Breaking News

ನಿಂಬೆಹಣ್ಣು ಹಿಡಿದು ನಾಮಪತ್ರ ಸಲ್ಲಿಸಿದ ನಗರಸಭೆ ಅಭ್ಯರ್ಥಿ.!

Spread the love

ನಿಂಬೆಹಣ್ಣು ಹಿಡಿದು ನಾಮಪತ್ರ ಸಲ್ಲಿಸಿದ ನಗರಸಭೆ ಅಭ್ಯರ್ಥಿ.!

ಗೋಕಾಕ: ನಿಂಬೆಹಣ್ಣು ಎಂದರೆ, ಹೆಚ್.ಡಿ.ರೇವಣ್ಣ, ರೇವಣ್ಣ ಎಂದರೆ ನಿಂಬೆಹಣ್ಣು ಎನ್ನುವ ಮಾತು ರಾಜ್ಯದಲ್ಲಿ ಜನಜನಿತವಾಗಿದೆ. ರೇವಣ್ಣ ತಮ್ಮ ಕೈಯಲ್ಲಿ, ಜೇಬಿನಲ್ಲಿ ನಿಂಬೆಹಣ್ಣು ಹಿಡಿದುಕೊಂಡು ಓಡಾಡುವುದು ಸಹಜ.
ಆದರೆ ಇಲ್ಲೊಬ್ಬ ನಗರಸಭೆ ಉಪಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿ ನಿಂಬೆಹಣ್ಣು ಕೈಯಲ್ಲಿ ಹಿಡಿದು ನಾಮಪತ್ರ ಸಲ್ಲಿಸಿ, ನಗರದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಮಾಜಿ ನಗರಸಭೆ ಸದಸ್ಯ ಗಿರೀಶ ಖೋತ ಅವರ ಅಕಾಲಿಕ ನಿಧನದಿಂದ ತೆರವಾದ ನಗರಸಭೆ ವಾರ್ಡ ನಂ13 ರ ಉಪಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಲು ಆಗಮಿಸಿದ್ದ ಅಭ್ಯರ್ಥಿ ಪ್ರವೀಣ ಪ್ರಭಾಕರ ಚುನಮರಿ ನಿಂಬೆಹಣ್ಣು ಹಿಡಿದು ನಾಮಪತ್ರ ಸಲ್ಲಿಸಿದ್ದಾರೆ.
ಅಭ್ಯರ್ಥಿ ಪ್ರವೀಣ ಚುನಮರಿ ನಿಂಬೆಹಣ್ಣು ಹಿಡಿದು ನಾಮಪತ್ರ ಸಲ್ಲಿಸುವ ಪೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೋಡುಗರು ಗೋಕಾಕ ರೇವಣ್ಣ ಎಂಬ ಬಿರುದು ನೀಡುತ್ತಿದ್ದಾರೆ. ಅಲ್ಲದೆ ನಾಮಪತ್ರ ಸಲ್ಲಿಕೆಗೂ ಮುನ್ನ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಮಸ್ಕರಿಸಿದ್ದು, ಮೂಢನಂಬಿಕೆ ವಿರುದ್ಧ ದಿಕ್ಕಿನಲ್ಲಿ ಇರುವ ಬಸವ ತತ್ವಕ್ಕೆ ಅಪಮಾನ ಮಾಡಲಾಗಿದೆ ಎಂದು ಹಲವು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ನಗರದ ಪ್ರಜ್ಞಾವಂತ ನಾಗರಿಕರು ಚುನಾವಣೆಯಲ್ಲಿ ಸ್ಪರ್ಧಿಸಲು ಅಭ್ಯರ್ಥಿ ವಾಮಾಚಾರಕ್ಕೆ ಮೊರೆ ಹೋಗಿದ್ದನ್ನು ಖಂಡಿಸಿದ್ದಾರೆ.


Spread the love

About Fast9 News

Check Also

ಪರಸ್ಪರ ಸಹಕಾರ ಹಾಗೂ ಒಗ್ಗಟ್ಟಿನಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯವಿದೆ: ಶಾಸಕ ಬಾಲಚಂದ್ರ ಜಾರಕಿಹೋಳಿ

Spread the loveಪರಸ್ಪರ ಸಹಕಾರ ಹಾಗೂ ಒಗ್ಗಟ್ಟಿನಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯವಿದೆ: ಶಾಸಕ ಬಾಲಚಂದ್ರ ಜಾರಕಿಹೋಳಿ ಗೋಕಾಕ- ಜಿಲ್ಲೆಯ …

Leave a Reply

Your email address will not be published. Required fields are marked *