ಬಿಕ್ಷೆ ಬೇಡುವ ಸ್ಥಳಕ್ಕಾಗಿ ಇಬ್ಬರಲ್ಲಿ ಜಗಳ, ರಾಜಿ ಮಾಡಿಸಿದ ಪೋಲೀಸರು
ಬೆಂಗಳೂರು : ಭಿಕ್ಷೆ ಬೇಡುವ ಜಾಗಕ್ಕೆ ಇಬ್ಬರು ಭಿಕ್ಷುಕರು ಕಿತ್ತಾಡಿ ಕೊನೆಗೆ ಪೊಲೀಸರೆ ಬಂದು ರಾಜಿ ಮಾಡಿಸಿದ ಘಟನೆ ನಡೆದಿದೆ.ಡಿಜೆ ಹಳ್ಳೀ ಪೊಲೀಸ್ ಠಾಣಾ ವ್ಯಾಪ್ತಿಯ ಮೋರ್ ಶಾಪಿಂಗ್ ಮಾಲ್ ಬಳಿ ಇಬ್ಬರು ಭಿಕ್ಷೆ ಬೇಡುವ ಮಹಿಳೆಯರು ಜಾಗಕ್ಕಾಗಿ ಕಿತ್ತಾಡಿದ್ದಾರೆ.
ಪರ್ವಿನ್ ಎಂಬ ಮಹಿಳೆ ಹೊಯ್ಸಳ ವಾಹನ ಸಿಬ್ಬಂದಿಗೆ ಕರೆ ಮಾಡಿದ್ದು, ‘ ಸರ್ ನನ್ನ ಜಾಗದಲ್ಲಿ ಕೂತು ಆಕೆ ಭಿಕ್ಷೆ ಬೇಡುತ್ತಿದ್ದಾಳೆ,ನಾನು ಕೂತರೆ ಅವರ ಕಡೆಯವರನ್ನು ಕರೆಸಿ ಹೊಡೆಸುತ್ತಾರೆ…ನ್ಯಾಯ ಕೊಡಿಸಿ’ ಎಂದು ಕರೆ ಮಾಡಿದ್ದಾಳೆ.
ಮಹಿಳೆ ಮನವಿಗೆ ಸ್ಪಂದಿಸಿದ ಸಿಬ್ಬಂದಿ ಆಕೆಗೆ ಒಂದುವಾರ ನಿನಗೆ ಒಂದು ವಾರ ಕೂತು ಭಿಕ್ಷೆ ಬೇಡಲು ಅವಕಾಶ ಮಾಡಿಕೊಡುತ್ತೇವೆ ಎಂದು ಸಮಾಧಾನ ಪಡಿಸಿ ಜಗಳಕ್ಕೆ ಅಂತ್ಯ ಹಾಡಿದ್ದಾರೆ. ಬೆಂಗಳೂರಿನಂತಹ ಬ್ಯೂಸಿ ನಗರದಲ್ಲಿ ಅಪರಾಧ ಕೃತ್ಯ, ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಪೊಲೀಸರು ಈ ಕೆಲಸವನ್ನೂ ಮಾಡಬೇಕಿದೆ. ಆದರೂ ಸಿಬ್ಬಂದಿಗಳ ತಾಳ್ಮೆಗೆ ಮೆಚ್ಚಲೇಬೇಕು.
Fast9 Latest Kannada News