ಕೊಣ್ಣೂರ ಸೋಮವಾರ ಸಂತೆ ಸ್ಥಳಾಂತರ,ಶ್ಲ್ಯಾಘನಿಯಕ್ಕೆ ಪಾತ್ರರಾದ ಪುರಸಭೆ ಅಧಿಕಾರಿಗಳು,ಮಾರ್ಶಲಗಳು.
ವೀಕೆಂಡ್ ಕಫ್ರ್ಯೂ ಎರಡನೇ ದಿನ ಮುಗಿಯುತಿದ್ದಂತೆ
ಸೋಮವಾರ ನಡೆಯುವ ಗೋಕಾಕ ತಾಲೂಕಿನ ಕೊಣ್ಣೂರಿನ ಸಂತೆಯಲ್ಲಿ ಕಾಯಿಪಲ್ಲೆ ಹಾಗೂ ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿ ಬಿದ್ದು ಕೊರಾನಾ ಹರಡುವ ಬೀತಿಯಿಂದ ಎಚ್ಚೆತ್ತುಗೊಂಡ ಕೊಣ್ಣೂರ ಪುರಸಭೆಯ ಅಧಿಕಾರಿಗಳು ಪ್ರತಿ ಬಾರಿ ನಡೆಯುತಿದ್ದ ಸಂತೆಯನ್ನು ಸ್ಥಳಾಂತರ ಮಾಡಿದ್ದರು.
ನಿನ್ನೆ ದಿನ ಸಂಜೆ ರವಿವಾರದಿಂದ ಕೊಣ್ಣೂರ ಪುರಸಭೆಯ ಮುಖ್ಯಾಧಿಕಾರಿಯ ನಿರ್ದೇಶನದಂತೆ ಕಿರಿಯ ಆರೋಗ್ಯ ಸಹಾಯಕರಾದ ಬಾಳನಾಯಕ ಕುಮರೇಶಿ ಇವರ ನೇತೃತ್ವದಲ್ಲಿ ಪುರಸಭೆಯ ರಂಗಮಂದಿರದ ಸ್ಥಳದಲ್ಲಿ ಕಚೇರಿಯಿಂದ ನೆಮಿಸಿದ ಮಾರ್ಶಲಗಳೊಂದಿಗೆ ಸಾರ್ವಜನಿಕರಿಗೆ ಹಾಗೂ ಪರಸ್ಥಳಗಳಿಂದ ಬರುವಂತಹ. ವ್ಯಾಪಾರಸ್ಥರಿಗೆ ಅನೂಕೂಲವಾಗುವಂತೆ ಕೊರಾನಾ ನಿಯಮದಂತೆ ಗುರುತುಗಳನ್ನು ಮಾಡಿದ್ದರು.
ಅದರಂತೆ ಇವತ್ತು ಸೋಮವಾರ ಮುಂಜಾನೆ 6 ಗಂಟೆಯಿಂದ ಅಧಿಕಾರಿಗಳು ಹಾಗೂ ಮಾರ್ಶಲ್ ಗಳು ಸಂತೆಗೆ ಮಾಸ್ಕ್ ದರಿಸಿದವರಿಗೆ ಮಾತ್ರ ಅನೂಕೂಲ ಮಾಡಿದರು,ಇದರಿಂದ ಎಚ್ಚೆತ್ತುಗೊಂಡ ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಮಾಸ್ಕ್ ದರಿಸುವುದಲ್ಲದೆ ಸಾಮಾಜಿಕ ಅಂತರ ಕಾಯ್ದುಕೊಂಡು ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಿದರು,
ಈ ಸಂದರ್ಭದಲ್ಲಿ ಕೆಲ ಸ್ಥಳಿಯರು ಹಾಗೂ ವ್ಯಾಪಾರಸ್ಥರು ಕೇವಲ ಕೊರಾನಾ ಹಿನ್ನೆಲೆಯಲ್ಲಿ ಸಂತೆ ಸ್ಥಳಾಂತರ ಮಾಡದೆ ಪ್ರತಿ ಬಾರಿಯೂ ಇಲ್ಲಿಯೆ ಸಂತೆ ನಡೆಸಲು ವಿನಂತಿಸಿದರು.ಎಕೆಂದರೆ ಮೊದಲಿನ ಸ್ಥಳ ಬಹಳ ಸಣ್ಣವಾಗಿದ್ದರಿಂದ ಅಲ್ಲಿ ಜನದಟ್ಟನೆಯಾಗುತ್ತದೆ ಇಲ್ಲಿ ಯಾವುದೆ ತರಹದ ತೊಂದರೆಯಾಗುವುದಿಲ್ಲಿ ಇಲ್ಲಿಯೆ ಸಂತೆ ನಡೆಸಲು ಸ್ಥಳಿಯರು,ವ್ಯಾಪಾರಸ್ಥರು ವಿನಂತಿಸಿ ಪುರಸಭೆಯ ಅಧಿಕಾರಿಗಳಿಗೆ ಸಂತೋಷ ವ್ಯಕ್ತಪಡಿಸಿದರು.