Breaking News

ಪ್ರದಾನ ಮಂತ್ರಿ ಮೋದಿ ಇವರಿಂದ ರೈತರಿಗೆ ಗುಡ್ ನ್ಯೂಸ್

Spread the love

ಪ್ರದಾನ ಮಂತ್ರಿ ಮೋದಿ ಇವರಿಂದ ರೈತರಿಗೆ ಗುಡ್ ನ್ಯೂಸ್

ಪಿಎಂ-ಕಿಸಾನ್‌ ಯೋಜನೆಯಡಿ ಒಂಬತ್ತು ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ 18 ಸಾವಿರ ಕೋಟಿ ರೂಗಳಷ್ಟು ನಿಧಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇವತ್ತು ವರ್ಗಾವಣೆ ಮಾಡಲಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹುಟ್ಟುಹಬ್ಬವಾದ ಡಿಸೆಂಬರ್‌ 25ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಈ ನಿಧಿ ವರ್ಗಾವಣೆ ಮಾಡಲಾಗುವುದು.

ಮೇಲ್ಕಂಡ ಯೋಜನೆಯಡಿ, ದೇಶಾದ್ಯಂತ 14.5 ಕೋಟಿ ರೈತರಿಗೆ ನೆರವಿನ ರೂಪದಲ್ಲಿ ಕೇಂದ್ರ ಸರ್ಕಾರವು ತಲಾ ಆರು ಸಾವಿರ ರೂಗಳನ್ನು ವಾರ್ಷಿಕ ಮೂರು ಕಂತುಗಳಲ್ಲಿ, ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುತ್ತಾ ಬಂದಿದೆ.

ಪಿಎಂ-ಕಿಸಾನ್‌ ಯೋಜನೆಯ ಫಲಾನುಭವಿಗಳಿಗೆ ನೀಡಲಾಗುವ ನೆರವಿನ ಧನದ ಏಳನೇ ಕಂತಿನ ಹಣವನ್ನು ಇವತ್ತು ಶುಕ್ರವಾರ ಬಿಡುಗಡೆ ಮಾಡಲಾಗುವುದು.


Spread the love

About fast9admin

Check Also

ಮಗಳನ್ನು ಪ್ರೀತಿಸುತ್ತಿದ್ದ  ಕಾರಣಕ್ಕೆ ಹುಡುಗನಿಗೆ ಮನಬಂದಂತೆ ಥಳಿಸಿ ಕೊಲೆ

Spread the loveಮಗಳನ್ನು ಪ್ರೀತಿಸುತ್ತಿದ್ದ  ಕಾರಣಕ್ಕೆ ಹುಡುಗನಿಗೆ ಮನಬಂದಂತೆ ಥಳಿಸಿ ಕೊಲೆ ಕಲಬುರಗಿ: ತಮ್ಮ ಮಗಳನ್ನು ಪ್ರೀತಿಸುತ್ತಿದ್ದ ಎನ್ನುವ ಕಾರಣಕ್ಕೆ …

Leave a Reply

Your email address will not be published. Required fields are marked *