*ದಿನಗೂಲಿ.ನೇರ ಪಾವತಿದಾರರಾಗಿ ಕೆಲಸ ಮಾಡುತಿದ್ದವರಿಗೆ ಸರಕಾರದಿಂದ ಖಾಯಂ ಆದೇಶ ಪತ್ರ ವಿತರಣೆ.*
ಬೆಳಗಾವಿ: ನಗರ ಸುಂದರವಾಗಿ ಕಾಣಲಿಕ್ಕೆ ಪೌರಕಾರ್ಮಿಕರ ಪರಿಶ್ರಮ ಕಾರಣ, ಕಡಿಮೆ ಸಂಬಳದಲ್ಲಿ ಹೆಚ್ಚು ಕೆಲಸವನ್ನು ಪೌರಕಾರ್ಮಿಕರು ಮಾಡುತ್ತಿದ್ದಾರೆ ಬರುವ ದಿನಗಳಲ್ಲಿ ಕರ್ನಾಟಕ ಸರ್ಕಾರ ಪೌರಕಾರ್ಮಿಕರಿಗಾಗಿ ಇನ್ನಷ್ಟು ಯೋಜನೆ ಜಾರಿಮಾಡುತ್ತದೆ ಎಂದು ಪೌರಾಡಳಿತ & ಹಜ್ ಸಚಿವ ರಹೀಮ್ ಖಾನ ಹೇಳಿದರು. ನಗರಾಭಿವೃದ್ಧಿ ಇಲಾಖೆ ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ಹಾಗು ಜಿಲ್ಲಾಡಳಿತ ಬೆಳಗಾವಿ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ಜಿಲ್ಲೆಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇಮಕವಾದ ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ವಿತರಣಾ ಸಮಾರಂಭ ಬೆಳಗಾವಿಯ ಕುಮಾರ ಗಂಧರ್ವ ಹಾಲನಲ್ಲಿ ಆಯೋಜನೆ ಮಾಡಲಾಗಿತ್ತು .ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಪೌರಾಡಳಿತ & ಹಜ್ ಸಚಿವ ರಹೀಮ್ ಖಾನ ,ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ,ಪ್ರಕಾಶ ಹುಕ್ಕೇರಿ ,ಶಾಸಕ ಆಶೀಪ್ ಶೇಖ ,ಮೇಯರ್ ಶೋಭಾ ಸೋಮನಾಚೆ ಹಾಗು ಉಪಮೇಯರ ರೇಶ್ಯಾ ಪಾಟೀಲ ಅವರು ಪೌರ ಕಾರ್ಮಿಕರಿಗೆ
ನೇಮಕಾತಿ ಪತ್ರ ವಿತರಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ
ಗಣ್ಯರು ದೀಪಪ್ರಜ್ವಲನೆ ಮಾಡುವುದರ ಮೂಲಕ
ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು .
ಪೌರಾಡಳಿತ & ಹಜ್ ಸಚಿವ ರಹೀಮ್ ಖಾನ ಮಾತನಾಡುತ್ತಾ
ಇವತ್ತು ಪೌರಕಾರ್ಮಿಕರಿಗೆ ಆದೇಶ ಪ್ರತಿಗಳನ್ನ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಪೌರ ಕಾರ್ಮಿಕರು ನಗರದ
ಸ್ವಚ್ಚತೇಯನ್ನು ಬೆಳಿಗ್ಗೆ ೫ ಗಂಟೆಯಿಂದ ಮಾಡುತ್ತಾರೆ ಎಲ್ಲ ನಗರ ವಾರ್ಡ್ ಗಳಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡುವಲ್ಲಿ ಪೌರಕಾರ್ಮಿಕರ ಕಾರ್ಯ ಶ್ಲಾಘನೀಯ ಈ ಹಿಂದೆ
ಸಿದ್ದರಾಮಯ್ಯನವರು ಮುಖ್ಯಮಂತ್ರಿ ಇದ್ದಾಗ ಎಲ್ಲ ದಿನಗೂಲಿ ನೌಕರರನ್ನು ಖಾಯಂ ಮಾಡುವ ಆದೇಶ ಮಾಡಿದ್ದರು.
