Breaking News

ಕಾರ್ಮಿಕರಿದ್ದಲ್ಲಿ ಕಾರ್ಮಿಕ ಅದಾಲತ್ : ಮಹೇಶ ಕುಳಲಿ,

Spread the love

ಕಾರ್ಮಿಕರಿದ್ದಲ್ಲಿ ಕಾರ್ಮಿಕ ಅದಾಲತ್ : ಮಹೇಶ ಕುಳಲಿ,

ಕೊರೊನಾ ಸಮಯದಲ್ಲಿ ಕಾರ್ಮಿಕರಿಗಾದಷ್ಟು ಕಷ್ಟ ಯಾರಿಗೂ ಆಗಿಲ್ಲಾ, ಅದಕ್ಕಂತೆ ಸರಕಾರ ಕಾರ್ಮಿಕರ ಅಭಿವೃದ್ಧಿಗಾಗಿ ಹಲವಾರು ಸೌಲಭ್ಯಗಳನ್ನು ನಿಡಿದೆ ಆದರೆ ಆ ಸೌಲಬ್ಯಗಳನ್ನು ಎಲ್ಲ ನೊಂದಾಯಿತ ಕಟ್ಟಡ ಕಾರ್ಮಿಕರು ಪಡೆಯುವುದು ಅವಶ್ಯವಾಗಿದೆ ಎಂದು ಬೆಳಗಾವಿ ಕಾರ್ಮಿಕ ಅಧಿಕಾರಿ ಮಹೇಶ ಕುಳಲಿ ಇವರು ಮೂಡಲಗಿ ತಾಲೂಕಿನ ತಹಸಿಲ್ದಾರ ಕಚೇರಿಯಲ್ಲಿ ಸಸಿಗೆ ನೀರು ಹಾಕುವುದರ ಮೂಲಕ ಕಾರ್ಮಿಕ ಅದಾಲತಗೆ ಚಾಲನೆ ನೀಡಿದರು,

ನಂತರ ಮಾತನಾಡಿದ ಅವರು
ಕಟ್ಟಡ ಕಾರ್ಮಿಕರಿಗೆ ಸಂಬಂಧಿಸಿದ ಬಾಕಿ ಅರ್ಜಿ ವಿಲೇವಾರಿಯೆ ಕಾರ್ಮಿಕ ಅದಾಲತ್ “ಈ ಕಾರ್ಯಕ್ರಮದಲ್ಲಿ ಕಾರ್ಮಿಕರ ಅರ್ಜಿಗಳಾದ ಮದುವೆ ಸಹಾಯಧನ, ಶೈಕ್ಷಣಿಕ ಸಹಾಯಧನ, ಪಿಂಚಣಿ ಸಹಾಯಧನದಂತಹ
ಸೌಲಬ್ಯಗಳನ್ನು ಜಾರಿಗೊಳಿಸಿದೆ ಆದರೆ ಅವುಗಳ ಉಪಯೋಗ ಕೆಲವು ಕಾರ್ಮಿಕರು ಮಾತ್ರ ಪಡೆದುಕೊಳ್ಳುತ್ತಿದ್ದಾರೆ ಈ ಸೌಲಬ್ಯಗಳನ್ನು ಎಲ್ಲ ನೊಂದಾಯಿತ ಕಟ್ಟಡ ಕಾರ್ಮಿಕರು ಪಡೆದುಕೊಳ್ಳುವುದು ಅವಶ್ಯ, ಹಾಗೂ ಕೆಲವು ಕಾರ್ಮಿಕರು ಅರ್ಜಿ ಹಾಕಿದರು ಸಹ ಅರ್ಜಿ ವಿಲೆವಾರಿಯಾಗದೆ ಸಿಗಬೇಕಾದ ಸೌಲಬ್ಯಗಳು ದೊರಕದೆ ವಂಚಿತರಾಗಿ ಕಾರ್ಮಿಕ ಕಚೇರಿಗಳಿಗೆ ಅಲೆದಾಡುತಿದ್ದಾರೆ,

ಇಂತಹ ಪರಿಸ್ಥಿತಿ ಕಾರ್ಮಿಕರಿಗೆ ಬರಬಾರದೆಂಬ ಉದ್ದೇಶದಿಂದ ಕಾರ್ಮಿರಿದ್ದಲ್ಲಿ ಕಾರ್ಮಿಕ ಇಲಾಖೆ ಎಂಬುದನ್ನು ತಿಳಿಸಲು ಮೂಡಲಗಿ ತಾಲೂಕಿನ ತಹಸಿಲ್ದಾರ ಕಚೇರಿಯಲ್ಲಿ ಕಟ್ಟಡ ಕಾರ್ಮಿಕರ ಕಾರ್ಮಿಕ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಅದರ ಜೊತೆಯಲ್ಲಿ ಸಂಘಟಿತ, ಅಸಂಘಟಿತ ಕಾರ್ಮಿಕರೆಲ್ಲರೂ ಕಾಲ ಕಾಲಕ್ಕೆ ಸದಸ್ಯತ್ವ ನವೀಕರಣ ಮಾಡಿಸಿಕೊಳ್ಳಬೇಕು. ಕಾರ್ಮಿಕ ಇಲಾಖೆಯಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳುವ ಮೂಲಕ ಸದಸ್ಯತ್ವ ಪಡೆದುಕೊಂಡಲ್ಲಿ ಸರಕಾರದಿಂದ ಸಿಗುವ ನಾನಾ ಸೌಲಭ್ಯ ಪಡೆದುಕೊಳ್ಳಲು ಸಹಕಾರಿ ಆಗಲಿದೆ ಎಂದು ಹೇಳಿದರು.

ಇವತ್ತಿನ ಕಾರ್ಮಿಕ‌ ಅದಾಲತನಲ್ಲಿ
ಕಾರ್ಮಿಕರಿಂದ ಅರ್ಜಿಗಳನ್ನು ಸ್ವೀಕರಿಸಿ ಬಾಕಿ ಇದ್ದ ಅರ್ಜಿಗಳನ್ನು ಸ್ಥಳದಲ್ಲಿಯೆ ಪರಿಶಿಲಿಸಿ ,ಆಗಿದ್ದ ಲೋಪದೋಷವನ್ನು ಸರಪಡಿಸಿ
ಅರ್ಜಿಗಳನ್ನು ವಿಲೇವಾರಿ ಮಾಡಿ ಸ್ಥಳದಲ್ಲಿಯೆ ಮಂಜೂರಾತಿ ಆದೇಶ ನೀಡಲಾಯಿತು.ಈ ಸಂದರ್ಭದಲ್ಲಿ ಕಾರ್ಮಿಕ ನಿರೀಕ್ಷಕರಾದ ಪಾಂಡುರಂಗ ಮಾವರಕರ, ಸೇರಿದಂತೆ ,ಸಿಬ್ಬಂದಿಗಳು ಕಾರ್ಮಿಕ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love

About Fast9 News

Check Also

ನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ

Spread the loveನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ …

Leave a Reply

Your email address will not be published. Required fields are marked *