Breaking News

ಆಪರೇಷನ್ ಕಮಲ : ಕೈ ನಾಯಕ ಬಿಜೆಪಿಗೆ ಸೆರ್ಪಡೆ

Spread the love

ಆಪರೇಷನ್ ಕಮಲ : ಕೈ ನಾಯಕ ಬಿಜೆಪಿಗೆ ಸೆರ್ಪಡೆ

ಚಿಕ್ಕಬಳ್ಳಾಪುರ : ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರ ಅಪರೇಷನ್ ಸರ್ಜರಿಗಳು ಮುಂದುವರಿಯುತ್ತಿದ್ದು, ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಟಗೊಳಿಸೋಕೆ ಹಾಗೂ ತಮ್ಮ ನೆಲೆಯನ್ನ ಭದ್ರಪಡಿಸಿಕೊಳ್ಳೊಕೆ ಕಾಂಗ್ರೆಸ್ ಸೇರಿದಂತೆ ಜೆಡಿಎಸ್ ನಾಯಕರುಗಳನ್ನು ಪಕ್ಷಕ್ಕೆ ಸೆಳೆಯುವ ಕಾರ್ಯ ಮುಂದುವರಿಸಿದ್ದಾರೆ.

ಇತ್ತೀಚೆಗಷ್ಟೇ ಶಿಡ್ಲಘಟ್ಟದ ಮಾಜಿ ಶಾಸಕ ಎಂ.ರಾಜಣ್ಣ ಅವರನ್ನ ಬಿಜೆಪಿ ಸೇರಿಸಿಕೊಂಡಿರುವ ಬೆನ್ನಲ್ಲೇ ಇದೀಗ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಪ್ರಭಾವಿ ಕಾಂಗ್ರೆಸ್ ಮುಖಂಡ, ಈ ಹಿಂದೆ ತಮ್ಮ ವಿರೋಧಿಯಾಗಿದ್ದ ಕೆ.ವಿ ನವೀನ್ ಕಿರಣ್ ಅವರನ್ನ ಬಿಜೆಪಿಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ ಸುಧಾಕರ್ ನೇತೃತ್ವದಲ್ಲಿ ಯಡಿಯೂರಪ್ಪನವರ ಸಮ್ಮುಖದಲ್ಲಿ ಕೆ ವಿ ನವೀನ್ ಕಿರಣ್ ಅವರು ಕಾಂಗ್ರೆಸ್ ಪಕ್ಷ ತೊರೆದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡರು.


Spread the love

About fast9admin

Check Also

ಎಂದಿಗೂ ರಾಜಕೀಯ ನಿವೃತ್ತಿ ಕುರಿತು ಮಾತನಾಡಬೇಡಿ: ಬಾಲಚಂದ್ರ ಅವರಿಗೆ ಒಕ್ಕೂರಿಲಿನಿಂದ ದಲಿತರ ಮನವಿ

Spread the loveಎಲ್ಲ ಸಮಾಜಗಳು ಸಹೋದರತ್ವ ಭಾವನೆಗಳಿಂದ ನಡೆದಾಗ ಮಾತ್ರ ಅಭಿವೃದ್ದಿ ಸಾಧ್ಯ-ಶಾಸಕ ಬಾಲಚಂದ್ರ ಜಾರಕಿಹೊಳಿ. ಬಾಲಚಂದ್ರ ಜಾರಕಿಹೊಳಿ ಅವರಿಗೆ …

Leave a Reply

Your email address will not be published. Required fields are marked *