Breaking News

ವಿದ್ಯಾರ್ಥಿಗಳು ಸುಸಂಸ್ಕೃತ ನಾಗರಿಕರಾಗಬೇಕೆಂಬುದು ಶಾಸಕ ರಮೇಶ ಜಾರಕಿಹೋಳಿಯವರ ಕನಸು : ಜಿ,ಬಿ, ಬಳಿಗಾರ

Spread the love

ವಿದ್ಯಾರ್ಥಿಗಳು ಸುಸಂಸ್ಕೃತ ನಾಗರಿಕರಾಗಬೇಕೆಂಬುದು ಶಾಸಕ ರಮೇಶ ಜಾರಕಿಹೋಳಿಯವರ ಕನಸು : ಜಿ,ಬಿ, ಬಳಿಗಾರ

ಸ್ಕೌಟ್ಸ್‌ ಮತ್ತು ಗೈಡ್ಸ್‌ಗಳು ಸನ್ನಡತೆ, ಶಿಸ್ತು ಮತ್ತು ಸೇವಾ ಮನೋಭಾವದಂಥ ಶಿಕ್ಷ ಣ ಪಡೆದು ಭಾರತೀಯ ಸಂಪನ್ಮೂಲ ವ್ಯಕ್ತಿಗಳಾಗಿ ಹೊರಹೊಮ್ಮುತ್ತಿರುವುದು ಹೆಮ್ಮೆಯ ವಿಚಾರ ಎಂದು ಗೋಕಾಕದ ಸಮುದಾಯ ಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗೋಕಾಕ ,ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆ ಗೋಕಾಕ ಇವರು ಎರ್ಪಡಿಸಿದ್ದ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ತೆರಳಲಿರುವ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ,ಶಿಕ್ಷಕರುಗಳಿಗೆ ಬಿಳ್ಕೋಡುವ ಸಮಾರಂಭ ಮತ್ತು ಶುಭ ಹಾರೈಕೆ ಕಾರ್ಯಕ್ರಮದಲ್ಲಿ ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲರು ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ,ಬಿ,ಬಳಿಗಾರ ಇವರು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ ದೇಶದ ಸಂಸ್ಕೃತಿಯನ್ನು ಅರಿಯುವದರ ಜೊತೆಯಲ್ಲಿ ವಿಶ್ವದಲ್ಲಿರುವ ಹಲವಾರು ದೇಶಗಳ ಸಂಸ್ಕೃತಿಯನ್ನು ಅರಿಯುವದರ ಜೊತೆಯಲ್ಲಿ ಅನೇಕ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಲೆಂದು ಮೂಡಬೀದರಿಯಲ್ಲಿ ಪಾಲ್ಗೊಳ್ಳಲಿಕ್ಕೆ ತೆರಳುವ 538 ವಿದ್ಯಾರ್ಥಿಗಳಿಗೆ ಶುಭ ಹಾರೈಸುವದರೊಂದಿಗೆ ವಿಶೇಷವಾಗಿ ಕಾಳಜಿ ವಹಿಸಿ ಉಚಿತವಾಗಿ ಸಾರಿಗೆ ವ್ಯವಸ್ಥೆ ಮಾಡಿದ ಶಾಸಕ ರಮೇಶ ಜಾರಕಿಹೋಳಿ ಮತ್ತು ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ ಇವರಿಗೆ ಶಿಕ್ಷಣ ಇಲಾಖೆ,ಸ್ಕೌಟ್ಸ್ ಮತ್ರು ಗೈಡ್ಸ್ ವಿದ್ಯಾರ್ಥಿಗಳ ಹಾಗೂ ಪಾಲಕರ ಪರವಾಗಿ ನಮನಗಳನ್ನು ಸಲ್ಲಿಸಿದರು.ಅದರ ಜೊತೆಯಲ್ಲಿ

ವಿದ್ಯಾರ್ಥಿಗಳು ಸದ್ಭಾವನೆ, ಶಿಸ್ತು, ಪ್ರೀತಿ ಮತ್ತು ಸೇವಾ ಮನೋಭಾವನೆ ನೀಡಿದ್ದಲ್ಲಿ ವಿದ್ಯಾರ್ಥಿಗಳು ಸುಸಂಸ್ಕೃತ ನಾಗರಿಕರಾಗಬೇಕೆಂಬುದು ಶಾಸಕ ರಮೇಶ ಜಾರಕಿಹೋಳಿಯವರ ಕನಸಾಗಿದೆ ಎಂದು ಹೇಳುತ್ತಾ ಸದ್ಗುಣ ಮತ್ತು ಶಿಸ್ತಿನ ತರಬೇತಿ ಪಡೆದು ಭಾರತದ ಆಸ್ತಿಯಾಗಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮಕ್ಕಳು ಹೊರಹೊಮ್ಮುತ್ತಿರುವುದು ಸಂತಸದ ವಿಷಯವೆಂದರು.

ಈ ಸಮಾರಂಭದಲ್ಲಿ ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ಆಯ್ಕೆಯಾದ ಮಕ್ಕಳಿಗೆ ಸನ್ಮಾನಿಸಿ ಎಲ್ಲ ಸ್ಕೌಟರ್‌, ಗೈಡರ್ಸಗಳಿಗೆ ಸ್ಕೌಟ್ಸ್‌ ಗೈಡ್ಸ್‌ನ ಪ್ರತಿಜ್ಞಾನ ವಿಧಿ ಬೋಧಿಸಲಾಯಿತು.
ಇನ್ನು ಈ ಸಮಾರಂಭದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಚಾಲಕರಾದ,ಡಿ,ಬಿ, ಅತ್ತಾರ,ಗೋಕಾಕ ತಾಲೂಕಾ ದೈಹಿಕ ಪರಿವಿಕ್ಷಕರಾದ ಎ,ಕೆ ತೊರನಗಟ್ಟಿ,ಕಾರ್ಯದರ್ಶಿಗಳಾದ ,ಲಗಮಣ್ಣ ,ಲಗಮನ್ನವರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.


Spread the love

About Fast9 News

Check Also

ಕನಕದಾಸರ ೫೩೭ ನೇ ಜಯಂತಿಗೆ ಶುಭ ಕೋರಿದ ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.*

Spread the love*ಕನಕದಾಸರ ೫೩೭ ನೇ ಜಯಂತಿಗೆ ಶುಭ ಕೋರಿದ ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.* ಗೋಕಾಕ- ನಾಡಿನಾದ್ಯಂತ …

Leave a Reply

Your email address will not be published. Required fields are marked *