Breaking News

ಮೆ 2 ರಂದು ರಂಜಾನ್ ಆಚರಣೆ,ಸರಕಾರದಿಂದ ರಜೆ ಘೋಷಣೆ

Spread the love

ಮೆ 2 ರಂದು ರಂಜಾನ್ ಆಚರಣೆ,ಸರಕಾರದಿಂದ ರಜೆ ಘೋಷಣೆ

ಬೆಂಗಳೂರು: ರಾಜ್ಯ ಸರ್ಕಾರದಿಂದ ರಂಜಾನ್ ರಜೆಯನ್ನು ದಿನಾಂಕ 03-05-2022ರಂದು ನಿಗದಿ ಪಡಿಸಿ ಘೋಷಣೆ ಮಾಡಿತ್ತು. ಆದ್ರೇ.. ಮೂನ್ ಕಮಿಟಿ ತೀರ್ಮಾನದಿಂದಾಗಿ ಇದೀಗ ದಿನಾಂಕ 02-05-2022ರಂದು ಬದಲಾವಣೆ ಮಾಡಿ ಮರು ನಿಗದಿಪಡಿಸಿ, ಸಾರ್ವತ್ರಿಕ ರಜೆಯಾಗಿ ಘೋಷಿಸಿದೆ.

ಈ ಕುರಿತಂತೆ ರಾಜ್ಯ ಸರ್ಕಾರದ ಶಿಷ್ಟಾಚಾರದ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, 2022ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ದಿನಾಂಕ 03-05-2022ರಂದು ಖುತುಬ್ ಎ ರಂಜಾನ್ ಹಬ್ಬದ ಪ್ರಯುಕ್ತ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿತ್ತು.

ಆದ್ರೇ.. ಖುತುಬ್ ಎ ರಂಜಾನ್ ಹಬ್ಬವನ್ನು ದಿನಾಂಕ 02-05-2022ರಂದು ಆಚರಿಸಲು ಮೂನ್ ಕಮಿಟಿಯು ತೀರ್ಮಾನಿಸಿರುವುದರಿಂದ, ದಿನಾಂಕ 02-05-2022ರಂದು ಸಾರ್ವತ್ರಿಕ ರಜೆಯನ್ನು ಮಂಜೂರು ಮಾಡಿ ಆದೇಶಿಸಿದ್ದಾರೆ.


Spread the love

About Fast9 News

Check Also

ಶುಗರ್ ಪ್ಯಾಕ್ಟರಿ ಮಶೀನರ ಸಾಮಾನುಗಳ ಕಳ್ಳರ ಬಂಧನ ಪೋಲಿಸರಿಗೆ ಶ್ಲ್ಯಾಘನೆ

Spread the loveಶುಗರ್ ಪ್ಯಾಕ್ಟರಿ ಮಶೀನರ ಸಾಮಾನುಗಳ ಕಳ್ಳರ ಬಂಧನ ಪೋಲಿಸರಿಗೆ ಶ್ಲ್ಯಾಘನೆ ಗೋಕಾಕ ಶುಗರ್ ಲಿಮಿಟೆಡ್ ಕೊಳವಿ ಪ್ಯಾಕ್ಟರಿಯ …

Leave a Reply

Your email address will not be published. Required fields are marked *