ಕೊಣ್ಣೂರ ಪ್ರಾಥಮಿಕ ಕೇಂದ್ರದಲ್ಲಿ ಲಸಿಕೆ ನಿಡಲು ಸಿಬ್ಬಂದಿಗಳಿಂದ ಸಕಲ ಸಿದ್ದತೆ,
ಇಡಿ ಮಾನವ ಕುಲವನ್ನೆ ಬೆಚ್ಚಿಬಿಳಿಸಿದ ಕೊರಾನಾ ವೈರಸಗೆ ಕೊನೆಗೂ ಮದ್ದು ಬಂದೆ ಬಿಟ್ಟಿತು,ಆ ಲಸಿಕೆ ನಿಡಲು ಗೋಕಾಕ ತಾಲೂಕಿನ ಕೊಣ್ಣೂರ ಆರೋಗ್ಯ ಪ್ರಾಥಮಿಕ ಕೇಂದ್ರದಲ್ಲಿ ಎಲ್ಲ ಸಿಬ್ಬಂದಿಗಳು ಸಕಲ ಸಿದ್ದತೆ ಮಾಡಿಕೊಂಡಿದ್ದು ಎಲ್ಲರಿಗೂ ತಂದ ಖುಷಿ.
ಪ್ರಥಮವಾಗಿ ಮೊದಲ ಹಂತದಲ್ಲಿ ಗೋಕಾಕ ತಾಲೂಕಿನಾದ್ಯಾಂತ ಗೋಕಾಕ ಸರಕಾರಿ ಆಸ್ಪತ್ರೆ ಮತ್ತು ಕೊಣ್ಣೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರಾನಾ ವಾರಿಯರ್ಸಗಳಾದ ಸರಕಾರಿ ಆಸ್ಪತ್ರೆಯ ಸಿಬ್ಬಂದಿ,ಆಶಾ, ಅಂಗನವಾಡಿ ಮತ್ತು ವೈದ್ಯರಿಗೆ ಸರಕಾರದ ಅದೇಶ ಮತ್ತು ನಿರ್ದೇಶನದಂತೆ ಒಬ್ಬರಿಗೆ ಎರಡು ಡೋಸ್ ನೀಡಿ ಅರ್ದ ಗಂಟೆ ಲಸಿಕೆ ಪಡೆದುಕೊಂಡವರನ್ನು ಆಸ್ಪತ್ರೆಯ ವಿಶ್ರಾಂತಿ ಕೊಠಡಿಯಲ್ಲಿ ಕುಳಿತುಕೊಳ್ಳಲು ತಿಳಿಸಿಲಾಗುತ್ತದೆ.ಹಾಗೂ ಈ ಲಸಿಕೆಯಿಂದ ಯಾವುದೆ ಅಡ್ಡ ಪರಿಣಾಮ ಇಲ್ಲ ಎಂಬುದನ್ನು ತಿಳಿಸಿದ್ದಾರೆ,
ಈ ಸಂದರ್ಭದಲ್ಲಿ , ಸ್ಥಳಿಯ ಕೊಣ್ಣೂರ ವೈದ್ಯರಾದ ಜೆ,ವಿ, ಅಂಗಡಿ. ವಿನೋದಕುಮಾರ ಕರೋಶಿ, ಸುನೀತಾ ಮದನಾಂವಿ, ಪೋಲಿಸ ಸಿಬ್ಬಂದಿಗಳಾದ ದುಂಡೆಶ ಅಂತರಗಟ್ಟಿ, ಸಂಜೀವ ಮಾನಪ್ಪಗೋಳ ಹಾಗೂ ಸಿಬ್ಬಂದಿಗಳು ಮತ್ತು ಆಶಾ ,ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು