ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ವಿಳಂಬ ನೀತಿ ಖಂಡಿಸಿ ಪೌರಕಾರ್ಮಿಕರಿಂದ ಕೊಣ್ಣೂರಲ್ಲಿ ಪ್ರತಿಭಟನೆ.
ಪೌರಾಡಳಿತ ಪೌರಕಾರ್ಮಿಕರ ನೇರ ನೇಮಕಾತಿಗಳ ಪ್ರಕ್ರಿಯೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಗೋಕಾಕ ತಾಲೂಕಿನ ಕೊಣ್ಣೂರ ಪುರಸಭೆಯ ನೇರ ಪಾವತಿದಾರರು,ಪುರಸಭೆಯ ಮುಂಭಾಗದಲ್ಲಿ
ಪ್ರತಿಭಟನೆ ಮಾಡಿದರು,ಧರಣಿ ಸ್ಥಳಕ್ಕೆ ಬಂದ ಸರ್ವ ಸದಸ್ಯರು ಬೆಂಬಲ ವ್ಯಕ್ತಪಡಿಸಿ ಕೇವಲ
ಬೆಳಗಾವಿ ಜಿಲ್ಲೆಯವರನ್ನು ಮಾತ್ರನಿರ್ಲಕ್ಷಿಸಿರುವುದು
ಸರಿಯಲ್ಲಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ
ಪೌರಕಾರ್ಮಿಕರ ನೇರ ನೇಮಕಾತಿ ಹುದ್ದೆಗಳಿಗೆ ಹೊರ ಗುತ್ತಿಗೆ ದಿನಗೂಲಿ ನೌಕರರನ್ನು ನೇಮಕ ಮಾಡಲು
ಅವಕಾಶ ಕಲ್ಪಿಸಿ ಬೇರೆ ಜಿಲ್ಲೆಯಲ್ಲಿ ಸಮಸ್ಯೆ ಬಗೆಹರಿಸಿದ್ದಾರೆ ಆದರೆ ಇಲ್ಲಿ ನಾಲ್ಕು ವರ್ಷ ಕಳೆದರೂ ನೇಮಕಾತಿ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇವರ ಮುಷ್ಕರಿಂದ ಪಟ್ಟಣದಲ್ಲಿ ಸ್ವಚ್ಚತೆ ಆಗದೆ ಎಲ್ಲಿ ನೋಡಿದಲ್ಲಿ ಕಸದ ರಾಶಿಗಳೆ ತುಂಬಿದೆ,ಇತ್ತ ಸುರಿಯುತ್ತಿರುವ ಮಳೆ ಒಂದು ಕಡೆ ಇನ್ನೊಂದು ಕಡೆ ಕಸದ ರಾಶಿಯಿಂದ ಸಾರ್ವಜನಿಕರಿಗೆ ರೋಗಗಳು ಬರುವ ಸಾದ್ಯತೆ ಹೆಚ್ಚಾಗಿದೆ ಅದಕ್ಕಾಗಿ ಶೀಘ್ರ ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ ಒತ್ತಾಯ ಮಾಡಿದರು,ಪುರಸಭೆಯ ಎಲ್ಲ ನೇರ ಪಾವತಿದಾರರು ಪುರಸಭೆಯ ಅಧಿಕಾರಿಗೆ ಮನವಿ ನೀಡಿದರು,
ಈ ಸಂದರ್ಭದಲ್ಲಿ ಕಿರಿಯ ಆರೋಗ್ಯ ನಿರೀಕ್ಷರಾದ ಬಾಳನಾಯಕ ಕುಮರೇಶಿ, ಸಂಘಟನಾ ಅಧಿಕಾರಿ ಪೆದನ್ನವರ, ಪ್ರಥಮ ದರ್ಜೆ ಸಹಾಯಕ ರಮೇಶ ಭವಾನೆ,ಪೋಲಿಸ್ ಎ,ಎಸ್,ಐ, ಗುರನಗೌಡರ,ಸಿಬ್ಬಂದಿಯಾದ ನಾಗಪ್ಪಾ ದುರದುಂಡಿ,ನೇರಪಾವತಿದಾರರಾದ ಸುರೇಶ ನಡಗೇರಿ,ಪ್ರವೀಣ ಮೇಗೇರಿ,ವಿಜಯ ಈರಗಾರ,ಶಿವಲಿಂಗ ಮೇಗೇರಿ,ಪ್ರೇಮಾ ಮೇಗೇರಿ,ತಾಯವಾ ನಡಗೇರಿ,,ಮಹಾದೇವಿ ಮೇಗೇರಿ,ಪವನ ನಡಗೇರಿ,ಸುಗಂದಾ ಈರಗಾರ,ಮಂಜುನಾಥ ಮಲ್ಲಪ್ಪಗೋಳ ಹಾಗೂ ಇನ್ನೂಳಿದ ಪೌರಕಾರ್ಮಿಕರು ಉಪಸ್ಥಿತರಿದ್ದರು.