Breaking News

ಸಂತ್ರಸ್ತರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸಹಾಯದ ಹಸ್ತ*

Spread the love

ಸಂತ್ರಸ್ತರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸಹಾಯದ ಹಸ್ತ*

ಯಮಕನಮರಡಿ: ಯಮಕನಮರಡಿ ವಿಧಾನಸಭಾ ಕ್ಷೇತ್ರದ ಚಲವಿನಹಟ್ಟಿ ಗ್ರಾಮದಲ್ಲಿ ಬುಧವಾರ ರಾತ್ರಿ ಮಳೆ ಅವಾಂತರದಿಂದ ಮನೆ ಗೋಡೆ ಬಿದ್ದ ಸಂತ್ರಸ್ತರಿಗೆ ಶಾಸಕ ಸತೀಶ ಜಾರಕಿಹೊಳಿ ಸೂಚನೆ ಮೇರೆಗೆ ಅವರ ಆಪ್ತ ಸಹಾಯಕ ಮಲಗೌಡ ಪಾಟೀಲ ನೇತೃತ್ವದ ತಂಡ ಆಹಾರ ಕಿಟ್‌ ವಿತರಿಸಿತು. ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಭೀಕರ ಮಳೆಗೆ ಚಲವಿನಹಟ್ಟಿ ಗ್ರಾಮದಲ್ಲಿ ಗುಂಡು ಕುಠ್ರೆ ಎಂಬುವರ ಮನೆ ಗೊಡೆಗಳು ಬಿದ್ದು, ಅವರ ಕುಟುಂಬ ಸಂಕಷ್ಟದಲ್ಲಿ ಸಿಲುಕುವಂತಾಗಿತ್ತು. ಈ ಸಂತ್ರಸ್ತರ ಸ್ಥಿತಿ ಮನಗೊಂಡ ಶಾಸಕ ಸತೀಶ ಜಾರಕಿಹೊಳಿ ಅವರು ಕೂಡಲೇ ಅವರ ಅಪ್ತ ಸಹಾಯಕ ಮಲಗೌಡ ಪಾಟೀಲ ನೇತೃತ್ವದ ತಂಡವನ್ನು ಗ್ರಾಮಕ್ಕೆ ಕಳುಹಿಸಿ ಮನೆ ಕಳೆದುಕೊಂಡ ಸಂಸ್ರಸ್ತರಿಗೆ ಆಹಾರ ಕಿಟ್ ಹಾಗೂ ಈಗಾಗಲೇ ಬಿರುಕು ಬಿಟ್ಟ ಮೂರು ಮನೆಯ ಮಾಲೀಕರಿಗೆ ಬೇರೆಡೆ ಸ್ಥಳಾಂತರ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ,,

ಇದೇ ವೇಳೆ ಶಾಸಕ ಸತೀಶ ಜಾರಕಿಹೊಳಿ ಅವರ ಆಪ್ತ ಸಹಾಯಕ ಮಲಗೌಡ ಪಾಟೀಲ ನೇತೃತ್ವದ ತಂಡ ಬಿದ್ದ ಮನೆ ಗೋಡೆ ಹಾಗೂ ಬಿರುಕು ಬಿಟ್ಟ ಮನೆಗಳನ್ನು ಪರಿಶೀಲಿಸಿ ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಿತು. ಅಲ್ಲದೇ ಶಾಸಕ ಸತೀಶ ಜಾರಕಿಹೊಳಿ ಅವರು ಚಲವಿನಟ್ಟಿ ಗ್ರಾಮಸ್ಥರಿಗೆ ಭೀಕರ ಮಳೆಗೆ ಎದೆಗುಂದದಿರಿ, ನಿಮ್ಮ ಜೊತೆ ನಾವು ಸಧಾ ಇದ್ದೇವೆ ಎಂಬ ಸಂದೇಶವನ್ನು ಸಹ ಅವರ ಆಪ್ತ ಸಹಾಯಕರ ಮೂಲಕ ಸಂಸ್ರಸ್ತರಿಗೆ ರವಾನಿಸಿದ್ದಾರೆ. ಈ ವೇಳೆ ರಾಹುಲ್ ಜಾಧವ, ಲಕ್ಷ್ಮಣ ಬಡವನಾಚೆ, ವಸಂತ ಅಳಗುಂಡಿ, ಭರಮಾ ಅಳಗುಂಡಿ, ಯಲ್ಲಪ್ಪ ಪಾಟೀಲ, ಗುಂಡು ಕುರೆನ್ನವರ ಸೇರಿದಂತೆ ಸಂಸ್ರಸ್ತರ ಕುಟುಂಬಸ್ಥರು ಇದ್ದರು.


Spread the love

About Fast9 News

Check Also

ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಬಾಗವಹಿಸುವುದರ ಮೂಲಕ ಯೋಗ ದಿನವನ್ನು ಯಶಸ್ವಿಗೊಳಿಸಿ : ಶಾಸಕ ಮತ್ತು ಬೆಮೂಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕರೆ

Spread the loveಅಂತರ್ ರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಬಾಗವಹಿಸುವುದರ ಮೂಲಕ ಯೋಗ ದಿನವನ್ನು ಯಶಸ್ವಿಗೊಳಿಸಿ : ಶಾಸಕ ಮತ್ತು ಬೆಮೂಲ್ …

Leave a Reply

Your email address will not be published. Required fields are marked *