ನಿವೃತ್ತ ಶಿಕ್ಷಕನಿಗೆ ಊರ ತುಂಬ ಮೆರವಣಿಗೆ ಮಾಡಿದ ಗ್ರಾಮಸ್ಥರು.
ಗೋಕಾಕ : ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತ ಹೊಂದಿದ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದ ಶಿಕ್ಷಕ ಸುರೇಶ ಕರೆಪ್ಪ ಹೊನಕುಪ್ಪಿಯವರನ್ನು ಗ್ರಾಮಸ್ಥರು ತೆರದ ವಾಹನದಲ್ಲಿ ಮೆರವಣಿಗೆ ಮಾಡುವ ಮೂಲಕ ಸ್ವಾಗತಿಸಿದರು.
30 ವರ್ಷಗಳ ಸರ್ಕಾರಿ ಸೇವೆಯಲ್ಲಿದ್ದ ಸುರೇಶ ಹೊನಕುಪ್ಪಿಯವರು ಆರಂಭದ 6 ವರ್ಷ ಮೆಳವಂಕಿ,11 ವರ್ಷ ಉಪ್ಪಾರಟ್ಟಿಯಲ್ಲಿ ಹಾಗೂ ಘಟಪ್ರಭಾದಲ್ಲಿ 13 ವರ್ಷ ಸೇವೆ ಸಲ್ಲಿಸಿದ್ದಾರೆ, ಇವರ ಅತ್ಯುತ್ತಮ ಸೇವೆಗಾಗಿ ಉಪ್ಪಾರಟ್ಟಿ ಗ್ರಾಮ ಪಂಚಾಯತಿಯವರು ಉತ್ತಮ ಶಿಕ್ಷಕ, ಮಮದಾಪುರ ಪಾವಟೆ ಶಾಲೆಯವರು ಗುರುರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದರು, ತದನಂತರ ಪ್ರಶಸ್ತಿಗಳು ಇವರ ಜವಾಬ್ದಾರಿ ಹೆಚ್ಚಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಉತ್ತೆಜನ ನೀಡಿತು, ಅದರಂತೆ 2007 ರಲ್ಲಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದು 2022 ರಲ್ಲಿ ರಾಜ್ಯ ಪ್ರಶಸ್ತಿ ಲಬಿಸಿತು,
ಸುರೇಶ ಹೊನಕುಪ್ಪಿ ಇವರು ಯಾವುದೆ ಶಾಲೆಯಲ್ಲಿ ಅಷ್ಟೆ ಅಲ್ಲದೆ ಶಾಲೆಗಳಲ್ಲಿ ಕೊಣ್ಣೂರ ಮಾಸ್ತರ ಎಂದೆ ಖ್ಯಾತಿಯಾಗಿದ್ದರು.
30 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ಶಿಕ್ಷಕನಿಗೆ ಊರಿನ ಜನ ಊರಿನ ತುಂಬ ಮೆರವಣಿಗೆ ಮಾಡಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಗ್ರಾಮಸ್ಥರು ,ಕುಟುಂಬಸ್ಥರು, ನಿವೃತ್ತಿಯಾದ ಶಿಕ್ಷಕನಿಗೆ ಶಾಲು ಹೋದಿಸಿ ಸತ್ಕರಿಸಿ ನಿವೃತ್ತಿ ಜೀವನ ಉತ್ತಮವಾಗಿ ಸಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಶೇಖರ ಕೊಣ್ಣೂರ,ಧನ್ಯಕುಮಾರ ಮೇಗೇರಿ,ನಿವೃತ್ತ ಪೋಲಿಸ್ ಅಧಿಕಾರಿ ಬಾಲಚಂದ್ರ ಶಿಂಗ್ಯಾಗೋಳ, ಕುಮಾರ ಕೊಣ್ಣೂರ,ವೆಂಕಟೇಶ ಕೇಳಗೇರಿ,ಕೆಂಪಣ್ಣಾ ಕೇಳಗೇರಿ ಸೇರಿದಂತೆ ಇನ್ನೂಳಿದ ಹಿರಿಯರು ಉಪಸ್ಥಿತರಿದ್ದರು.