Breaking News

ಸಚಿವ ರಮೇಶ ಜಾರಕಿಹೋಳಿಯವರ ಆಶಿರ್ವಾದದಿಂದ ನಮಗೆ ಸತ್ಕಾರ ನಡೆದಿದೆ : ಸುರೇಶ ಸನದಿ

Spread the love

ಸಚಿವ ರಮೇಶ ಜಾರಕಿಹೋಳಿಯವರ ಆಶಿರ್ವಾದದಿಂದ ನಮಗೆ ಸತ್ಕಾರ ನಡೆದಿದೆ : ಸುರೇಶ ಸನದಿ

ಗೋಕಾಕ: ಸತ್ಕಾರ ಮಾಡಿಸಿಕೊಳ್ಳುವಂತಹ ಮಟ್ಟಕ್ಕೆ ನಾವಿನ್ನು ಬೆಳೆದಿಲ್ಲಾ ಆದರೂ ಇವತ್ತಿನ‌ ಸತ್ಕಾರಕ್ಕೆ ಜಲಸಚಿವ ರಮೇಶ ಜಾರಕಿಹೋಳಿಯವರ ಆಶಿರ್ವಾದವೆ ಕಾರಣವೆಂದು ಗೋಕಾಕ ತಾಲೂಕಿನ ಕಾಮನ ಚೌಕದಲ್ಲಿರುವ ಶ್ರಿ ಕೃಷ್ಣ ಮಂದಿರ ಮಂಟಪದಲ್ಲಿ ಎರ್ಪಡಿಸಲಾಗಿದ್ದ ಸತ್ಕಾರ ಸಮಾರಂಭದಲ್ಲಿ
ಮಮದಾಪುರ ಗ್ರಾಮದ ಗ್ರಾಮ ಪಂಚಾಯತಿಯ ಚುನಾವಣೆಯಲ್ಲಿ ಜಯಬೇರಿ ಸಾದಿಸಿದ ನೂತನ ಸದಸ್ಯರಿಗೆ ಹಮ್ಮಿಕೊಂಡಿದ್ದ ಸತ್ಕಾರ ಸ್ವಿಕರಿಸಿ ಮಾತನಾಡಿದ ಸಚಿವ ರಮೇಶ ಜಾರಕಿಹೋಳಿಯವರ ಆಪ್ತಕಾರ್ಯದರ್ಶಿಗಳಾದ ಸುರೇಶ ಸನದಿಯವರು ಇಲ್ಲಿನ‌ ಜನತೆ ಹಾಗೂ ತಾಯಂದಿರ ಆಶಿರ್ವಾದ ನಮ್ಮೆಲ್ಲರ ಮೇಲೆ ಇದೆ, ಅದರಂತೆ ಯಾವಾಗಲೂ ಇದೆ ರೀತ ನಮ್ಮ ಮೇಲೆ ಇರಲೆಂದು ವಿನಂತಿಸಿದರು.

ಅದೆ ರೀತಿ ಸ್ಥಳಿಯ ಸದಸ್ಯರಾದ ಪ್ರಕಾಶ ಕರನಿಂಗ ಇವರು ಮಾತನಾಡಿ ಇಲ್ಲಿ ಎಲ್ಲ ದರ್ಮದವರು ಒಗ್ಗಟ್ಟಾಗಿ ಇರುವುದರಿಂದ ಈ ಸ್ಥಳದಲ್ಲಿ ಸತ್ಕಾರ ಇಟ್ಟುಕೊಂಡಿದ್ದು ಇಲ್ಲಿನ ಜನತೆಗೆ ಮತ್ತಷ್ಟು ಸಂತೋಷವನ್ನುಂಟು ಮಾಡಿದೆ,ಅದಲ್ಲದೆ ಇವತ್ತು ಆಗಮಿಸಿದ ಸತ್ಕಾರ ಮೂರ್ತಿಗಳು ನಮ್ಮೂರಿನವರಷ್ಟೆ ಅಲ್ಲದೆ ಯಾವುದೆ ಯುವಕರು ಸಚಿವರ ಕಚೇರಿಗೆ ಹೋದರೂ ಸಹ ಸಚಿವರ ಮತ್ತು ಕಾರ್ಮಿಕ ದುರಿಣ ಅಂಬಿರಾವ ಪಾಟೀಲ ಅವರ ಆದೇಸದಂತೆ ಎಲ್ಲರ ಜೊತೆ ಸೌಜನ್ಯದಿಂದ ನಡೆದುಕೊಳ್ಳುವುದೆ ಇವರಲ್ಲಿರುವ ದೊಡ್ಡ ಗುಣ ಎಂದರು.

ನಂತರ ಮಮದಾಪುರ ಗ್ರಾಮ ಪಂಚಾಯತಿಯಲ್ಲಿ ಅಭೂತ ಪೂರ್ವ ಜಯಗಳಿಸಿದ ಸುರೇಶ ಸನದಿ, ಕೆಂಪಣ್ಣಾ ಮೈಲನ್ನವರ ಹಾಗೂ ಪ್ರಭಾಕರ ಒಡೆಯರ ಇವರಿಗೆ ಕೊಣ್ಣೂರಿನ ಸ್ಥಳಿಯ ಕಾಮನ ಚೌಕಿನ ಯುವಕರ ಬಳಗದಿಂದ , ಮರಡಿಮಠ ಯುವಕರ ಬಳಗ ಹಾಗೂ ವಿವಿದ ಮುಖಂಡರು ಸತ್ಕರಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಸ್ಥಳಿಯ ಪುರಸಭೆ ಸದಸ್ಯರಾದ ,ವಿನೋದ ಕರನಿಂಗ.ವಿಠ್ಠಲ ಮೈಲನ್ನವರ, ಸದಾನಂದ ಶಿಂಗ್ಯಾಗೋಳ, ಕಾಡೇಶ ಮಡಿವಾಳ, ಕಾಡೇಶ ಜಕಾತಿಮಠ, ಹಾಗೂ ಇನ್ನೂಳಿದ ಸ್ಥಳೀಯ ಮುಖಂಡರು ಉಪಸ್ಥಿತರಿದ್ದು ಶಿಕ್ಷಕರಾದ ಸಂಜೀವ ಮಾಸ್ತಮರ್ಡಿ ನಿರೂಪಣೆ ಮಾಡಿದರು.


Spread the love

About fast9admin

Check Also

ನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ

Spread the loveನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ …

Leave a Reply

Your email address will not be published. Required fields are marked *