Breaking News

ಅಪಘಾತಗಳಿಗೆ ಮಾನವ ಲೋಪವೇ ಕಾರಣ ಎಂಬುದರಲ್ಲಿ ಅನುಮಾನ ಇಲ್ಲ : CPI ಗೋಪಾಲ ರಾಥೋಡ

Spread the love

ಅಪಘಾತಗಳಿಗೆ ಮಾನವ ಲೋಪವೇ ಕಾರಣ ಎಂಬುದರಲ್ಲಿ ಅನುಮಾನ ಇಲ್ಲ : CPI ಗೋಪಾಲ ರಾಥೋಡ

ಗೋಕಾಕ : ವಾಹನ ಮಾಲೀಕರು ಹಾಗೂ ಚಾಲಕರು ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮ ಪಾಲಿಸಬೇಕು ಯಾಕೆಂದರೆ ಬಹುತೇಕ ಅಪಘಾತಗಳಿಗೆ ಮಾನವ ಲೋಪವೇ ಕಾರಣ ಎಂಬುದರಲ್ಲಿ ಅನುಮಾನ ಇಲ್ಲ
ಎಂದು ಗೋಕಾಕದಲ್ಲಿ ಬೆಳಗಾವಿ ಜಿಲ್ಲಾ ಪೋಲಿಸ್ ಹಾಗೂ ಗೋಕಾಕ‌ ಶಹರ ಪೋಲಿಸ್ ಠಾಣೆಯ ಸಂಯುಕ್ತಾಶ್ರಯದಲ್ಲಿ ಸಿಪಿಐ ಗೋಪಾಲ ರಾಠೋಡ ಇವರ ನೇತೃತ್ವದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ನಡೆಸಲಾಯಿತು.

ಗೋಕಾಕದ ನಗರದ ಆಟೋ ನಿಲ್ದಾಣಗಳಲ್ಲಿ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಿಪಿಆಯ್ ಗೋಪಾಲ ರಾಥೋಡ ಇವರು ಮಾತನಾಡಿ ಅತಿ ವೇಗದ ಚಾಲನೆ, ಕುಡಿದು ವಾಹನ ಓಡಿಸುವುದು, ಸಮರ್ಪಕ ತರಬೇತಿ ಕೊರತೆ, ಸೀಟ್‌ ಬೆಲ್ಟ್‌ ಬಳಸದೇ ಇರುವುದು, ದ್ವಿಚಕ್ರ ವಾಹನಗಳಾದರೆ ಹೆಲ್ಮೆಟ್‌ ಧರಿಸದೇ ಇರುವುದು, ವಾಹನಗಳ ದುಃಸ್ಥಿತಿ, ರಸ್ತೆ ಮೇಲೆ ಉಡಾಫೆ ಪ್ರವೃತ್ತಿ ಹೀಗೆ ಹತ್ತು ಹಲವು ಕಾರಣಗಳಿವೆ ಅದರ ಜೊತೆಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸುತ್ತಿರುವದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುವುದಕ್ಕೆ ಮುಖ್ಯ ಕಾರಣವಾಗಿದೆ,

ಅದಕ್ಕಾಗಿ ಪಾಲಕರು ತಮ್ಮ ಅಪ್ರಾಪ್ತ ಮಕ್ಕಳಿಗೆ ವಾಹನ ನೀಡುವುದು, ಚಾಲನಾ ಪರವಾನಗಿ ಇಲ್ಲದೆ ಚಾಲನೆ ಮಾಡುವುದು ಅದರ ಜೊತೆಯಲ್ಲಿ ಚಾಲನಾ ಪರವಾನಿಗೆ ಇಲ್ಲದಂತಹ ವ್ಯಕ್ತಿಗಳಿಗೆ,ಗೆಳೆಯರಿಗೆ ನೀಡುವುದು ತಪ್ಪು, ಚಾಲನೆ ಮಾಡುವಾಗ ಅಪಘಾತವಾದಲ್ಲಿ ಮಾಲಿಕರ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ,
ಎಲ್ಲರೂ ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ತಿಳಿಸುವುದರ ಮೂಲಕ ವಾಹನ ಚಾಲಕರಿಗೆ ರಸ್ತೆ ನಿಯಮ ಪಾಲಿಸುವ ಬಗ್ಗೆ ತಿಳಿಸಿ,ಅದರ ಜೊತೆಯಲ್ಲಿ ಮದ್ಯ ಸೇವನೆ ಮಾಡಿ ವಾಹನ ಚಲಾವಣೆ ಮಾಡುವುದು ಮಹಾ ಅಪರಾದ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ನಗರ ಠಾಣೆಯ ಪಿಎಸ್ಐ ಎಂ ಡಿ ಘೋರಿ ಹಾಗೂ ಸಿಬ್ಬಂದಿಗಳು, ಆಟೋ ಚಾಲಕರು , ಮಿನಿ ಬಸ್ ಚಾಲಕರು , ಮಾಲಿಕರು ಬಾಗಿಯಾಗಿದ್ದರು.


Spread the love

About Fast9 News

Check Also

ಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ

Spread the loveಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ ಗೋಕಾಕ- ಹಿಂದುಳಿದ ಹಣಬರ ಸಮಾಜವು ಸಾಮಾಜಿಕವಾಗಿ, …

Leave a Reply

Your email address will not be published. Required fields are marked *