Breaking News

ಕನ್ನಡದಲ್ಲಿ ಪಥಸಂಚಲನ ಮಾಡಿದ ಪಿ,ಎಸ್,ಐ, ವಾಲಿಕಾರ.ಅವರಿಗೆ ಹರಿದು ಬಂತು ಅಬಿಮಾನ ಮಹಾಪುರ.

Spread the love

ಕನ್ನಡದಲ್ಲಿ ಪಥಸಂಚಲನ ಮಾಡಿದ ಪಿ,ಎಸ್,ಐ, ವಾಲಿಕಾರ.ಅವರಿಗೆ ಹರಿದು ಬಂತು ಅಬಿಮಾನ ಮಹಾಪುರ.

ಗಣರಾಜ್ಯೋತ್ಸವ ಪೊಲೀಸ ಪಥ ಸಂಚಲನಕ್ಕೆ ಕನ್ನಡದಲ್ಲಿ ನಿರ್ದೇಶನ ನೀಡಿ ಎಲ್ಲರ ಗಮನ ಸೆಳೆದಿರುವ ಗೋಕಾಕ ಶಹರ ಠಾಣೆ ಪಿಎಸ್ಐ ಕೆ.ವಾಲಿಕರ ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅಭಿನಂದನೆ ಸಲ್ಲಿಸಿದ್ದಾರೆ.

ಈ ಕುರಿತು ಅಭಿನಂದನಾ ಪತ್ರ ಕಳುಹಿ‌ಸಿರುವ ಅವರು ಪೊಲೀಸ ಇಲಾಖೆಯಲ್ಲಿ ಕವಾಯತ್ತು ಪ್ರದರ್ಶನದಲ್ಲಿ ಕೆಲವ ಹಿಂದಿ ಮತ್ತು ಇಂಗ್ಲಿಷನಲ್ಲಿಯೆ ನಿರ್ದೇಶನ ನೀಡುತ್ತಿರುವ ಸಂದರ್ಭದಲ್ಲಿ 73ನೇ ಗಣರಾಜ್ಯೋತ್ಸವ ಪಥ ಸಂಚಲನಕ್ಕೆ ಗೋಕಾಕ ಶಹರ ಪೋಲಿಸ್ ಠಾಣೆಯ ಪಿಎಸ್ಐ ಕೆ.ವಾಲಿಕರ ಅವರು ಕನ್ನಡದಲ್ಲಿ ಆದೇಶ ನೀಡಿದ್ದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗಮನಿಸಿ, ಅಖಂಡ ಕನ್ನಡದ ಮನಸ್ಸುಗಳ ಪರವಾಗಿ ಹೃತ್ಪೂರ್ವಕ ಅಭಿನಂದನೆಯನ್ನು ಸಲ್ಲಿಸಿ, ಇದು ಎಲ್ಲಾ ಪೊಲೀಸ ಅಧಿಕಾರಿಗಳಿಗೆ ಮಾದರಿಯಾಗಲಿ ಎಂದು ಪ್ರಾಧಿಕಾರ ಹಾರೈಸುತ್ತದೆ. ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕನ್ನಡ ಭಾಷೆ ಬಳಕೆ ಮತ್ತು ಅನುಷ್ಠಾನ ಆಡಳಿತ ವ್ಯವಸ್ಥೆಯಲ್ಲಿ ಕಟ್ಟು ನಿಟ್ಟಾಗಿ ಜಾರಿಗೊಳ್ಳಲಿ ಎಂದು ಆಶಿಸುತ್ತೇನೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌. ನಾಗಾಭರಣ ಅವರು ಅಭಿನಂದನಾ ಪತ್ರವನ್ನು ಪಿಎಸ್ಐ ಕೆ.ವಾಲಿಕರ ಅವರಿಗೆ ಕಳುಹಿಸಿದ್ದಾರೆ.


Spread the love

About Fast9 News

Check Also

ನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ

Spread the loveನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ …

Leave a Reply

Your email address will not be published. Required fields are marked *