Breaking News

ಶಾ ಹುಸೇನ್ ದರ್ಗಾ ಉರುಸ್ ಹಿನ್ನೆಲೆ ಭಕ್ತಿ ಭಾವದಿಂದ ಗಂಧ ಎರಿಸಿದ ವರ್ಷಿಲಾಗಳು

Spread the love

ಶಾ ಹುಸೇನ್ ದರ್ಗಾ ಉರುಸ್ ಹಿನ್ನೆಲೆ ಭಕ್ತಿ ಭಾವದಿಂದ ಗಂಧ ಎರಿಸಿದ ವರ್ಷಿಲಾಗಳು

ಗೋಕಾಕ ತಾಲೂಕಿನ ಕೊಣ್ಣೂರಲ್ಲಿರುವ ಹಜರತ್ ಶಾ ಹುಸೇನ್ ಶಾ ಖಾದ್ರಿ ರಹತಮತುಲ್ಲಾ ಅಲೈ ಬಾಬಾನ ಉರುಸ ನಿಮಿತ್ಯ ರಾತ್ರಿ ಗಂಧ ಎರಿಸುವ ಕಾರ್ಯಕ್ರಮ ನಡೆಯಿತು

ವರ್ಷಿಲವಾಲೆಗಳಾದ
ಉಸ್ಮಾನಗಣಿ, ಪಿರಜಾದೆ, ಅಬ್ದುಲಖಾದರ ಪಿರಜಾದೆ,ಮಹಮ್ಮದರಫಿಕ ಪಿರಜಾದೆ,ಮಾಹಬೂಬ ಪಿರಜಾದೆ ಇವರ ನೇತೃತ್ವದಲ್ಲಿ ಮತ್ತು ಹಜರತ ಶಾ ಹುಸೇನ ಶಾ ಖಾದ್ರಿ ಪಿರಾಗಳ ಸಮ್ಮುಖದಲ್ಲಿ ದರ್ಗಾದಲ್ಲಿ ಹಲವಾರು ಪವಾಡಗಳೊಂದಿಗೆ ಗಂಧದ ಎರಿಸುವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.

ದರ್ಗಾ ಆಡಳಿತ ಮಂಡಳಿಯಿಂದ ಪ್ರತಿ ವರ್ಷ ದಂತೆ ಈ ಬಾರಿಯೂ ಗಂಧದ ಆಚರಣೆ ಮಾಡಲಾಯಿತು.ಕೊಣ್ಣೂರಲ್ಲಿ ನಡೆದ ಉರುಸ್ ಗಂಧದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತಾದಿಗಳು ಶಾ ಹುಸೇನ್ ಬಾಬರವರ ಕೃಪೆಗೆ ಪಾತ್ರರಾದರು.

ಶಾ ಹುಸೇನರವರ ಅನುಯಾಯಿಗಳು ವಿವಿಧ ರೀತಿಯ ಪಾವಡಗಳನ್ನ ಪ್ರದರ್ಶಿಸಿ ಜನರ ಗಮನ ಸೆಳೆದರು. ಇಲ್ಲಿಗೆ ಆಗಮಿಸಿದ್ದ ಭಕ್ತರಿಗೆ ಊಟ ಹಾಗೂ ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.

ತಮ್ಮ ಇಷ್ಟಾರ್ಥ ಈಡೇರಿಸುವಂತೆ ಹರಕೆ ಹೊತ್ತ ಭಕ್ತರು, ದರ್ಗಾಕ್ಕೆ ಗಂಧ ಹಚ್ಚಿ ಛಾದರ್ ಸಮರ್ಪಿಸಿದರು.ಭಕ್ತಿಭಾವದಿಂದ ಅದ್ದೂರಿಯಾಗಿ ನಡೆದ ಗಂಧದ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಹಾಡಿನೊಂದಿಗೆ ಸುತ್ತಾಡಿ ಜನಮನ ಸೂರೆಗೊಂಡಿತು.


Spread the love

About Fast9 News

Check Also

ದಂಡ ಹಾಕುತ್ತಾರೆಂಬ ಭಯಕ್ಕೆ ಹೆಲ್ಮೇಟ್ ದರಿಸದೆ ಜೀವ ರಕ್ಷಣೆಗಾಗಿ ದರಿಸಿ : PSI ಕಿರಣ ಮೋಹಿತೆ

Spread the loveದಂಡ ಹಾಕುತ್ತಾರೆಂಬ ಭಯಕ್ಕೆ ಹೆಲ್ಮೇಟ್ ದರಿಸದೆ ಜೀವ ರಕ್ಷಣೆಗಾಗಿ ದರಿಸಿ : PSI ಕಿರಣ ಮೋಹಿತೆ ಗೋಕಾಕ …

Leave a Reply

Your email address will not be published. Required fields are marked *