Breaking News

ಮಾದಕ ವಸ್ತುಗಳಿಗೆ ಬಲಿಯಾಗದೆ,ಉತ್ತಮ ಆಹಾರ ಸೇವಿಸಿ ದೀರ್ಘಕಾಲ ಬದುಕಿರಿ.

Spread the love

ಮಾದಕ ವಸ್ತುಗಳಿಗೆ ಬಲಿಯಾಗದೆ,ಉತ್ತಮ ಆಹಾರ ಸೇವಿಸಿ ದೀರ್ಘಕಾಲ ಬದುಕಿರಿ.

ಗೋಕಾಕ ತಾಲೂಕಿನ ಕೊಣ್ಣೂರಿನ, ಗೋಕಾಕ ರೋಡ ರೇಲ್ವೆ ಸ್ಟೇಷನ್ ದಲ್ಲಿ ಮತ್ತು ಮರಡಿಮಠದ ಶ್ರೀಗುರುಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಮಹಾವಿದ್ಯಾಲಯದಲ್ಲಿ ಗೋಕಾಕ ಗ್ರಾಮೀಣ ಪೋಲಿಸ್ ಇಲಾಖೆಯವತಿಯಿಂದ ಎ,ಎಸ್,ಐ,ಬಿ,ಎಸ್,ಬಡಿಗೇರ ನೇತೃತ್ವದಲ್ಲಿ ಮಾದಕ ವಸ್ತುಗಳ ವಿರೋದಿ ದಿನಾಚರಣೆಯನ್ನು
ಆಚರಿಸಲಾಯಿತು

ಈ ಸಂದರ್ಭದಲ್ಲಿ ಮಾತನಾಡಿದ ಅವರು ಮೊದಲು ನೀವು ಮಾದಕ ವಸ್ತುಗಳನ್ನು ಉಪಯೊಗಿಸಿಕೊಳ್ಳುತ್ತಿರಿ ,ಆದರೆ ನಂತರ ಅದೆ ನಿಮ್ಮನ್ನು ತನಗೆ ಬಲಿತೆಗೆದುಕೊಳ್ಳುತ್ತದೆ,ಅಷ್ಟೆ ಅಲ್ಲದೆ ಅದರ ಮತ್ತಿನಲ್ಲಿ ತಾವು ಅಹಿತಕರ ಘಟನೆಗಳನ್ನು ಮಾಡಲು ಹಿಂಜರಿಯುವುದಿಲ್ಲ,ಇಂತಹ ಸಮಯದಲ್ಲಿ ಹಲವಾರು ಬಾರಿ ಮತ್ತಿನಲ್ಲಿ ಅಪಘಾತವಾಗಿ ಪ್ರಾಣವನ್ನು ಕಳೆದುಕೊಂಡು ಇವತ್ತು ಮಕ್ಕಳನ್ನು ಅನಾಥಮಾಡಿದ್ದಾರೆ, ಅದಕ್ಕಾಗಿ ನಾವೆಲ್ಲರೂ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಆಹಾರ ಸೇವಿಸಿ ಆರೋಗ್ಯವಂತರಾಗಿರಿ ಎಂದು ಹೇಳಿದರು.

ಅದಲ್ಲದೆ ಈಗಿನ ಯುವಕರು ಒಳ್ಳೆಯ ಆರೋಗ್ಯಕ್ಕಾಗಿ ಉತ್ತಮ ಗುಣಮಟ್ಟದ ಆಹಾರ ಸೇವಿಸದೆ ಆರೋಗ್ಯ ಕೆಡುವಂತಹ ಗುಟಕಾ ಹಾಗೂ ಇನ್ನಿತರ ವಸ್ತುಗಳನ್ನು ಸೇವಿಸಿ ಆರೋಗ್ಯ ಹಾಳುಮಾಡಿಕೊಳ್ಳುತಿದ್ದಿರಿ ಅದಲ್ಲದೆ ವಿದ್ಯೆ ಕಡೆ ಗಮನ ಕೊಡದೆ ದುಶ್ಚಟಗಳ ಬಲಿಯಾಗುತಿದ್ದಿರಿ.ಅದರಿಂದ ನಿಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿರಿ ಹೊರತು ಆರೋಗ್ಯವಂತರಾಗುವುದಿಲ್ಲ,ಅದಕ್ಕಾಗಿ ಅಂತವುಗಳಿಗೆ ಮಾರುಹೊಗದೆ ಒಳ್ಳೆಯ ಆಹಾರ ಸೇವಿಸಿ ಉತ್ತಮ ಆರೋಗ್ಯ ರೂಪಿಸಿಕೊಳ್ಳುವಂತೆ ವಿನಂತಿಸಿದರು,ಈ ಸಂದರ್ಭದಲ್ಲಿ ,ಸಿಬ್ಬಂದಿಗಳಾದ ಎಚ್,ಡಿ,ಗೌಡಿ,ಎನ್,ಜಿ,ದುರದುಂಡಿ,ಮಹಿಳಾ ಸಿಬ್ಬಂದಿ ಪಿ,ಆರ್,ಸುಳ್ಳನ್ನವರ ಹಾಗೂ ಗುರುಸಿದ್ದೇಶ್ವರ ಶಿಜ್ಷಣ ಸಂಸ್ಥೆಯ ಶಿಕ್ಷಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.


Spread the love

About Fast9 News

Check Also

ಬೆಮೂಲ್ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಬಾಲಚಂದ್ರ ಜಾರಕಿಹೊಳಿ ಅವಿರೋಧವಾಗಿ ಆಯ್ಕೆ*

Spread the love*ಬೆಮೂಲ್ ಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಬಾಸ್* *ಬೆಮೂಲ್ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಬಾಲಚಂದ್ರ ಜಾರಕಿಹೊಳಿ …

Leave a Reply

Your email address will not be published. Required fields are marked *