Breaking News

ನ್ಯಾ.ಜೆ.ಸದಾಶಿವ ವರದಿ ಜಾರಿ ಮಾಡದಂತೆ ವಡ್ಡರ ಸಮುದಾಯದಿಂದ ಒತ್ತಾಯ.

Spread the love

ನ್ಯಾ.ಜೆ.ಸದಾಶಿವ ವರದಿ ಜಾರಿ ಮಾಡದಂತೆ ವಡ್ಡರ ಸಮುದಾಯದಿಂದ ಒತ್ತಾಯ.

ಗೋ ಒಳಮೀಸಲಾತಿ ಸಂಬಂಧ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ನೀಡಿರುವ ವರದಿಯನ್ನು ಜಾರಿಮಾಡದಂತೆ ಆಗ್ರಹಿಸಿ ಗೋಕಾಕ ತಾಲೂಕಾ ವಡ್ಡರ ,ಬಜಂತ್ರಿ,ಕೊರಮ ಹಾಗೂ ಲಮಾಣಿ ಸಮುದಾಯದ ನೇತೃತ್ವದಲ್ಲಿ ಪತ್ರಿಕಾಗೋಷ್ಟಿ ನಡೆಸಿ
ಕೊರಚ, ಕೊರಮ, ಲಂಬಾಣಿ, ಭೋವಿ ಸಮುದಾಯಗಳಿಗೆ ಒಳಮೀಸಲಾತಿ ಜಾರಿ ಮಾಡುವ ಮೂಲಕ ಅನ್ಯಾಯ ಮಾಡಬಾರದು ಎಂದು ಸಮುದಾಯದ ಮುಖಂಡರ ಮಡ್ಡೆಪ್ಪ ಬಜಂತ್ರಿ ಆಗ್ರಹಿಸಿದರು.

ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಆಧಾರವಾಗಿಟ್ಟುಕೊಂಡು ಪರಿಶಿಷ್ಟ ಜಾತಿಗಳನ್ನು ಒಳಮೀಸಲಾತಿ ಹೆಸರಿನಲ್ಲಿ ವರ್ಗೀಕರಿಸಬಾರದು. ಸಾರ್ವಜನಿಕ ಚರ್ಚೆಗೆ ಒಳಪಡಿಸದೇ ಸಂಪುಟ ಉಪ ಸಮಿತಿಯು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬಾರದೆಂದು ಹಾಗೂ ಗೊಂದಲ, ಅಸ್ಪಷ್ಟತೆ, ಅವೈಜ್ಞಾನಿಕ, ಅಸಂವಿಧಾನಿಕ ಅಂಶಗಳನ್ನು ಒಳಗೊಂಡ ವರದಿಯನ್ನು ಜಾರಿಮಾಡದಂತೆ ಒತ್ತಾಯಿಸಿದರು

ಈ ಬೇಡಿಕೆ ಕುರಿತು ಸರ್ಕಾರದ ಮೇಲೆ ಒತ್ತಡ ಹೇರಲು ಜ.10ಕ್ಕೆ ಬೆಂಗಳೂರಿಗೆ ಗೋಕಾಕ ಹಾಗೂ ಮೂಡಲಗಿ ತಾಲೂಕಗಳಿಮದ ಹತ್ತು ಸಾವಿರ ಜನರನ್ನು ಪ್ರತಿಭಟನೆ ನಡೆಸಲು ಭೋವಿ ಸಮಾಜದವರು ತೆರಳುತ್ತೇವೆಂದರು.

ಈ ಸಂದರ್ಬದಲ್ಲಿ ಜಿಲ್ಲಾ ಅದ್ಯಕ್ಷರಾದ ಲಕ್ಷ್ಮಣ ಗಾಡಿವಡ್ಡರ, ಅಶೋಕ ಬಜಂತ್ರಿ, ವಡ್ಡರ,ಬರಮು ಗಾಡಿವಡ್ಡರ, ಶೆಟ್ಟೆಪ್ಪಾ ಗಾಡಿವಡ್ಡರ, ಹಣಮಂತ ಮಣವಡ್ಡರ, ಭೀಮಶಿ ಪಾತ್ರೂಟ,ಅಶೋಕ‌ಬಂಡಿವಡ್ಡರ.ಪವನ‌ ಮಹಾಲಿಂಗಪೂರ,ಪರಶುರಾಮ ಗಾಡಿವಡ್ಡರ ಹಾಗೂ
ಕೊರಮ,ಕೊಂಚರ, ಸಮಾಜದ ಹಿರಿಯರು ಹಾಗೂ ಮುಖಂಡರು ಬಾಗಿಯಾಗಿದ್ದರು.


Spread the love

About Fast9 News

Check Also

ಕೊಣ್ಣೂರ ಚೆಕ್‌ ಪೊಸ್ಟಿಗೆ ತಹಸಿಲ್ದಾರ ದಿಢೀರ ಬೇಟಿ,ಪರಿಶೀಲನೆ.

Spread the loveಕೊಣ್ಣೂರ ಚೆಕ್‌ ಪೊಸ್ಟಿಗೆ ತಹಸಿಲ್ದಾರ ದಿಢೀರ ಬೇಟಿ,ಪರಿಶೀಲನೆ. ಗೋಕಾಕ : ಬೆಳಗಾವಿ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಕೊಣ್ಣೂರ …

Leave a Reply

Your email address will not be published. Required fields are marked *