ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯಿಂದ ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ನಿಡುವ ಗುರಿ
ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಾರೂಗೇರಿ ಕ್ರಾಸದಲ್ಲಿರುವ ಶ್ರೀ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಶ್ರೀಎಸ್ಎಮ್ ನಾರಗೊಂಡ ಇಂಟರ್‌ನ್ಯಾಶನಲ್ ಸ್ಕೂಲ್ ಹಾರೂಗೇರಿ (ಕ್ರಾಸ್)
ಸಿ.ಬಿ.ಎಸ್.ಇ ಯಿಂದ ಅನುಮತಿ ಪಡೆದುಕೊಂಡಿದೆಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವಿವೇಕ ನಾರಗೊಂಡ ಹೇಳಿದರು.
ಅದಲ್ಲದೆ ಈ ಶಾಲೆಯು 2019ರಲ್ಲಿ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಅನುಮತಿಯಿಂದ ಶಾಲೆಯನ್ನು ಪ್ರಾರಂಭಿಸಿದ್ದು,
2020-21 ನೇ ಸಾಲಿಗೆ ಸಿ.ಬಿ.ಎಸ್.ಇ ಅನುಮತಿ ದೊರೆತಿದೆ.
ಈಗಾಗಲೇ ಈ ಶಾಲೆಯಲ್ಲಿ 500 ಕ್ಕೂ ಬಡ
ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಈ ಸಂಸ್ಥೆಗೆ 1ರಿಂದ10 ನೇ ತರಗತಿವರೆಗೆ ಸಿ.ಬಿ.ಎಸ್.ಇ ಯಿಂದ ಶಾಲೆ ನಡೆಸಲು ಅನುಮತಿ ದೊರೆತಿರುವುದು ಗ್ರಾಮೀಣ
ಭಾಗದ ವಿದ್ಯಾರ್ಥಿಗಳಿಗೆ ಉತ್ತಮ, ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮತ್ತಷ್ಟು
ಅನೂಕೂಲಕರವಾಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿವೇಕ ಎಸ್ ನಾರಗೊಂಡ
ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇದೆ ಸಂದರ್ಭದಲ್ಲಿ ಶಿಕ್ಷ ಸಂಸ್ಥೆಯ ಉಪಾಧ್ಯಕ್ಷರಾದ ಡಾ ಗೀರಿಶ ನಾರಗೊಂಡ ಅವರು ಮಾತನಾಡಿ ಗ್ರಾಮೀಣ ಮಕ್ಕಳ ಬವಿಷ್ಯಕ್ಕಾಗಿ ಪಾಲಕರು ಶಿಕ್ಷಣಕ್ಕಾಗಿ ದೂರದ ನಗರಗಳಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿರುವದರಿಂದ
ತಂದೆ ತಾಯಿಗಳ ಪ್ರೀತಿಯಿಂದ ವಂಚಿತರಾಗುತ್ತಿದ್ದಾರೆ. ಮಕ್ಕಳಿಗೆ
ಮೌಲ್ಯಯುತ, ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ನಮ್ಮ ಶಾಲೆ ಹೆಜ್ಜೆ ಹಾಕುತ್ತಿದೆ,ಅದಕ್ಕಾಗಿ
ಪಾಲಕರು ಅದರ ಸದುಪಯೋಗ ಪಡೆದುಕೊಳ್ಳಿಬೇಕಾಗಿದೆ ಎಂದರು. ಸಿ.ಬಿ.ಎಸ್.ಇ ಯಿಂದ ಅನುಮತಿ
ದೊರೆತಿರುವುದರಿಂದ ಶ್ರೀ ಮಲ್ಲಿಕಾರ್ಜುನ್ ಫೌಂಡೇಶನ್‌ನ ಆಡಳಿತ ಮಂಡಳಿಯ ಸದಸ್ಯರು,
ಪ್ರಾಚಾರ್ಯರು ಹಾಗೂ ಶಾಲೆಯ ಶಿಕ್ಷಕ ಸಿಬ್ಬಂದಿಯವರು ಸಂತಸ ವ್ಯಕ್ತ ಪಡೆಸಿದರು.
ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಹಾಗೂ ಮಾಜಿ ಜಿಲ್ಲಾ ಪಂಚಾಯತ ಆರೋಗ್ಯ ಮತ್ತು ಶಿಕ್ಷಣ ಸ್ಥಾಹಿ ಸಮೀತ ಅಧ್ಯಕ್ಷರಾದ
ಶ್ರೀಶೈಲ ಮಲ್ಲಪ್ಪ ನಾರಗೊಂಡ. ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರು.ಹಾಗೂ ಸಿಬ್ಬಂಧಿಗಳು ಉಪಸ್ಥಿತರಿದ್ದರು.