ಕೊರಾನಾ ನಿಯಮ ಪಾಲಿಸಿ ಸಂತೆ ನಡೆಸಿದ ಚಿಂಚಲಿ ಪಟ್ಟಣ ಪಂಚಾಯತ ಅಧಿಕಾರಿಗಳು,ಮಾರ್ಶಲಗಳು.
ಚಿಂಚಲಿ: ಪಟ್ಟಣದ ರೈಲ್ವೆ ಸ್ಟೇಶನ್ ರಸ್ತೆ ಪಕ್ಕದಲ್ಲಿ ನೂತನವಾಗಿ ಪಟ್ಟಣ ಪಂಚಾಯತ ನಿರ್ಮಾಣದ ಕಾರ್ಯಾಲಯದ ಆವರಣದಲ್ಲಿ
ಕಾಯಿಪಲ್ಲೆ ಹಾಗೂ ಅಗತ್ಯ ವಸ್ತುಗಳ ಖರೀದಿಗೆ ಜನರು ಕೊರಾನಾ ಹರಡುವ ಬೀತಿಯಿಂದ ಎಚ್ಚೆತ್ತುಗೊಂಡ ಚಿಂಚಲಿ ಪಟ್ಟಣ ಪಂಚಾಯತ ಅಧಿಕಾರಿಗಳು ಸಂತೆಯನ್ನು ಸ್ಥಳಾಂತರ ಮಾಡಿದ್ದರು.
ನಿನ್ನೆ ದಿನ ಸಂಜೆ ಸೋಮವಾರಂದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ವೆಂಕಟಸ್ವಾಮಿ ಬಳ್ಳಾರಿ ಹಾಗೂ ಸಿಬ್ಬಂದಿಗಳು ಮಾರ್ಶಲಗಳೊಂದಿಗೆ ಸಾರ್ವಜನಿಕರಿಗೆ ಹಾಗೂ ಪರಸ್ಥಳಗಳಿಂದ ಬರುವಂತಹ. ವ್ಯಾಪಾರಸ್ಥರಿಗೆ ಅನೂಕೂಲವಾಗುವಂತೆ ಕೊರಾನಾ ನಿಯಮದಂತೆ ಗುರುತುಗಳನ್ನು ಮಾಡಿದ್ದರು.
ಅದರಂತೆ ಇವತ್ತು ಮಂಗಳವಾರ ಮುಂಜಾನೆ 6 ಗಂಟೆಯಿಂದ ಅಧಿಕಾರಿಗಳು ಹಾಗೂ ಮಾರ್ಶಲ್ ಗಳು ಸಂತೆಗೆ ಮಾಸ್ಕ್ ಧರಿಸಿದವರಿಗೆ ಮಾತ್ರ ಅನೂಕೂಲ ಮಾಡಿದರು,ಇದರಿಂದ ಎಚ್ಚೆತ್ತುಗೊಂಡ ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಮಾಸ್ಕ್ ಧರಿಸುವುದಲ್ಲದೆ ಸಾಮಾಜಿಕ ಅಂತರ ಕಾಯ್ದುಕೊಂಡು ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಿದರು,
ಈ ಸಂದರ್ಭದಲ್ಲಿ ಲಕ್ಷ್ಮಣ ಕೋಳಿಗುಡ್ಡೆ. ಸಂಜು ನಿಂಗನೂರೆ. ನಾಮದೇವ. ಕೃಷ್ಣ. ಶ್ರಾವಣಕುಮಾರ ಕಾಂಬಳೆ. ರವಿ ಖೋತ. ಮೀರಾಸಾಬ. ಹಾಗೂ ಸಿಬ್ಬಂದಿಗಳು ಉಪಸ್ಥಿಯರಿದ್ದರು.