ್ನು ಕದಡುವದಕ್ಕಾಗಿಯೇ ಬೆಳಗಾವಿಗೆ ಆಗಮಿಸುತ್ತಿರುವ ಮಹಾರಾಷ್ಟ್ರ ಇಬ್ಬರು ಸಚಿವರಿಗೆ ಬೆಳಗಾವಿ ಪ್ರವೇಶಕ್ಕೆ ಕಡಿವಾಣ ಹಾಕದಿದ್ದರೆ ಕರವೇ ಗಜಸೇನೆ ಕಾರ್ಯಕರ್ತರು ಮಹಾರಾಷ್ಟ್ರದ ಇಬ್ಬರು ಸಚಿವರಿಗೆ ಪಾಠ ಕಲಿಸಬೇಕಾಗುತ್ತದೆ ಎಂದು ಕರವೇ ಗಜಸೇನೆ ಉತ್ತರ ಕರ್ನಾಟಕ ಯುವ ಘಟಕ ಅಧ್ಯಕ್ಷ ಪವನ ಮಹಾಲಿಂಗಪುರ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸರುವ ಕರವೇ ಗಜಸೇನೆ ಈ ವಿಚಾರದಲ್ಲಿ ಕರ್ನಾಟಕ ಸರ್ಕಾರ ಕೂಡಲೇ ಕ್ರಮ ಜರುಗಿಸಬೇಕು ಮಹಾರಾಷ್ಟ್ರ ಸರ್ಕಾರ ಭಾರತದ ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದು ಪ್ರಧಾನಿ ಬಳಿ ನಿಯೋಗ ಕೊಂಡೊಯ್ದು ಕೇಂದ್ರ ಸರ್ಕಾರ ಮಹಾರಾಷ್ಟ್ರ ಸರ್ಕಾರಕ್ಕೆ ಲಗಾಮು ಹಾಕುವಂತೆ ಒತ್ತಾಯಿಸಬೇಕು ಎಂದು ಆಗ್ರಹಿಸಿದ್ದಾರೆ.

ಡಿಸೆಂಬರ್ 3 ರಂದು ಮಹಾರಾಷ್ಟ್ರದ ಇಬ್ಬರು ಗಡಿ ಉಸ್ತುವಾರಿ ಸಚಿವರಾದ ಚಂದ್ರಕಾಂತ ಪಾಟೀಲ ಮತ್ತು ಶಂಭುರಾಜೆ ಅವರು ಬೆಳಗಾವಿಯಲ್ಲಿ ಸಭೆ ನಡೆಸುವದಾಗಿ, ಟ್ವೀಟ್ ಮಾಡಿದ್ದು, ರಾಜ್ಯ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಗಣಿಸದಿದ್ದರೆ ಗಜಸೇನೆ ಕಾರ್ಯಕರ್ತರು ಮಹಾರಾಷ್ಟ್ರದ ಇಬ್ಬರು ಸಚಿವರು ಬೆಳಗಾವಿಯಲ್ಲಿ ನಡೆಸುವ ಸಭೆಗೆ ನುಗ್ಗಿ ಕಪ್ಪು ಮಸಿ ಬಳಿದು ನಮ್ಮ ಆಕ್ರೋಶ ವ್ಯಕ್ತ ಪಡಿಸಲಾಗುವುದು ಎಂದು ಕರವೇ ಗಜಸೇನೆ ಎಚ್ಚರಿಕೆ ನೀಡಿದೆ.

ಬೆಳಗಾವಿ ಗಡಿವಿವಾದದ ಕುರಿತು ಮಹಾರಾಷ್ಡ್ರ ಸರ್ಕಾರವೇ ಸುಪ್ರೀಂ ಕೋರ್ಟಿನ ಮೆಟ್ಟಲೇರಿದೆ, ಕೋರ್ಟಿನ ತೀರ್ಪು ಬರುವವರೆಗೂ ಕಾಯಬೇಕಾದ ಮಹಾರಾಷ್ಟ್ರ ಸರ್ಕಾರ ಬೆಳಗಾವಿಯಲ್ಲಿ ಅಲ್ಲದೆ ಅಲ್ಲಿಯ ಕೆಲ ಶಿವಸೇನೆ ಪುಂಡರು ನಮ್ಮ ರಾಜ್ಯದ ವಾಹನಗಳಿಗೆ ಕಪ್ಪು ಮಸಿ ಬಳಿದು ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿದ್ದಾರೆ .ಡಿಸೆಂಬರ್ ತಿಂಗಳಲ್ಲಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು ಅದಕ್ಕೂ ಮೊದಲು ಬೆಳಗಾವಿ ಎಂಇಎಸ್ ನಾಯಕರು ಮಹಾರಾಷ್ಟ್ರದ ಇಬ್ಬರು ಸಚಿವರನ್ನು ಬೆಳಗಾವಿಗೆ ಕರೆಯಿಸಿ ಶಾಂತಿಗೆ ಭಂಗ ತರುವ ಹುನ್ನಾರ ನಡೆಸಿದ್ದು, ಮಹಾರಾಷ್ಟ್ರದ ಸಚಿವರಿಗೆ ಬೆಳಗಾವಿಗೆ ಬರುವಂತೆ ಪತ್ರ ಬರೆದಿರುವ ಎಂಇಎಸ್ ನಾಯಕರನ್ನು ಕೂಡಲೇ ಬಂಧಿಸಬೇಕೆಂದು ಕರವೇ ಗಜಸೇನೆ ಉತ್ತರ ಕರ್ನಾಟಕ ಯುವ ಘಟಕ ಅಧ್ಯಕ್ಷ ಪವನ ಮಹಾಲಿಂಗಪುರ ಒತ್ತಾಯಿಸಿದ್ದಾರೆ.


Spread the love

About Fast9 News

Check Also

ತಾಕತ್ತಿದ್ದರೆ RSS & ಬಜರಂಗದಳ ನಿಷೇಧಿಸಲಿ: ಮಾಜಿ cm ಬೊಮ್ಮಾಯಿ

Spread the loveತಾಕತ್ತಿದ್ದರೆ RSS & ಬಜರಂಗದಳ ನಿಷೇಧಿಸಲಿ: ಮಾಜಿ cm ಬೊಮ್ಮಾಯಿ ಸಂಘ ಪರಿವಾರದ ಸಂಘಟನೆಗಳನ್ನು ನಿಷೇಧ ಮಾಡುವ …

Leave a Reply

Your email address will not be published. Required fields are marked *