Breaking News

ನನ್ನ ಜೀವನ ನನ್ನ ಸ್ವಚ್ಛ ನಗರ”ಅಬಿಯಾನಕ್ಕೆ ಕೈ ಜೊಡಿಸಿ: ಪೆದನ್ನವರ.

Spread the love

ನನ್ನ ಜೀವನ ನನ್ನ ಸ್ವಚ್ಛ ನಗರ”ಅಬಿಯಾನಕ್ಕೆ ಕೈ ಜೊಡಿಸಿ: ಪೆದನ್ನವರ.

ಗೋಕಾಕ ತಾಲೂಕಿನ ಕೊಣ್ಣೂರ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಮರಡಿಮಠದಲ್ಲಿ ಅದೃಷ್ಯ ಶ್ರೀ ಪವಾಡೇಶ್ವರ ಮಹಾಸ್ವಾಮಿಗಳು ಮರುಬಳಕೆ,ಪುನರ ಬಳಕೆ RRR ಕೇಂದ್ರವನ್ನು ಸಸಿಗೆ ನೀರು ಉಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,

ಮುಖ್ಯಾಧಿಕಾರಿಗಳಾದ ಮಲ್ಲಪ್ಪ ಪೆದನ್ನವರ ಇವರು ಶ್ರೀಗಳನ್ನು ಹಾಗೂ ಪುರಸಭೆ ಸದಸ್ಯರನ್ನು ಹೂ ನೀಡಿ ಸ್ವಾಗತಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ವಚ್ಛ ಭಾರತ ಮಿಷನ್ ನಗರ 2.0 ಯೋಜನೆಯಡಿಯಲ್ಲಿ ಹಮ್ಮಿಕೊಂಡ

ಮೇರಿ ಲೈಫ್ ಮೇರಾ ಸ್ವಚ್ಛ ಶಹರ” “ನನ್ನ ಜೀವನ ನನ್ನ ಸ್ವಚ್ಛ ನಗರ”ಅಬಿಯಾನಕ್ಕೆ ಇವತ್ತು ಸಾರ್ವಜನಿಕರಾದ ನಾವೆಲ್ಲರೂ ಕೈ ಜೊಡಿಸಿ ಯಶಸ್ವಿ ಮಾಡಬೇಕಾಗಿದೆ ಅದಕ್ಕಾಗಿ,(ಮರುಬಳಕೆ)(ಪುನರ್‌ಬಳಕೆ) RRR ಕೇಂದ್ರವನ್ನು ತೆರಯಲಾಗಿದೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ರಕ್ಷಿಸುವುದು ಲೈಫ್ ಮಿಷನ್‌ನ ಪ್ರಮುಖ ಉದ್ದೇಶವಾಗಿರುತ್ತದೆ ಅದಕ್ಕಾಗಿ ಸಾರ್ವಜನಿಕರು
ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಸೇರಿದಂತೆ ಆಟಿಕೆ ವಸ್ತುಗಳು,ಬಳಿಸಿದ,ಬಟ್ಟೆ,ದಿನಪತ್ರಿಕೆಗಳು,ಹಳೆಯ ಪುಸ್ತಕಗಳು ಹಾಗೂ ಎಲೆಕ್ಟಾçನಿಕ್ ವಸ್ತುಗಳಂತಹ 06 ಬಗೆಯ ನವೀಕರಿಸಿ ಮರುಬಳಸಬಹುದಾದಂತಹ ವಸ್ತುಗಳ ಉತ್ಪಾದನೆಯನ್ನು ಕಡಿಮೆಗೊಳಿಸಲು ನೀಡುವದರ ಮೂಲಕ ಸುಸ್ಥಿರ ಜೀವನ ಪದ್ದತಿಗಳನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ಸಾರ್ವಜನಿಕರಿಗೆ ಸಹಕರಿಸಲು ಕರೆ ನೀಡಿದರು.

ದಿನಾಂಕ:20-05-2023 ರಿಂದ ದಿ:05-06-2023 ರ ವರೆಗೆ ಪ್ರತಿ ದಿನ ಬೆಳಿಗ್ಗೆ 07:00 ಘಂಟೆಯಿಂದ ಮಧ್ಯಾಹ್ನ 1:00 ಘಂಟೆಯವರೆಗೆ ಮರಡಿಮಠದಲ್ಲಿ ಈ ಕಾರ್ಯಕ್ರಮ ಇರುತ್ತದೆ

RRR ”ಕೇಂದ್ರಗಳಿಗೆ ತಾಜ್ಯವನ್ನು ದೇಣಿಗೆಯಾಗಿ ನೀಡುವ ಪ್ರತಿಯೊಬ್ಬರಿಗೂ ಅವರು ನೀಡುವ ತ್ಯಾಜ್ಯದ ಆಧಾರದ ಮೇಲೆ ವಿವಿಧ ಪ್ರೋತ್ಸಾಹಕಗಳನ್ನು ನೀಡಲಾಗುವುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಿರಿಯ ಆರೋಗ್ಯ ನಿರಿಕ್ಷಕ ಬಾಳನಾಯಕ ಕುಮರೇಶಿ ,ಕಂದಾಯ ನೀರಿಕ್ಷಕರಾದ ರಮೇಶ ಸೊನ್ನದ, ಕಚೇರಿ ಮ್ಯಾನೆಜರ ವಿಜಯಲಕ್ಷ್ಮಿ ನಾಯಕ, ಸೇರಿದಂತೆ ಪುರಸಭೆ ಸಿಬ್ಬಂದಿಗಳು,ಪೌರಕಾರ್ಮಿಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.


Spread the love

About Fast9 News

Check Also

ನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ

Spread the loveನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ …

Leave a Reply

Your email address will not be published. Required fields are marked *