ಪೌರಕಾರ್ಮಿಕರು ಮತ್ತು ಇನ್ನುಳಿದ ಇಲಾಖೆಯಲ್ಲಿ ದಿನಗೂಲಿ ಕೆಲಸ ಮಾಡುತಿದ್ದವರನ್ನು ಅನೇಕ ವರ್ಷಗಳಿಂದ ಖಾಯಂ ಗೊಳಿಸುವಂತೆ ಅನೇಕ ಹೋರಾಟಗಳನ್ನ ಮಾಡುತ್ತಾ
ಬಂದಿದ್ದರು. ಪೌರಕಾರ್ಮಿಕರಂತೆ ಇನ್ನುಳಿದವರು ಖಾಯಂ ಆದೇಶಗಳ ಪ್ರಕ್ರಿಯೆ ಚಾಲ್ತಿಯಲ್ಲಿದೆ,ಎಲ್ಲ ಇಲಾಖೆಯವರಿಗೂ ಕೂಡಾ ಇಲಾಖಾವಾರು ಹಂತ ಹಂತವಾಗಿ ಎರಡು ತಿಂಗಳ ಒಳಗೆ ಪೌರಕಾರ್ಮಿಕರ ಹಾಗೆ ಎಲ್ಲರಿಗೂ ಖಾಯಂ ಆದೇಶ ನೀಡಲಾಗುತ್ತದೆ, ಸರ್ಕಾರ ದಿನಗೂಲಿ ನೌಕರರಿಗೆ ನೀಡಿರುವ ಭರವಸೆಗಳನ್ನೂ ಈಡೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ ಎಂದರು . ನಮ್ಮ ಸರ್ಕಾರ ನಿಮ್ಮ ಜೊತೆ ಸದಾ ಇದೆ ಎಂದರು .
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡುತ್ತಾ ಪೌರಕಾರ್ಮಿಕರು ನಗರವನ್ನು ಸ್ವಚ್ಚ ಮಾಡುವ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ನಗರ ಸೌಂದರಕರಣ ತುಂಬಾ ಮಹತ್ವವಾದದ್ದು ಕಡಿಮೆ ಸಂಬಳದಲ್ಲಿ ಹೆಚ್ಚು ಕೆಲಸವನ್ನು ದಿನಗೂಲಿ ನೌಕರರು ಮಾಡುತ್ತಿದ್ದಾರೆ ಬರುವ ದಿನಗಳಲ್ಲಿ ನಿಮಗೆ ಸರ್ಕಾರ ನಿಮಗೆ ಇನ್ನಷ್ಟು ಯೋಜನೆ ಜಾರಿಮಾಡುತ್ತದೆ.ಸರಕಾರ ನಿಮಗೆ ನೀಡಿರುವ ಭರವಸೆಗಳನ್ನು ಇಡೆರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ ಎಂದರು.
ವಿಧಾನ ಪರಿಷತ್ತ ಸದಸ್ಯ ಪ್ರಕಾಶ ಹುಕ್ಕೇರಿ ಪೌರಕಾರ್ಮಿಕರನ್ನ
ಖಾಯಂಗೊಳಿಸಿದ್ದಕ್ಕೆ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿ
ಮಾತಾನಾಡುತ್ತಾ ಪೌರ ಕಾರ್ಮಿಕರಿಗೆ ಪ್ರತಿ ತಿಂಗಳು ೫
ದಿನಾಂಕದ ಒಳಗಾಗಿ ಸಂಬಳ ಕೊಡುವ ವ್ಯವಸ್ಥೆ ಮಾಡಬೇಕು ಅದರ ಜೊತೆಯಲ್ಲಿ ಇನ್ನುಳಿದ ಇಲಾಖೆಯವರಿಗೆ ಆದಷ್ಟು ಬೇಗನೆ ಖಾಯಂ ಆದೇಶ ಪತ್ರ ನೀಡಬೇಂದರು.ಸರಕಾರ
ಆಧುನಿಕ ಪದ್ಧತಿಯಿಂದ ಮಷಿನ್ ಗಳನ್ನೂ ತಂದಿದೆ.
ಪೌರಕಾರ್ಮಿಕರು ಇನ್ನು ಮುಂದೆ ಕೈಯಿಂದ ಕಸ ಎತ್ತದಂತೆ
ವಿನೂತನ ಮಷಿನ್ ನೀಡುತ್ತಿದ್ದೇವೆ ಅದನ್ನು ಪೌರಕಾರ್ಮಿಕರು
ಸದುಪಯೋಗ ಮಾಡಿಕೊಳ್ಳಬೇಕು ಎಂದರು .ಶಾಸಕ ಆಶೀಪ್ ಶೇರ್ ಅಧ್ಯಕ್ಷೀಯ ಭಾಷಣ ಮಾಡುತ್ತಾ ಎಲ್ಲಾ ಇಲಾಖೆಯ ದಿನಗೂಲಿ ನೌಕರರಿಗೆ 5 ತಿಂಗಳ ಹಿಂದೆ ನಾವು ಭರವಸೆ ನೀಡಿದ್ದೆವು ನಾವು ನಿಮ್ಮ ಜೊತೆಗೆ ಸದಾ ಇರುತ್ತೇವೆ ನಮ್ಮ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಹಾಗು ನಮ್ಮ ಅಧಿಕಾರಿಗಳು ನಿಮ್ಮ ಪರವಾಗಿ ಚಿಂತನೆ ಮಾಡಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಮೇಯರ್
ಶೋಭಾ ಸೋಮನಾಚೆ ಹಾಗು ಉಪಮೇಯರ ರೇಶಾ ಪಾಟೀಲ
ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ,ಎಸ್, ಪಿ,ಭೀಮಾಶಂಕರ ಗುಳೆದ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.